ಬಾಮಾ ಹರೀಶ್ ನೂತನ ಅಧ್ಯಕ್ಷ : ಫಿಲ್ಮ್ ಚೇಂಬರ್ ಎಲೆಕ್ಷನ್

Published on

493 Views

ಬಾಮಾ ಹರೀಶ್ ನೂತನ ಅಧ್ಯಕ್ಷ – ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ಮುಕ್ತಾಯವಾಗಿದೆ. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ, ಚಲಾವಣೆಯಾದ ಒಟ್ಟು 1176 ಮತಗಳ ಪೈಕಿ ಬಾಮಾ ಹರೀಶ್ 781 ಮತ ಪಡೆದು ಗೆದ್ದಿದ್ದಾರೆ. ಬಾಮಾ ಹರೀಶ್ ಅವರು ಪ್ರತಿಸ್ಪರ್ಧಿ ಸಾ.ರಾ.ಗೋವಿಂದು ಅವರನ್ನು 403 ಮತಗಳ ಅಂತರದಿಂದ ಸೋಲಿಸಿದ್ದಾರೆ.

ನಿರ್ಮಾಪಕರ ಸಂಘದ ಉಪಾಧ್ಯಕ್ಷರಾಗಿ ಜೈಜಗದೀಶ್, ವಿತರಕ ವಲಯದ ಉಪಾಧ್ಯಕ್ಷರಾಗಿ ಶಿಲ್ಪಾ ಶ್ರೀನಿವಾಸ್, ನಿರ್ಮಾಪಕರ ವಲಯದ ಗೌರವ ಕಾರ್ಯದರ್ಶಿಯಾಗಿ ಸುಂದರ್ ರಾಜ್, ಖಜಾಂಚಿಯಾಗಿ ಟಿ.ಪಿ.ಸಿದ್ದರಾಜು ಗೆದ್ದಿದ್ದಾರೆ.

ವಿತರಕರ ವಲಯದಿಂದ ಎನ್.ಎಂ.ಕುಮಾರ್, ಪ್ರದರ್ಶಕರ ವಲಯದಿಂದ ಕುಶಾಲ್ ಗೌರವ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com