ಶುರುವಾಗಲಿದೆ ಬಿಗ್ ಬಾಸ್…

ಕೊರೊನಾ ಹಿನ್ನೆಲೆಯಲ್ಲಿ ಕನ್ನಡದ ಬಿಗ್ ಬಾಸ್ ಇನ್ನು ಪ್ರಾರಂಭವಾಗಿಲ್ಲ. ತೆಲುಗು, ತಮಿಳು, ಹಿಂದಿ ಬಿಗ್ ಬಾಸ್ ಶೋ ಗಳು ಆರಂಭವಾಗಿದ್ದು, ಈಗ ಸದ್ಯದ ಮಾಹಿತಿ ಪ್ರಕಾರ ಕನ್ನಡದಲ್ಲೂ ಬಿಗ್ ಬಾಸ್ ಸೀಸನ್ 8ರ ಆರಂಭಕ್ಕೆ ಭರ್ಜರಿ ತಯಾರಿ ಶುರುವಾಗಿದೆ.
ಬೆಂಗಳೂರಿನ ಬಿಡದಿ ಬಳಿ ಇರುವ ಇನ್ನೋವೆಟಿವ್ ಫಿಲ್ಮ್ ಸಿಟಿಯಲ್ಲಿ ಕನ್ನಡದ ಬಿಗ್ ಬಾಸ್ ಶೋ ನಡೆಯಲಿದೆ. ಶೋ ನಡೆಸಲು ಈಗಾಗಲೇ ಬಿಗ್ ಬಾಸ್ ಮನೆಯ ರಿಪೇರಿ ಕಾರ್ಯ ಶುರುವಾಗಿದ್ದು, ಶೋ ನಡೆಸಲು ಬೇಕಾದಂತೆ ಶೀಘ್ರದಲ್ಲೇ ಕ್ಯಾಮರಾಗಳನ್ನು ಫಿಕ್ಸ್ ಮಾಡುವ ಕೆಲಸ ಆರಂಭಗೊಳ್ಳಲಿದೆ.
ಎಲ್ಲ ತಯಾರಾಗಲು ಇನ್ನೂ ಒಂದು ತಿಂಗಳಾದರೂ ಬೇಕಾಗಬಹುದು. ಅನಂತರ ಶೋ ಆರಂಭದ ದಿನ ಹೊರಬಿಳಬಹುದು ಎನ್ನಲಾಗಿದೆ.