ತೆಲುಗು ಬಿಗ್ ಬಾಸ್ ಶೋ ವೇದಿಕೆಯಲ್ಲಿ‌ ಕನ್ನಡ ಮಾತನಾಡಿದ ಕಿಚ್ಚ ಸುದೀಪ್

Published on

508 Views

ಕಿಚ್ಚ ಸುದೀಪ್ ತೆಲುಗು ಸ್ಟಾರ್ ನಾಗಾರ್ಜುನ ಅವರ ಜೊತೆಗಿರುವ ಪೋಟೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸುದೀಪ್ ರವರು ತೆಲುಗು ಬಿಗ್ ಬಾಸ್ ಶೋನಲ್ಲಿ ಭಾಗವಹಿಸಿದ್ದು, ತೆಲುಗು ಬಿಗ್ ಬಾಸ್ ಶೋ ನಲ್ಲಿ ನಿರೂಪಣೆ ‌ಮಾಡಿ ವೇದಿಕೆ ಮೇಲೆ ಕನ್ನಡದಲ್ಲಿ ಮಾತನಾಡಿದ್ದಾರೆ.

ಕನ್ನಡ ಬಿಗ್ ಬಾಸ್ ಶೋ ಇನ್ನು ಜನವರಿಯಲ್ಲಿ ಪ್ರಾರಂಭವಾಗಲಿದ್ದು, ತೆಲುಗು ಬಿಗ್ ಬಾಸ್ ಶೋ ವೇದಿಕೆಯಲ್ಲಿ ನೋಡಿ ಖುಷಿಪಟ್ಟಿದ್ದಾರೆ ಕಿಚ್ಚನ ಅಭಿಮಾನಿಗಳು. ಸುದೀಪ್ ಅವರ ನಿರೂಪಣೆಯ ಎಪಿಸೋಡ್ ಈಗಾಗಲೇ ಚಿತ್ರೀಕರಣವಾಗಿದ್ದು, ಶೋನ ಪ್ರೋಮೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪೈಲ್ವಾನ್ ಹಾಡಿನೊಂದಿಗೆ, ಕಪ್ಪು ಬಣ್ಣದ ಉಡುಗೆ ತೊಟ್ಟು ಸುದೀಪ್ ಶೋಗೆ ಎಂಟ್ರಿ ಕೊಟ್ಟು, ಬಿಗ್ ಬಾಸ್ ಸ್ಪರ್ಧಿಗಳ ಜೊತೆ ತಮಾಷೆಯಾಗಿ ಮಾತನಾಡುತ್ತ, ನಾಗಾರ್ಜುನ ಜೊತೆ ಶೋ ನಿರೂಪಣೆ ಮಾಡಿದ್ದಾರೆ. ಸುದೀಪ್ ಅನೂಪ್ ಭಂಡಾರಿ ನಿರ್ದೇಶನದ ‘ಫ್ಯಾಂಟಮ್’ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಚಿತ್ರದ 60% ರಷ್ಟು ಚಿತ್ರೀಕರಣ ಮುಗಿಸಿದೆ. ಸುದೀಪ್ ಅಭಿಮಾನಿಗಳು ಬಹು ನಿರೀಕ್ಷಿತ ‘ಫ್ಯಾಂಟಮ್’ ಚಿತ್ರದ ನಿರೀಕ್ಷೆಯಲ್ಲಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com