ತುಪ್ಪದ ಬೆಡಗಿ ರಾಗಿಣಿ ಬಂಧನ..!!
ಡ್ರಗ್ಸ್ ಜಾಲದಲ್ಲಿ ಒಬ್ಬೊಬ್ಬರ ಹೆಸರುಗಳು ತಳುಕು ಹಾಕಿಕೊಂಡಿದ್ದು, ಈಗಾಗಲೇ ಸ್ಯಾಂಡಲ್ವುಡ್ ನಲ್ಲಿ ಢವ ಢವ ಶುರುವಾಗಿದೆ. ಈಗಾಗಲೇ ಸ್ಯಾಂಡಲ್ ವುಡ್ ನಟಿ ರಾಗಿಣಿ ಹೆಸರು ಕೇಳಿ ಬಂದಿದ್ದು, ರಾಗಿಣಿಗೆ ನೋಟಿಸ್ ಕಳಿಸಿದ್ರೂ ಸೀರಿಯಸ್ ಆಗಿ ತೆಗೆದುಕೊಳ್ಳದ ನಟಿಗೆ ಸಿಸಿಬಿ ಅಧಿಕಾರಿಗಳಿಂದ ಕಾದಿತ್ತು ಶಾಕ್. ಸತತ ಏಳು ಗಂಟೆಗಳ ಬಳಿಕ ಅರೆಸ್ಟ್ ಆದ ನಟಿ ರಾಗಿಣಿ ದ್ವಿವೇದಿ, ಬೆಳ್ಳಂಬೆಳಗ್ಗೆ ಸಿಸಿಬಿ ಅಧಿಕಾರಿಗಳು ರಾಗಿಣಿ ಮನೆಗೆ ದಾಳಿ ಮಾಡಿದ ನಂತರ ಅರೆಸ್ಟ್ ಆಗಿದ್ದಾರೆ.
ಡ್ರಗ್ಸ್ ಜಾಲದ ನಂಟಿನ ಸುಳಿವು ಪಡೆದ ಅಧಿಕಾರಿಗಳು ಬೆಳ್ಳಂ ಬೆಳಿಗ್ಗೆ ರಾಗಿಣಿ ಮನೆ ಬಾಗಿಲು ಬಡಿದಿದ್ದಾರೆ. ಒಬ್ಬೊಬ್ಬರಿಗೆ ಬಲೆಗೆ ಬೀಸುತ್ತಿರುವ ಅಧಿಕಾರಿಗಳು ರಾಗಿಣಿ ಆಪ್ತ ರವಿಶಂಕರ್ ಮಾಹಿತಿ ಆಧರಿಸಿ ತುಪ್ಪದ ಬೆಡಗಿಗೆ ನೋಟೀಸ್ ನೀಡಲಾಗಿತ್ತು. ಆದ್ರೆ ಇಲ್ಲ ಸಲ್ಲದ ನೆಪ ಹೇಳುತ್ತ ರಾಗಿಣಿ ಮನೆಯಲ್ಲಿಯೇ ಕಾಲ ಕಳಿತಿದ್ರು. ಸೋಮವಾರ ವಿಚಾರಣೆಗೆ ಹಾಜರಾಗ್ತಿನಿ ಹೇಳಿದ ರಾಗಿಣಿಯ ಮನೆಗೆ ಅಧಿಕಾರಿಗಳು ಬೆಳಿಗ್ಗೆ 6.30 ರ ಸುಮಾರಿಗೆ ಯಲಹಂಕ ಬಳಿಯ ಜ್ಯೂಡಿಸೆರಿ ಲೇಔಟ್ ನ ಮನೆ ಮೇಲೆ ದಾಳಿ ನಡೆಸಿದ್ರು. 6 ಜನ ಅಧಿಕಾರಿಗಳು ಕೋರ್ಟ್ ನಿಂದ ಸರ್ಚ್ ವಾರೆಂಟ್ ಪಡೆದು ಮನೆಯಲ್ಲಿ ತಲಾಶ್ ನಡೆಸಿದ್ರು. ರಾಗಿಣಿ ಮನೆ ಮೂಲೆ ಮೂಲೆಯಲ್ಲಿ ಹುಡುಕಾಡಿ ನಂತರ ಅವರ ಕಾರ್ ನಲ್ಲಿ ಏನಿತ್ತು ಎಲ್ಲವನ್ನು ಪರಿಶೀಲನೆ ನಡೆಸಿದ್ದಾರೆ. ಇದೆಲ್ಲದರ ಜೊತೆಗೆ ವಿಡಿಯೋ ಮಾಡಿಕೊಂಡು ಮುಂಜಾನೆ ಸುಮಾರು 11.30 ಸುಮಾರಿಗೆ ರಾಗಿಣಿಯನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಕರೆತಂದರು.
Karnataka: Kannada actress Ragini detained by Central Crime Branch (CCB) in Bengaluru, in connection with a drug case. https://t.co/SfKkw9kmXC pic.twitter.com/mj4iRwROrI
— ANI (@ANI) September 4, 2020
ಪ್ರತಿಕ್ರಿಯೆಗೆ ನಿರಾಕರಿಸಿದ ರಾಗಿಣಿ ಬರೋಬ್ಬರಿ11.30 ರಿಂದ ಸಂಜೆ 6.30 ರ ವರೆಗೂ ಸಿಸಿಬಿ ಕಚೇರಿಯಲ್ಲಿಯೇ ಬೀಡು ಬಿಟ್ರು. ನಶೆ ನಂಟು,ಪಾರ್ಟಿ, ತಮ್ಮ ಪ್ರೆಂಡ್ಸ್ ಗೆ ಸಂಬಂಧಿಸಿದ ಎಲ್ಲ ವಿಚಾರಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಕಡೆಗೆ ಸತತ 7 ಘಂಟೆ ಸುಧೀರ್ಘ ವಿಚಾರಣೆ ಬಳಿಕ ರಾಗಿಣಿ ಅರೆಸ್ಟ್ ಆಗಿದ್ದಾರೆ. ಸೋಮವಾರದವರೆಗೂ ಪೋಲೀಸ್ ಕಸ್ಟಡಿಯಲ್ಲಿರಲಿದ್ದಾರೆ.
ಒಟ್ಟಿನಲ್ಲಿ ಸದ್ಯಕ್ಕೆ ರಾಗಿಣಿ ಅಧಿಕಾರಿಗಳ ಮುಂದೆ ಹೇಳಿರೋ ಎಲ್ಲ ಮಾಹಿತಿಯಲ್ಲಿ ಏನಿದೆ? ನಶೆಯ ನಂಟಿನ ಜಾಲದ ಆರೋಪದ ತುಪ್ಪದ ಬೆಡಗಿ ಹೇಗೆ ಹೊರ ಬರ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.