ಜ್ಯೋತಿಷಿ ಗೆಟಪ್ ನಲ್ಲಿ ಕಿಚ್ಚ ಸುದೀಪ್

Published on

526 Views

ಕನ್ನಡ ಬಿಗ್ ಬಾಸ್ ಸೀಜನ್ 8 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಅದರೆ ಬಿಗ್ ಬಾಸ್ ಮನೆಯೊಳಗೆ ಯಾರೆಲ್ಲಾ ಇರಲಿದ್ದಾರೆ ಎಂಬ ಚರ್ಚೆಗಳು ಮಾತ್ರ ಜೋರಾಗಿದೆ. ಕೊರೋನಾ ಸಮಸ್ಯೆಯಿಂದಾಗಿ ಅಕ್ಟೋಬರ್ ನಲ್ಲಿ ಪ್ರಾರಂಭವಾಗಬೇಕಿದ್ದ ಬಿಗ್ ಬಾಸ್ ಮುಂದೂಡಲಾಗಿತ್ತು. ಈಗ ಇನ್ನೇನೂ ಸದ್ಯದಲ್ಲಿ ಬಿಗ್ ಬಾಸ್ ಆರಂಭವಾಗಲಿದೆ.

ಈ ಬಾರಿ ಮನೆಯೊಳಗೆ ಹೋಗುವ ಅಭ್ಯರ್ಥಿಗಳಿಗೆ ಕೊರೋನಾ ಟೆಸ್ಟ್ ಕಡ್ಡಾಯವಾಗಿದೆ. ಇಂದು ಕಲರ್ಸ್ ಕನ್ನಡ ವಾಹಿನಿಯವರು ಸಾಮಾಜಿಕ ಜಾಲತಾಣದಲ್ಲಿ ಫೇಸ್ ಬುಕ್ ನಲ್ಲಿ ಹೊಸ ಪೋಸ್ಟ್ ನ್ನು ಹಾಕಿದ್ದು, ಇದರಲ್ಲಿ ಸುದೀಪ್ ತುಂಬಾನೇ ಭಿನ್ನ‌ಲುಕ್ ನಲ್ಲಿ‌ ಕಾಣಿಸಿಕೊಂಡಿದ್ದಾರೆ. ಕೆಂಪು ಬಣ್ಣದ ಬಟ್ಟೆ ತೊಟ್ಟು, ತಲೆಗೆ ಪೇಟ ಸುತ್ತಿದ್ದಾರೆ ಹಣೆಯಲ್ಲಿ ದೊಡ್ಡ ತಿಲಕವಿದೆ. ಕೊರಳಲ್ಲಿ ಸರಗಳಿವೆ. ಸುದೀಪ್ ರವರು ಜ್ಯೋತಿಷಿ ಗೆಟಪ್ ನಲ್ಲಿ ಕಾಣಿಸಿಕೊಂಡಿದು. ಇದು‌ ಇನ್ನಷ್ಟು‌ ಕುತೂಹಲ‌ ಮೂಡಿಸಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com