“ಕಣ್ಮಣಿಯಲ್ಲಿ ಕಲ್ಯಾಣ” ಅಂಜಲಿ-ಕಿಶನ್ ಮದುವೆಗೆ ಡಿಕೆ ಅಡ್ಡಿಯಾಗ್ತಾನಾ ?

Published on

273 Views

“ಕಣ್ಮಣಿಯಲ್ಲಿ ಕಲ್ಯಾಣ”
ಅಂಜಲಿ-ಕಿಶನ್ ಮದುವೆಗೆ ಡಿಕೆ ಅಡ್ಡಿಯಾಗ್ತಾನಾ ?
ಸೋಮವಾರದಿಂದ ಶುಕ್ರವಾರ ರಾತ್ರಿ 10.00ಕ್ಕೆ

ಉದಯ ಟಿವಿಯಲ್ಲಿ ರಾತ್ರಿ 10 ಗಂಟೆಗೆ ಪ್ರಸಾರವಾಗುತ್ತಿರುವ “ಕಣ್ಮಣಿ” ಧಾರಾವಾಹಿ ಹೊಸ ತಿರುವಿನೊಂದಿಗೆ ನಿಮ್ಮ ಮನೆಗೆ ಬರಲಿದೆ. ಎಲ್ಲ ಅಡೆತಡೆಗಳನ್ನ ಮೀರಿ ಕಿಶನ್- ಅಂಜಲಿ ಮದುವೆ ಸಂಭ್ರಮದಿಂದ ನಡೆಯುತ್ತಿದೆ.

ಡಿಕೆಯ ಬಂಧನದಿಂದ ತಪ್ಪಿಸಿಕೊಂಡು ಬಂದ ಕಾವ್ಯ, ಅಂಜಲಿಯಾಗಿ ಕಿಶನ್ ಜೊತೆ ಹೊಸ ಬಾಳಿಗೆ ಕಾಲಿಡುತ್ತಿದ್ದಾಳೆ. ಕಿಶನ್ ಪ್ರೀತಿಯನ್ನ ತಿರಸ್ಕಾರ ಮಾಡಲಾಗದ ಅಂಜಲಿ ಡಿಕೆಯ ಭಯದಲ್ಲೂ ಮದುವೆಗೆ ತಯಾರಾಗಿದ್ದಾಳೆ. ಡಿಕೆ ಅಂಜಲಿಯ ಗಂಡ ಅನ್ನೋ ವಿಷಯ ತಿಳಿಯದೇ ಕಿಶನ್ ಅವನನ್ನು ಮದುವೆಗೆ ಆಹ್ವಾನಿಸಿದ್ದಾನೆ.
ಡಿಕೆ ಮದುವೆಗೆ ಬರದಂತೆ ತಡೆಯಲು ಅಂಜಲಿ ಜೊತೆ ಡಿಕೆ ಭಾವ ಭಾಸ್ಕರ್ ಕೈ ಜೋಡಿಸಿದ್ರೆ, ಅಂಜಲಿ ತಂದೆಯೂ ಮನೆಕೆಲಸದವನಾಗಿ ಮಗಳ ಮದುವೆಗೆ ಅಡ್ಡಿಯಾಗದಂತೆ ಕಾಯುತ್ತಿದ್ದಾನೆ. ಅಂಜಲಿ ಮಾಡಿದ ಯೋಜನೆಗಳನ್ನ ಮೀರಿ ಡಿಕೆಯಿಂದ, ಕಿಶನ್- ಅಂಜಲಿ ಮದುವೆ ನಿಂತು ಹೋಗುತ್ತಾ? ಮತ್ತೆ ಅಂಜಲಿ ಡಿಕೆ ಕೈವಶವಾಗ್ತಾಳಾ?, ಮುಂದೆ ಕಿಶನ್ ಏನಾಗ್ತಾನೆ?. ಹೀಗೆ ಹಲವು ತಿರುವುಗಳೊಂದಿಗೆ “ಕಣ್ಮಣಿ” ರಾತ್ರಿ 10 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

ಮದುವೆಗೆ ಉದಯ ಕುಟುಂಬದ ಇತರ ಧಾರಾವಾಹಿಯ ನಟ ನಟಿಯರು ಆಗಮಿಸಲಿದ್ದು ಮದುವೆಗೆ ಮತ್ತಷ್ಟು ರಂಗು ತರಿಸಲಿದ್ದಾರೆ. ಮಾನಸ ಸರೋವರ ಧಾರಾವಾಹಿಯ ನಾಯಕಿ ಸುನಿಧಿ, ಬ್ರಹ್ಮಾಸ್ರ್ತ ದಿಂದ ಶಿವರಂಜಿನಿ, ಸಂತು, ಖುಷಿ ಮತ್ತು ಆನಂದ್ ಕಥೆಗೆ ಪೂರಕವಾಗಿ ಮದುವೆಗೆ ಬರಲಿದ್ದಾರೆ.

ತ್ರಿಕೋನ ಕಥೆಯ “ಕಣ್ಮಣಿ” ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 10.00ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com