ಕಸ್ತೂರಿ ನಿವಾಸ – ಸೇವಂತಿ ಮಹಾಸಂಗಮದಲ್ಲಿ ನಟಿ “ಸುಧಾರಾಣಿ”

Published on

333 Views

ಇದೇ ಶನಿವಾರ ಮತ್ತು ಭಾನುವಾರ ರಾತ್ರಿ ೯.೩೦ಕ್ಕೆ
ಮಹಾಸಂಗಮಗಳ ಮಹಾ ಧಮಾಕವನ್ನು ಉದಯ ಟಿವಿ ಹೆಮ್ಮೆಯಿಂದ ಪ್ರಸ್ತುತ ಪಡಿಸುತ್ತಿದೆ. ಕಾವ್ಯಾಂಜಲಿ – ಯಾರಿವಳು ಮಹಾಸಂಗಮದಿಂದ ಶುರುವಾಗಿ , ಆಕೃತಿ- ಮನಸಾರೆ ಮಹಾಸಂಗಮವನ್ನು ಜೊತೆಗೊಂಡು , ಈಗ ನವೆಂಬರ್ 2 ರಿಂದ ಕಸ್ತೂರಿನಿವಾಸ- ಸೇವಂತಿ ಮಹಾಸಂಗಮ ಪ್ರಸಾರವಾಗಿದೆ.

ಮಹಾಸಂಗಮಗಳ ಮಹಾಮನರಂಜನೆಯಲ್ಲಿ ಮುಖ್ಯವಾಗಿ ಹಲವಾರು ನಟ ನಟಿಯರು ಭಾಗಿಯಾಗಿದ್ದರು. ಅದಿತಿ ಪ್ರಭುದೇವ ಕಾವ್ಯಾಂಜಲಿ ಯಾರಿವಳು ಮಹಾಸಂಗಮಕ್ಕೆ ರಂಗು ತಂದರು , ರಾಧಿಕಾ ನಾರಾಯಣ ಆಕೃತಿ ಮನಸಾರೆ ಮಹಾಸಂಗಮಕ್ಕೆ ಮೆರಗು ತಂದ್ರು. ಇದೀಗ ಕಸ್ತೂರಿ ನಿವಾಸ ಸೇವಂತಿ ಮಹಾಸಂಗಮಕ್ಕೆ ಸ್ಯಾಂಡಲ್ ವುಡ್ ನ ಜನಪ್ರಿಯ ನಟಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮುಖ್ಯ ಅತಿಥಿಯಾಗಿ ಕಥೆಯಲ್ಲಿ ದುಪ್ಪಟ್ಟು ಮನರಂಜನೆಯನ್ನು ತರಲಿದ್ದಾರೆ.

ಕಸ್ತೂರಿ ನಿವಾಸ ಸೇವಂತಿ ಮಹಾಸಂಗಮದಲ್ಲಿ ಸ್ಯಾಂಡಲ್ ವುಡ್ ನ ಬಹಳ ಜನಪ್ರಿಯವಾದ ನಟಿ ಸುಧಾರಾಣೆ ಮುಖ್ಯ ಅತಿಥಿಯಾಗಿ ಬರಲಿದ್ದಾರೆ. ಮನೆದೇವ್ರು , ಆನಂದ್ , ಸಿರಿಗಂಧ , ಪಂಚಮವೇದ ಹೀಗೆ ಹತ್ತು ಹಲವಾರು ಸೂಪರ್ ಹಿಟ್ ಸಿನಿಮಾಗಳ ಜೀವ ತುಂಬಿದ ಹೆಗ್ಗಳಿಕೆ ಸುಧಾರಾಣಿ ಯವರದ್ದು. ಈ ಮಹಾಸಂಗಮಕ್ಕೆ ಮತ್ತಷ್ಟು ಕಳೆತಂದಿದ್ದಾರೆ ಈ ಮೇರು ನಟಿ.

ಸೇವಂತಿ ಮತ್ತು ಮೃದುಲಾ ಬದುಕಲ್ಲಿ ಆಗುತ್ತಿರೊ ಅನಿರೀಕ್ಷತ ಘಟನೆಗಳಿಗೆ ಪರಿಹಾರ ಕಂಡುಕೊಳ್ಳಲು ಮರುಮಾಂಗಲ್ಯ ಧಾರಣೆಯ ಶುಭ ಮುಹರ‍್ತದಲ್ಲಿ ಸುಧಾರಾಣಿಯವರು ಪಾಲ್ಗೊಳಲಿದ್ದಾರೆ.

ಈ ಮಹಾಸಂಚಿಕೆಗಳು ಶನಿವಾರ ಮತ್ತು ಭಾನುವಾರ ರಾತ್ರಿ 9:30ಕ್ಕೆ ಪ್ರಸಾರವಾಗಲಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com