ಕೆಜಿಎಫ್ ಟೈಮ್ಸ್ ಪತ್ರಿಕೆ ಬಿಡುಗಡೆ ಮಾಡಿದ ಕೆಜಿಎಫ್ ಚಿತ್ರತಂಡ
ಕೆಜಿಎಫ್-2 ಚಿತ್ರತಂಡ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದು, ಪ್ರೇಕ್ಷಕರು ಚಿತ್ರ ಬಿಡುಗಡೆಯನ್ನು ಕಾಯುತ್ತಿದ್ದು, ಇಂದು ಯಶ್ ಹೊಸ ಲುಕ್ ನ್ನು ಬಿಡುಗಡೆ ಮಾಡಿದ್ದ ಚಿತ್ರತಂಡ ಈಗ ಕೆಜಿಎಫ್ ಟೈಮ್ಸ್ ಪತ್ರಿಕೆ ಬಿಡುಗಡೆ ಮಾಡಿ ಇನ್ನಷ್ಟು ಕುತೂಹಲವನ್ನು ಹೆಚ್ಚಿಸಿದೆ.
ಹಳೆಕಾಲದ ಪತ್ರಿಕೆಯನ್ನು ಹೋಲುವ ಪತ್ರಿಕೆಯನ್ನು ಕನ್ನಡ, ಇಂಗ್ಲೀಷ್, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಯಲ್ಲಿ ಪತ್ರಿಕೆ ಬಿಡುಗಡೆ ಮಾಡಲಾಗಿದೆ.
ಈ ಪತ್ರಿಕೆಯ ಹೆಡ್ ಲೈನ್ ನಲ್ಲಿ ಕೆಜಿಎಫ್ 2 ಕಥೆ ಪ್ರಕಟವಾಗಿದ್ದು, ನಾಯಕನಾ ಅಥವಾ ಖಳನಾಯಕನ ಪ್ರಶ್ನಿಸುವ ಟೈಟಲ್ ನೀಡಲಾಗಿದೆ. ಇದೆಲ್ಲಾ ಚಿತ್ರ ಪ್ರಮೋಶನ್ ಗಾಗಿ ಮಾಡಲಾಗಿದೆ.