ಯುವರಾಜ್ ಕುಮಾರ್ ದಂಪತಿಗಳ ವಿಚ್ಛೇದನಕ್ಕೆ ಸಪ್ತಮಿ ಗೌಡ ಕಾರಣ!!? ಏನಿದು ವಿವಾದ?
ನಟ ಯುವರಾಜ್ ಕುಮಾರ್ ಹಾಗೂ ಶ್ರೀ ದೇವಿ ದಂಪತಿಗಳ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿದೆ. ಯುವ ರಾಜ್ ಕುಮಾರ್ ದಂಪತಿಗಳು ಫ್ಯಾಮಿಲಿ ಕೋರ್ಟ್ ನಲ್ಲಿ ವಿಚ್ಚೇದನಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು. ಈ ವಿಷಯದ ಬಗ್ಗೆ ಯುವರಾಜ್ ಕುಮಾರ್ ಶ್ರೀದೇವಿಯವರ ಮೇಲೆ ಆರೋಪವನ್ನು ಮಾಡಿದ್ದರು ಹಾಗೂ ಆರೋಪದ ಬಗ್ಗೆ ಶ್ರೀದೇವಿ ರವರು ಸತ್ಯ ಯಾವಾಗಲೂ ಮೇಲುಗೈ ಸಾಧಿಸುತ್ತದೆ ಎಂದು ಯುವರಾಜ್ ಕುಮಾರ್ ಮೇಲೆಯೂ ಕೂಡ ಆರೋಪವನ್ನು ಮಾಡಿದ್ದರು.
ಯುವ ರಾಜ್‌ಕುಮಾರ್ ವಕೀಲ ಸಿರಿಲ್ ಪ್ರಸಾದ್ ಸುದ್ದಿಗೋಷ್ಠಿ ನಡೆಸಿ ಶ್ರೀದೇವಿರವರ ವಿರುದ್ಧ ಆರೋಪವನ್ನು ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ವಕೀಲರಾದ ಪ್ರಸಾದ್ ಅವರು ಶ್ರೀದೇವಿ ಬೈರಪ್ಪ ಅವರು ರಾಧಯ್ಯ ಎಂಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಯುವರಾಜಕುಮಾರ್ ಮತ್ತು ಶ್ರೀದೇವಿ ನಡುವಿನ ಸಂಬಂಧದಲ್ಲಿ ಬಿರುಕು ಉಂಟಾಗಲು ಇದೆ ಕಾರಣ ಎಂದು ಆರೋಪಿಸಿದ್ದಾರೆ. ರಾಧಯ್ಯ ರವರು ಒಂದು ತಿಂಗಳ ಹಿಂದೆ ಮದುವೆಯಾಗಿದ್ದರಿಂದ ಶ್ರೀದೇವಿ ಖಿನ್ನತೆಗೆ ಒಳಗಾಗಿದ್ದರು ಮತ್ತು ಈ ಕಾರಣದಿಂದಾಗಿ ಯುವರಾಜಕುಮಾರ್ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದ್ದರು.
ಈ ಎಲ್ಲಾ ಆರೋಪಗಳ ಸಡುವೆ ಶ್ರೀದೇವಿಯವರು ಯುವರಾಜ್ ಕುಮಾರ್ ಹಾಗೂ ಅವರು ವಕೀಲರು ಮಾಡಿರುವ ಆರೋಪಗಳಿಗೆ ಉತ್ತರಿಸಿದ್ದಾರೆ. ಯುವರಾಜ್ ನೀಡಿರುವ ಕಿರುಕುಳವನ್ನು ಅವರು ಕುಟುಂಬದ ಗೌರವಕ್ಕಾಗಿ ಸಹಿಸಿಕೊಂಡಿದ್ದರು, ಆದರೆ ಯುವರಾಜ್ ರವರಿಗೆ ಸಪ್ತಮಿ ಗೌಡ ರವರ ಜೊತೆ ಸಂಬಂಧವಿರುವುದು ಹಾಗೂ ಶ್ರೀದೇವಿ ಭಾರತಕ್ಕೆ ಆಗಮಿಸಿದಾಗ ಸಪ್ತಮಿ ಗೌಡ ಮತ್ತು ಯುವರನ್ನು ಹೋಟೆಲ್ ನಲ್ಲಿ ನೋಡಿದ್ದನ್ನು ಶ್ರೀದೇವಿ ರವರು ಉಲ್ಲೇಖಿಸಿದ್ದಾರೆ. ಈ ವಿಷಯದಿಂದ ಯುವರಾಜ್ ಕುಮಾರ್ ನನ್ನನ್ನು ಕುಟುಂಬದಿಂದ ಹೊರಗೆ ಕಳುಹಿಸಲು ವಿಚ್ಛೇದನವನ್ನು ನೀಡುತ್ತಿದ್ದಾರೆ ಎಂದು ತಿಳಿಸಿದರು.
ಯುವರಾಜ್ ಕುಮಾರ್‌ಗೆ ಸಪ್ತಮಿ ಗೌಡ ಜೊತೆಗೆ ಸಂಬಂಧ ಇಟ್ಟುಕೊಂಡು, ನನ್ನನ್ನು ವಂಚಕಿ ಮತ್ತು ವಂಚನೆಗಾಗಿ ಆರೋಪಿಸುತ್ತಿದ್ದಾರೆ. ಯುವ ತಾವು ಮಾಡಿದ ತಪ್ಪುಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಮತ್ತು ಯಾವುದೇ ಪುರಾವೆಗಳಿಲ್ಲದೆ ನನ್ನ ವಿರುದ್ಧ ಸುಳ್ಳು ಮತ್ತು ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಶ್ರೀದೇವಿ ರವರು ಆರೋಪವನ್ನು ಮಾಡಿದ್ದಾರೆ.
ಚಲನಚಿತ್ರಗಳ ಕುರಿತ ಹೆಚ್ಚಿನ ಮಾಹಿತಿಗಾಗಿ https://flixoye.com ನ್ನು ಫಾಲೋ ಮಾಡಿ.