ಬಹುಪರಾಕ್ ಎನಿಸಿಕೊಂಡ ‘ಕಸ್ತೂರಿ ಮಹಲ್ ಟ್ರೈಲರ್

Published on

410 Views

ಹಿರಿಯ ನಿರ್ದೇಶಕ ದಿನೇಶ್‌ ಬಾಬು ಅವರ 50ನೇ ಸಿನಿಮಾ ‘ಕಸ್ತೂರಿ ಮಹಲ್’ ಟ್ರೈಲರ್ ಬಿಡುಗಡೆಯಾಗದ್ದು, ಒಳ್ಳೆ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಚಿತ್ರದಲ್ಲಿ ನಾಯಕಿಯಾಗಿ ಶಾನ್ವಿ ಶ್ರೀವಾಸ್ತವ ನಟಿಸಿದ್ದು, ಅವರ ಲುಕ್ ಗಮನಸೆಳೆಯುತ್ತಿದೆ.

ರಂಗಿತರಂಗ 6-5 = 2 ಸಿನೆಮಾಗಳ ನಂತರ ಆ ತರದ ಹಾರರ್ ಸಿನೆಮಾಗಳ ಪಟ್ಟಿಗೆ ಸೇರುವ ಸಿನೆಮಾ ಅನ್ನಬಹುದು. ಪ್ರೇಕ್ಷಕ ಪ್ರಭು ಟ್ರೇಲರ್ ಇಷ್ಟಪದ್ದಿದ್ದು, ಚಿತ್ರತಂಡದಲ್ಲಿ ಖುಷಿಯ ವಾತಾವರಣ ಇದೆ

ಕಸ್ತೂರಿ ಮಹಲ್’ ಚಿತ್ರಕ್ಕೆ ಆರಂಭದಲ್ಲಿ ರಚಿತಾ ರಾಮ್ ನಾಯಕಿ ಎಂದು ಹೇಳಲಾಗಿತ್ತು. ಗ್ರ್ಯಾಂಡ್ ಆಗಿಯೇ ಸಿನಿಮಾವನ್ನು ಲಾಂಚ್ ಮಾಡಲಾಗಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ಶೂಟಿಂಗ್ ಶುರುವಾಗಲಿದೆ ಎನ್ನುವಾಗಲೇ ಅವರು ಸಿನಿಮಾದಿಂದ ಹೊರನಡೆದರು. ಅದಕ್ಕೆ ಡೇಟ್ಸ್‌ ಹೊಂದಾಣಿಕೆ ಆಗುತ್ತಿಲ್ಲ ಎಂಬ ಕಾರಣ ನೀಡಲಾಗಿತ್ತು. ಆನಂತರ ಅವರ ಜಾಗಕ್ಕೆ ನಟಿ ಶಾನ್ವಿ ಅವರ ಆಗಮನ ಆಗಿದೆ. ಅಷ್ಟೇ ಅಲ್ಲ, ಸಿನಿಮಾ ಪೂರ್ತಿ ಚಿತ್ರೀಕರಣ ಮಾಡಿದೆ ಚಿತ್ರತಂಡ. ಇದೊಂದು ಹಾರರ್‌ ಮಾದರಿಯ ಸೈಕಾಲಾಜಿಕಲ್‌ ಥ್ರಿಲ್ಲರ್‌ ಸಿನಿಮಾವಾಗಿದೆ. ಮೊದಲ ಸಿನಿಮಾ ‘ಚಂದ್ರಲೇಖಾ’ ನಂತರ, ಶಾನ್ವಿ ಮತ್ತೊಮ್ಮೆ ಹಾರರ್ ಸಿನಿಮಾ ಒಪ್ಪಿಕೊಂಡಿದ್ದಾರೆ.

ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ ದಿನೇಶ್ ಬಾಬು. ರವೀಶ್‌ ನಿರ್ಮಾಣದ ಹೊಣೆ ಹೊತ್ತುಕೊಂಡಿದ್ದರೆ, ಅಕ್ಷಯ್‌-ನವೀನ್‌ ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ. ಛಾಯಾಗ್ರಹಣವನ್ನು ಪಿಕೆಎಚ್ ದಾಸ್ ಮಾಡಿದ್ದು, ಗೌತಮ್ ಶ್ರೀವತ್ಸ ಸಂಗೀತ ಸಂಯೋಜನೆ ಮಾಡಿದ್ದಾರೆ. ಶಾನ್ವಿ ಜೊತೆಗೆ ಶ್ರುತಿ ಪ್ರಕಾಶ್, ಸ್ಕಂದ ಅಶೋಕ್, ರಂಗಾಯಣ ರಘು ಮುಂತಾದವರು ನಟಿಸಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com