ಕರ್ಷಣಂ ಚಿತ್ರದ ಮುಹೂರ್ತ

Published on

406 Views

ಕನ್ನಡ ಚಿತ್ರದ ಅಭಿಮಾನಿಗಳಿಗೆ ಹೊಸತನದ ಅನುಭವ ನೀಡಲು ಡಿಜೆ ಎಂಟರ್‍ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ `ಕರ್ಷಣಂ’ ಚಿತ್ರದ ಮುಹೂರ್ತ ಅದ್ಧೂರಿಯಾಗಿ ನಡೆಯಿತು. ಶರವಣ ಅವರ ನಿರ್ದೇಶನದಲ್ಲಿ ಹಿರಿಯ ಹಾಗೂ ಹೊಸ ಕಲಾವಿದರ ತಂಡವೇ ಇದೆ. ಚಿತ್ರದ ನಾಯಕರಾಗಿ ಧನಂಜಯ್ ಅತ್ರೆ, ನಾಯಕಿಯಾಗಿ ಅನುಷಾ ರಾಯ್ ಅಭಿನಯಿಸುತ್ತಿದ್ದಾರೆ. ಹಿರಿಯ ನಟ ಶ್ರೀನಿವಾಸ್ ಮೂರ್ತಿ ಅವರಿಗೆ ವಿಶೇಷ ಪಾತ್ರ ನೀಡುವ ಯೋಚನೆ ಮಾಡಲಾಗಿದೆ. ಉಳಿದಂತೆ ಗೌತಮ್, ಮನಮೋಹನ ರಾಯ್ ಹಾಗೂ ಹಾಸ್ಯ ಕಲಾವಿದರಾಗಿ ವಿಜಯ್ ಚಂದುರ್, ಕ್ಯಾಮೆರಾ ಮೆನ್ ಆಗಿ ಮೋಹನ್ ಎಂ. ಮುಗುಡೇಶ್ವರನ್ ಸೇರಿದಂತೆ ಚಿತ್ರದಲ್ಲಿ ಹೊಸ ಪ್ರತಿಭೆಗಳು ಕಾಣಿಸಿಕೊಳ್ಳಲಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com