ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ಕಲ್ಕಿ 2898 AD ಚಿತ್ರ ಹೇಗಿದೆ? – ಇಲ್ಲಿದೆ ನೋಡಿ ಚುಟುಕು ವಿಮರ್ಶೆ

Published on

165 Views

ರಿಲೀಸ್ ಆಗುವುದಕ್ಕೆ ಮುನ್ನವೇ ತನ್ನ ಪ್ರೊಮೋಷನ್’ಗಳಿಂದ ಸಾಕಷ್ಟು ಹವಾ ಸೃಷ್ಟಿಸಿದ್ದ ಡಾರ್ಲಿಂಗ್ ಪ್ರಭಾಸ್ ನಟನೆಯ, ನಾಗ್ ಅಶ್ವಿನ್ ನಿರ್ದೇಶನಾದ್ ಕಲ್ಕಿ 2898 AD ಚಿತ್ರ ಇಂದು ಜಗತ್ತಿನಾದ್ಯಂತ ತೆರೆಕಂಡಿದೆ. ಕಳೆದ ವಾರದಿಂದಲೇ ಟ್ರೆಂಡ್ ಆಗಿದ್ದ ಈ ಚಿತ್ರವನ್ನು ಬಿಗ್ ಸ್ಕ್ರೀನ್’ನಲ್ಲಿ ನೋಡಿದ ಜನತೆ ಏನಂದಿದ್ದಾರೆ? ಚಿತ್ರದಲ್ಲಿ ಏನಿದೆ? ಹೇಳ್ತೀವಿ ನೋಡಿ.

ಮಹಾಭಾರತದ (Mahabaratha) ಕುರುಕ್ಷೇತ್ರ ನಡೆದು ಸರಿಯಾಗಿ 6,000 ವರ್ಷಗಳ ನಂತರ ನಡೆಯುವ ಕಥೆಯೇ ಕಲ್ಕಿ (Kalki) ಸಿನಿಮಾದ ಮುಖ್ಯ ಅಂಶ. ಅಶ್ವತ್ಥಾಮ, ಕೃಷ್ಣ ಹೀಗೆ ಹಲವು ಮಹಾಭಾರತದ ಪಾತ್ರಗಳನ್ನು ಆಧುನಿಕ ರೀತಿಯಲ್ಲಿ ಕಲ್ಪಿಸಿಕೊಂಡ ಕಲ್ಕಿ ಚಿತ್ರ, ಜನರ ಮನಗೆದ್ದಿದೆ. ದಕ್ಷಿಣದ ನಿರ್ದೇಶಕರ ಬ್ಲಾಕ್ ಬಸ್ಟರ್ ಡೈರೆಕ್ಷನ್ ಗೆ ಹೊಸ ಸೇರ್ಪಡೆ ಇದಾಗಿದ್ದು, ಇಲ್ಲಿಯವರೆಗೂ ಚಿತ್ರದಲ್ಲಿ ಪಾತ್ರಮಾಡಿರುವವರ ಮಾಹಿತಿ ಬಿಟ್ಟುಕೊಡದೇ ಇದ್ದಿದ್ದೇ ಬಹಳ ಸಸ್ಪೆನ್ಸ್ ಆಗಿದೆ.

ಕೃಷ್ಣನನ್ನು ಕಾಪಾಡಲು ಬರುವ ಅಶ್ವತ್ಥಾಮನ ಪಾತ್ರದಲ್ಲಿ ಯುವಕರನ್ನೂ ನಾಚಿಸುವಂತೆ ನಟಿಸಿದ ಬಿಗ್ ಬಿ ಅಮಿತಾಭ್ ಬಚ್ಚನ್, ಬೌಂಟಿ ಹಂಟರ್ ಪಾತ್ರದಲ್ಲಿ ಪ್ರಭಾಸ್ ಅತ್ಯದ್ಭುತ ನಟನೆ, ವಿಶೇಷ ಪಾತ್ರದಲ್ಲಿ ಬುಜ್ಜಿ ಕಾರು ಸಖತ್ ಫೀಲ್ ಕೊಡುತ್ತದೆ. ಚಿತದ ಮೊದಲಾರ್ಧದ ಸ್ಟೋರಿ, ಎರಡನೇ ಅರ್ಧದಲ್ಲಿರುವ ಸೂಪರ್ ಕ್ಲೈಮಾಕ್ಸ್, ವಾಹ್ ಅನಿಸುವಂತಿದೆ. ಚಿತ್ರ ನೋಡಿದವರು ಕಲ್ಕಿ ಎರಡನೇ ಭಾಗ ಬರುವುದು ಖಂಡಿತಾ ಎನ್ನುತ್ತಿದ್ದು, ಈ ಚಿತ್ರ ಜಾಗತಿಕ ಚಿತ್ರರಂಗದಲ್ಲಿ ಬಹಳ ದೊಡ್ಡ ಸಾಧನೆಯನ್ನೇ ಮಾಡಲಿದೆ ಎಂದಿದ್ದಾರೆ ಸಿನಿಪ್ರಿಯರು.

ಚಿತ್ರದದ ಕುರಿತಾದ ಕೆಲವು ಟ್ವೀಟ್ಸ್ ಇಲ್ಲಿವೆ ನೋಡಿ:

 

 

ಚಿತ್ರದಲ್ಲಿನ ಸ್ಟಂಟ್, ಗ್ರಾಫಿಕ್ಸ್ ಹಾಗೂ ಸ್ಕ್ರೀನ್ ಪ್ಲೇ ಅಂತೂ ಯಾವುದೇ ಹಾಲಿವುಡ್ ಚಿತ್ರಗಳನ್ನೂ ಮೀರಿಸುವಂತಿದ್ದು, ಈ ಅದ್ಭುತ ಸಿನಿಮಾವನ್ನು ಥಿಯೇಟರ್’ಗಳಲ್ಲಿಯೇ ನೋಡಿ, ಚಿತ್ರದ ಸಂಪೂರ್ಣ ಫೀಲ್ ಅನುಭವಿಸಬೇಕು ಎನ್ನುತ್ತಿದ್ದಾರೆ ಫ್ಯಾನ್ಸ್.

ನೀವೂ ಪ್ರಭಾಸ್ ನಟನೆಯ ಈ ಚಿತ್ರವನ್ನು ಚಿತ್ರಮಂದಿರಗಳಲ್ಲಿಯೇ ನೋಡಿ, ಒಂದು ಅದ್ಭುತ ಚಿತ್ರವನ್ನು ಪ್ರೋತ್ಸಾಹಿಸಿ.

ಚಲನಚಿತ್ರಗಳ ಕುರಿತ ಹೆಚ್ಚಿನ ಮಾಹಿತಿಗಾಗಿ https://flixoye.com ನ್ನು ಫಾಲೋ ಮಾಡಿ.

More Buzz

Buzz 3 hours ago

ಕೇವಲ ಮೋಷನ್ ಪೋಸ್ಟರ್ ಮೂಲಕವೇ ದೊಡ್ಡ ಕ್ರೇಜ಼್ ಹುಟ್ಟಿಸಿದ ‘ಕೆಂಡ’- ಟೀಸರ್ ಇಲ್ಲಿದೆ ನೋಡಿ

Buzz 1 day ago

ಎರಡನೇ ದಿನವೂ ಪ್ರಭಾಸ್ ನಟನೆಯ ಕಲ್ಕಿ 2898AD ಕಮಾಲ್ – ಎರಡೇ ದಿನದಲ್ಲಿ ಚಿತ್ರ ಗಳಿಸಿದ್ದೆಷ್ಟು ಗೊತ್ತಾ?

BuzzTollywood Buzz 1 day ago

ಈ ಓಟಿಟಿಯಲ್ಲಿ ಶೀಘ್ರವೇ ಬರಲಿದೆ Kalki 2898 AD – ಆದರೂ‌ ಚಿತ್ರದ ಥಿಯೇಟರ್ ಅನುಭವವೇ ಬೇರೆ

Buzzfilm of the dayGalleryTollywood Buzz 3 days ago

ಕಲ್ಕಿ 2898 AD ಟಿಕೆಟ್‌ಗೆ ರಾಜಮೌಳಿ ಕ್ಯೂ ನಿಂತ ಫೋಟೋ ವೈರಲ್ – ಮೂವೀ ಪವರ್ ಎಂದ ನೆಟ್ಟಿಗರು

Buzz 4 days ago

ತರುಣ್‌ ಸುಧೀರ್‌ ಜೊತೆ ಹಸೆಮಣೆ ಏರಲಿದ್ದಾರೆಯೇ ರಾಬರ್ಟ್‌ ಬೆಡಗಿ ಸೋನಲ್!? – ಇಲ್ಲಿದೆ ವೈರಲ್ ಸುದ್ದಿಯ ಅಸಲಿಯತ್ತು

BuzzGalleryTrailers 5 days ago

ಕಲ್ಕಿ 2898 AD ಚಿತ್ರದ ಬುಜ್ಜಿ ಚಲಾಯಿಸಿದ ರಿಷಭ್ ಶೆಟ್ಟಿ – ಇಲ್ಲಿದೆ ನೋಡಿ ಎಕ್ಸ್’ಕ್ಲೂಸಿವ್ ವಿಡಿಯೋ

Buzz 5 days ago

“ಹಾಯ್‌ ಟೈಗರ್, ಹಾಯ್‌ ಬಾಸ್”!!!! – ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ್ದು ಯಾರು?

Buzzfilm of the dayFull Movies 1 week ago

ಲವ್ಲಿ ಆಗಿ ಜನರ ಮನಸ್ಸು ಗೆದ್ದ ವಸಿಷ್ಟ ಸಿಂಹರ ಲವ್…ಲಿ

Buzz 3 weeks ago

ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನಕ್ಕೆ ಕೊನೆಗೂ ಬಯಲಾಯ್ತು ಕಾರಣ – ಇಲ್ಲಿದೆ ನೋಡಿ ಸತ್ಯ

Buzz 3 weeks ago

ಯುವರಾಜ್‌ ಕುಮಾರ್‌ ದಂಪತಿಗಳ ವಿಚ್ಛೇದನಕ್ಕೆ ಸಪ್ತಮಿ ಗೌಡ ಕಾರಣ!!? ಏನಿದು ವಿವಾದ?

Buzz 3 weeks ago

ಸ್ಯಾಂಡಲ್ ವುಡ್ ನಲ್ಲಿ ಕೊಲೆ ಸದ್ದು – ನಟ ದರ್ಶನ್ ತನ್ನ ಅಭಿಮಾನಿಗೆ ಮಾಡಿದ್ದೇನು?

Buzz 3 weeks ago

ಯುವರಾಜ್ ಕುಮಾರ್ ಜೊತೆ ವಿಚ್ಛೇದನದ ಬಗ್ಗೆ ಶ್ರೀದೇವಿಯವರು ಪ್ರತಿಕ್ರಿಯೆಯನ್ನು ನೀಡಿದ್ದಾರೆ!! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

Copyright ©2024 . All Rights Reserved. privacy | terms Whatsapp: 9538193653 Email: hello@flixoye.com