ಬೆಂಗಳೂರಿನ 200 ಸ್ಕ್ರೀನ್ ಗಳಲ್ಲಿ ‘ಕೆ.ಜಿ.ಎಫ್’…!!!

Published on

265 Views

ಡಿಸೆಂಬರ್ 21ಕ್ಕೆ ರಾಕಿಂಗ್ ಸ್ಟಾರ್ ಅಭಿನಯದ ಬಹು ನಿರೀಕ್ಷಿತ ‘ಕೆ.ಜಿ.ಎಫ್’ ಪ್ರಪಂಚಾದ್ಯಂತ ತೆರೆಕಾಣಲಿದೆ. ಸುಮಾರು 2000ಕ್ಕಿಂತ ಹೆಚ್ಚು ಥಿಯೇಟರ್ ಗಳಲ್ಲಿ ಸಿನಿಮಾ ತೆರೆಕಾಣಲಿದ್ದು, ರಾಜ್ಯದಲ್ಲೇ ದಾಖಲೆ ಮಟ್ಟದಲ್ಲಿ ಚಿತ್ರ ಪ್ರದರ್ಶನದ ಸಿದ್ಧತೆ ನಡೆಯುತ್ತಿದೆ. ಬೆಂಗಳೂರಿನಲ್ಲಿಯೇ ಸುಮಾರು 200 ಸ್ಕ್ರೀನ್ ಗಳಲ್ಲಿ ಸಿನಿಮಾ ಪ್ರದರ್ಶನವಾಗುತ್ತಿದೆ. ಇದುವರೆಗೆ ತಮಿಳು,ತೆಲುಗು ಸಿನಿಮಾಗಳೇ ಹೆಚ್ಚಾಗಿ ಓಡುತ್ತಿದ್ದ ಥಿಯೇಟರ್ ಗಳಲ್ಲಿ ಈವಾಗ ‘ಕೆ.ಜಿ.ಎಫ್’ ಸಿನಿಮಾ ತೆರೆಕಾಣಲಿದೆ. ‘ಕೆ.ಜಿ.ಎಫ್’ ಹವಾ ಎಲ್ಲ ಕಡೆ ಹಬ್ಬಿದ್ದು, ಸಿನಿಮಾವನ್ನು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಪ್ರತಿಯೊಂದು ಹಂತದಲ್ಲೂ ದಾಖಲೆ ಮಾಡಿದ ‘ಕೆ.ಜಿ.ಎಫ್’ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸುವುದರ ಜೊತೆ, ಇತರೇ ಚಿತ್ರರಂಗದವರು ಸ್ಯಾಂಡಲ್ ವುಡ್ ಕಡೆ ತಿರುಗಿ ನೋಡುವಂತೆ ಮಾಡಿ ಹವಾ ಸೃಷ್ಟಿ ಮಾಡಿದೆ ‘ಕೆ.ಜಿ.ಎಫ್’.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com