ನಾಳೆ ‘ಕೆಜಿಎಫ್’ ರಿಲೀಸ್ …!!!

Published on

435 Views

70 ಕೋಟಿ ವೆಚ್ಚದಲ್ಲಿ ತಯಾರಾದ ಚಿತ್ರ ‘ಕೆಜಿಎಫ್’ ಬೇರೆ ಭಾಷೆಗಳಲ್ಲೂ ಬಿಡುಗಡೆ ಯಾಗಲು ತಯಾರಾಗಿ, ಈಗಾಗಲೇ ಸಾಕಷ್ಟು ದಾಖಲೆ ಮಾಡಿದ ‘ಕೆಜಿಎಫ್’ಗೆ ದೊಡ್ಡ ಸಂಕಟವೊಂದು ಎದುರಾಗಿತ್ತು. ವೆಂಕಟೇಶ್ ಎಂಬುವರು ‘ಕೆಜಿಎಫ್’ ಚಿತ್ರಕ್ಕೆ ಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದರು. ಇದರಿಂದ ಸಿಟ್ಟಿಗೆದ್ದ ಅಭಿಮಾನಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ. ಅದ್ರೆ ಈಗ ಬಂದಿರುವ ಮಾಹಿತಿಯ ಪ್ರಕಾರ ಚಿತ್ರ ನಿರ್ಮಾಪಕ ‘ಇದು‌ ಯಾರಿಗೂ ಸಂಬಂಧ ಪಟ್ಟ ಸಿನಿಮಾವಲ್ಲ. ತಪ್ಪು ವದಂತಿಗಳಿಗೆ ಕಿವಿಗೊಡಬೇಡಿ. ಸಿನಿಮಾ ಎಲ್ಲಕಡೆ ಎಂದಿನಂತೆ ಬಿಡುಗಡೆ ಯಾಗಲಿದೆ. ಯಾರು‌ ಟಿಕೇಟ್ ಮಾಡಿದ್ದೀರಿ ಎಲ್ಲರೂ‌ ಥಿಯೇಟರ್ ಗೆ ಹೋಗಿ ಸಿನಿಮಾ ನೋಡಿ’ ಎಂದು ಹೇಳಿದ್ದಾರೆ. ಯಶ್ ಫೇಸ್ ಬುಕ್ ಲೈವ್ ನಲ್ಲಿ‌ ಅಭಿಮಾನಿಗಳಿಗೆ ನಿಮ್ಮ ಹತ್ತಿರದ ಸಿನಿಮಾ ಥಿಯೇಟರ್ ಗೆ ಹೋಗಿ ಸಿನಿಮಾ ನೋಡಿ. ‘ಕೆಜಿಎಫ್’ ನಾಳೆ ಎಲ್ಲ ಕಡೆ ಬಿಡುಗಡೆಯಾಗಲಿದೆ. ಎಂದು ಭರವಸೆ ಕೊಟ್ಟಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com