ಲೂಸ್ ಮಾದರವರ ಹೋಮ್ ಬ್ಯಾನರ್ ನಲ್ಲಿ ಬರುತ್ತಿದೆ ‘ಕಂಸ’

Published on

395 Views

ದುನಿಯಾ ಚಿತ್ರದ ಮೂಲಕ ನಟನಾ ವೃತ್ತಿಯನ್ನು ಪ್ರಾರಂಭಿಸಿದ ಲೂಸ್ ಮಾದ ಯೋಗಿ ಈಗ ತಮ್ಮ ಮಗಳು ಶ್ರಿನಿಕಾ ಹೆಸರಿನಲ್ಲಿ ಸ್ವಂತ ಪ್ರೊಡಕ್ಷನ್ ಹೌಸ್ ನ್ನು ಈಗಾಗಲೇ ಪ್ರಾರಂಭಿಸಿದ್ದಾರೆ. ನಟನೆಯಲ್ಲಿ ತೊಡಗಿಸಿಕೊಂಡಿದ್ದ ಯೋಗೇಶ್ ಬೇರೆ ಏನಾದರೂ ಮಾಡಬೇಕೆಂದು ತಮ್ಮ ಪ್ರೊಡಕ್ಷನ್ಸ್ ಹೌಸ್ ಮೂಲಕ ಅತ್ಯುತ್ತಮ ಕೆಲಸ ಮಾಡಲು ಮುಂದಾಗಿದ್ದಾರೆ.


ಈಗಾಗಲೇ ಕೆಲಸ ಆರಂಭವಾಗಿದ್ದು, ಮುಂಬರುವ ಚಿತ್ರದಲ್ಲಿ ಪ್ರಮಖ ಪಾತ್ರದಲ್ಲಿ ನಟಿಸಲಿರುವ ಯೋಗೇಶ್, ನಟ ಸಮುಥಿರಕಣಿ ಅವರನ್ನು ಸ್ಟೇಜ್ ಮೇಲೆ ತರಲು ಈ ಚಿತ್ರ ತಂಡ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದೆ. ತಮ್ಮ ಹೋಮ್ ಬ್ಯಾನರ್ ನಲ್ಲಿ ‘ಕಂಸ’ ಮೊಟ್ಟ ಮೊದಲ ಚಿತ್ರವಾಗಲಿದ್ದು, ಈ ಚಿತ್ರ ಕನ್ನಡ ‌ಮತ್ತು ತಮಿಳು ಭಾಷೆಗಳಲ್ಲಿ ತೆರೆಗೆ ಬರಲಿದೆ‌. ‘ಕಂಸ’ ಚಿತ್ರದ ಚಿತ್ರೀಕರಣ ಮಾರ್ಚ್ 2021 ರಂದು ಪ್ರಾರಂಭವಾಗಲಿದ್ದು, ಈ ಚಿತ್ರವನ್ನು ರಂಜಿತ್ ಕುಮಾರ್ ಗೌಡ ನಿರ್ದೇಶಿಸಲಿದ್ದಾರೆ. ಈ ಯೋಗೇಶ್ ರವರ ಕೈಯಲ್ಲಿ ‘ನಾನು ಮತ್ತು ಸರೋಜ’, ‘ಲಂಕಾಸುರ’, ‘ಶೋಗನ್’ ಚಿತ್ರಗಳಿವೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com