ಭಂಡಾರಿ ಬ್ರದರ್ಸ್ ಮೇಲೆ ದೂರು ನೀಡಿದ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ
ಭಂಡಾರಿ ಬ್ರದರ್ಸ್ ಮೇಲೆ ದೂರು ನೀಡಿದ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ
‘ ರಾಜರಥ’ ಸಿನಿಮಾದ ಕುರಿತು ನಡೆದ ಸಂದರ್ಶನದಲ್ಲಿ Rapid ರಶ್ಮಿ ‘ ರಾಜರಥ ಸಿನಿಮಾ ನೋಡದವರು—-? ‘ ಎಂದು ಅನೂಪ್ ಭಂಡಾರಿ ಗೆ ಕೇಳಿದ್ದಾರೆ. ಅದಕ್ಕೆ ಉತ್ತರವಾಗಿ ಅನೂಪ್ ‘ರಾಜರಥ ಸಿನಿಮಾ ನೋಡದವರು ಕಚಡ ನನ್ಮಕ್ಕಳು’ ಎಂದು ಹೇಳಿ ಕನ್ನಡಿಗರ ಕೋಪಕ್ಕೆ ಗುರಿಯಾಗಿದ್ದರು. ನಂತರ ಅನೂಪ್ ಮತ್ತು ನಿರೂಪ್ ಸೋಶಿಯಲ್ ಮೀಡಿಯಾ ಮತ್ತು ಟಿವಿ ಚಾನೆಲ್ ನಲ್ಲಿ ಕ್ಷಮೆಯನ್ನು ಕೇಳಿದ್ದಾರೆ. ‘ಇದು ಸಿನಿಮಾ ರಿಲೀಸ್ ಗೂ ಮುಂಚೆ ನಡೆದ ಸಂದರ್ಶನ. ನನಗೆ ಕನ್ನಡ ಪ್ರೇಕ್ಷಕರ ಮೇಲೆ ತುಂಬನೇ ಗೌರವವಿದೆ. ನಾನು ಉದ್ದೇಶ ಪೂರ್ವಕವಾಗಿ ಪದ ಬಳಸಿಲ್ಲ. ನನ್ನ ಮೊದಲ ಚಿತ್ರ ‘ರಂಗಿತರಂಗ’ ಸಿನಿಮಾ ಯಶಸ್ವಿಯಾಗಲು ಕಾರಣ ಕನ್ನಡ ಪ್ರೇಕ್ಷಕರು.
ನನ್ನ ಸಿನಿಮಾದಲ್ಲಿ ಈ ಪದವನ್ನು ಬಳಸಿದರಿಂದ ನನಗೂ ಸಡನ್ನಾಗಿ ಕಚಡ ಪದ ಬಾಯಿಗೆ ಬಂತು ಅಷ್ಟೇ’ ಎಂದರು. ಭಂಡಾರಿ ಬ್ರದರ್ಸ್ ಮಾತುಗಳು ಕನ್ನಡಿಗರನ್ನು ಕೆರಳಿಸಿದ ಕಾರಣ ಅವರನ್ನು 6 ತಿಂಗಳ ಕಾಲ ಚಿತ್ರರಂಗದಿಂದ ಬಹಿಷ್ಕಾರ ಹಾಕ್ಬೆಂದು ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಜಯರಾಜ್ ನಾಯ್ಡು ದೂರು ದಾಖಲೆ ಮಾಡಿದ್ದಾರೆ. ಕನ್ನಡ ಸಿನಿಮಾವನ್ನು ನೋಡದೇ ಇರೋರು ಅಂತ ಹೇಳಿಲ್ಲ. ರಾಜರಥ ಸಿನಿಮಾವನ್ನು ನೋಡದವರು ಕಚಡಾಗಳು ಎಂದು ಸಂದರ್ಶನ ದಲ್ಲಿ ಹೇಳಿದ್ದಾರೆ. ಇದರಿಂದ ನೋವಾಗಿದೆ. ಕ್ಷಮೆ ಕೇಳಿದ್ದಾರೆ ಅನ್ನೋ ಮಾತ್ರಕ್ಕೆ ನಮ್ಮ ಹೋರಾಟ ನಿಲ್ಲಿಸೋಲ್ಲ. ವಾಣಿಜ್ಯ ಮಂಡಳಿಗೆ ಮನವಿಯನ್ನು ನೀಡಿದ್ದೇವೆ. Rapid ರಶ್ಮಿ ಹಾಗೂ ಚಿತ್ರದ ನಾಯಕಿ ಅವಂತಿಕಾ ಶೆಟ್ಟಿ ಇಲ್ಲಿವರೆಗೂ ಕ್ಷಮೆ ಕೇಳಿಲ್ಲ. ಅವರು ಕ್ಷಮೆ ಕೇಳ್ಬೇಕು ಎಂದು ಹೇಳಿದ್ದಾರೆ.