ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಮ್ಯಾಕ್ಸ್ ಸಿನಿಮಾ ಟ್ರೆಂಡ್ ಆಗಿದ್ದೇಕೆ??

Published on

685 Views

ಸ್ಯಾಂಡಲ್’ವುಡ್ ನ ಬಾದ್’ಷಾ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ “ಮ್ಯಾಕ್ಸ್” ಸಿನಿಮಾದ ಚಿತ್ರಿಕರಣವು ಇಂದು ಮುಕ್ತಾಯಗೊಂಡಿದೆ.

ಕಿಚ್ಚ ನಟನೆಯ ಈ ಬಹುನಿರೀಕ್ಷಿತ “ಮ್ಯಾಕ್ಸ್” ಸಿನಿಮಾದ ಚಿತ್ರೀಕರಣವು ಬರೋಬ್ಬರಿ 10 ತಿಂಗಳು ನಡೆದಿದ್ದು, ಇಂದು ಮುಕ್ತಾಯಗೊಂಡಿದೆ. ಈ ಚಿತ್ರದಲ್ಲಿ ಸುದೀಪ್ ಇನ್’ಸ್ಪೆಕ್ಟರ್ ಅರ್ಜುನ್ ಮಹಾಕ್ಷಯ್ ಪಾತ್ರದಲ್ಲಿ ನಟಿಸಿದ್ದಾರೆ.

 

ಇದೀಗ ಕಿಚ್ಚ ಸುದೀಪ್ ಮ್ಯಾಕ್ಸ್ ಸಿನಿಮಾದ ಕುರಿತು ತಮ್ಮ ಸೋಷಿಯಲ್ ಮೀಡಿಯಾದಲ್ಲಿ 10 ತಿಂಗಳ ನಂತರ ಶೂಟಿಂಗ್ ಮುಕ್ತಾಯಗೊಂಡಿರುವ ಬಗೆ ಹಂಚಿಕೊಂಡಿದ್ದಾರೆ ಹಾಗೂ ಸಿನಿಮಾದ ಪ್ರಯಾಣದ ಬಗ್ಗೆ ಒಂದು ಸಣ್ಣ ವೀಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ. ಇದು ಟ್ವಿಟ್ಟರ್ ನಲ್ಲಿ ಟ್ರೆಡಿಂಗ್ ಆಗಿದೆ.

ಇದರಿಂದ ಕಿಚ್ಚನ ಅಭಿಮಾನಿಗಳಲ್ಲಿ ಇನ್ನೂ ಕಾತರ ಹೆಚ್ಚಾಗಿದ್ದು, ಬಿಡುಗಡೆಯ ದಿನಾಂಕವನ್ನು ಅದಷ್ಟು ಬೇಗ ಪ್ರಕಟಿಸುವಂತೆ ಕಿಚ್ಚನ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ ಹಾಗೂ ಚಿತ್ರದ ಬಗ್ಗೆ ಮತ್ತಷ್ಟು ಅಪಡೇಟ್ ಕೊಡುವಂತೆ ತಿಳಿಸಿದ್ದಾರೆ.

ಚಲನಚಿತ್ರಗಳ ಕುರಿತಾದ ಯಾವುದೇ ಹೆ‍ಚ್ಚಿನ ಅಪ್’ಡೇಟ್ಸ್ ಗಾಗಿ flixoye.com ಗೆ ಭೇಟಿ ನೀಡಿ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com