ಕಂತ್ರಿ ಬಾಯ್ಸ್”ಗೆ “ಎ” ಸರ್ಟಿಫಿಕೇಟ್
ಚೆರಾಯನ್ಸ್ ಎಂಟರ್‍ಟೈನ್‍ಮೆಂಟ್ ಲಾಂಛನದಲ್ಲಿ ಎಂ.ಸಿ.ಹೇಮಂತ್‍ಗೌಡ ನಿರ್ಮಿಸುತ್ತಿರುವ ಕಂತ್ರಿ ಬಾಯ್ಸ್ ಚಿತ್ರಕ್ಕೆ ಕಳೆದ ವಾರ ಸೆನ್ಸಾರ್ ಮಂಡಳಿ ವೀಕ್ಷಿಸಿ ‘ಎ’ ಸರ್ಟಿಫಿಕೇಟ್ ನೀಡಿದೆ. ಗಡ್ಡಪ್ಪ ಪ್ರಮುಖಪಾತ್ರದಲ್ಲಿ ನಟಿಸಿರುವ ಅದ್ದೂರಿ ಬಜೆಟ್‍ನ ಚಿತ್ರ ಇದಾಗಿದೆ. ಥ್ರಿಲ್ಲರ್, ಮರ್ಡರ್ ಮಿಸ್ಟ್ರಿಯೊಂದಿಗೆ ಕಾಮಿಡಿಗೆ ಈ ಚಿತ್ರದಲ್ಲಿ ಪ್ರಧಾನವಾಗಿ ಒತ್ತು ಕೊಡಲಾಗಿದೆ. ಇದರೊಟ್ಟಿಗೆ ಸಮಾಜಕ್ಕೆ ಬೇಕಿರುವ ಅತ್ಯಮೂಲ್ಯವಾದ ಮೆಸೇಜ್ ಕೂಡಾ ಈ ಚಿತ್ರದಲ್ಲಿದೆ. ಈ ಚಿತ್ರವನ್ನು ಫೆಬ್ರವರಿ ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.
ಚಿತ್ರಕ್ಕೆ ಎಸ್.ರಾಜು ಚಟ್ನಳ್ಳಿ, ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಪಿ.ವಿ.ಆರ್.ಸ್ವಾಮಿ ಛಾಯಾಗ್ರಹಣ ಕಿರಣ್ ಮಹಾದೇವ್ ಸಂಗೀತ, ಡಿ.ರವೀಂದ್ರನಾಥ್ ಹಿನ್ನೆಲೆ ಸಂಗೀತ, ಕೆ.ಎನ್.ಕಾರ್ತಿಕ್ ಸಂಕಲನ, ಮನೋರಥ್ ಕಲಾನಿರ್ದೇಶನವಿದೆ. ಗಡ್ಡಪ್ಪ ಅರವಿಂದ್ ಜೋಕರ್ ಹನುಮಂತು, ಹೇಮಂತ್‍ಗೌಡ, ದರ್ಶನ್‍ರಾಜ್, ಹೇಮಂತ್ ಸೂರ್ಯ, ಅನಖ, ಸಂಧ್ಯ, ಶಾಲಿನಿ ಸಂತೋಷ್, ವಾಸಂತಿ, ರಾಧಾ, ಭೂಪಾಲ್, ವೆಂಕಟಾಚಲ, ಭದ್ರಾವತಿ ಮಂಜು, ಪಟೇಲ್ ರಂಗಪ್ಪ, ವೇಣು ಮುಂತಾದವರ ತಾರಾಬಳಗವಿದೆ.