ಕಲ್ಕಿ 2898 AD ಚಿತ್ರದ ಬುಜ್ಜಿ ಚಲಾಯಿಸಿದ ರಿಷಭ್ ಶೆಟ್ಟಿ – ಇಲ್ಲಿದೆ ನೋಡಿ ಎಕ್ಸ್’ಕ್ಲೂಸಿವ್ ವಿಡಿಯೋ
ಈಗಾಗಲೇ ಟ್ರೆಂಡಿಂಗ್ ಆಗಿರುವ ಪ್ರಭಾಸ್ ನಟನೆಯ ಕಲ್ಕಿ 2898 AD ಚಿತ್ರದಲ್ಲಿ ಬುಜ್ಜಿ ಎನ್ನುವ ಹೆಸರಿನ ಬೃಹತ್ ಕಾರೊಂದು ಎಲ್ಲೆಡೆ ಸದ್ದು ಮಾಡಿತ್ತು. ಚಿತ್ರದಲ್ಲಿ ವಿಭಿನ್ನ ಪಾತ್ರವನ್ನೂ ಹೊಂದಿರುವ ಈ ಕಾರಿಗೆ ತೆಲುಗಿನ ಹೆಸರಾಂತ ನಟಿಯಾದ ಕೀರ್ತಿ ಸುರೇಶ್ ಅವರು ಧ್ವನಿ ನೀಡಿದ್ದಾರೆ. ಇದೀಗ ಆ ಬುಜ್ಜಿ ಕುಂದಾಪುರಕ್ಕೆ ಬಂದಿಳಿದಿದೆ.
ಹೌದ. ಕಾಂತಾರ ರಿಷಭ್ ಶೆಟ್ಟಿಯವರು ಕುಂದಾಪುರಕ್ಕೆ ಬಂದ ಬುಜ್ಜಿಯನ್ನು ಚಲಾಯಿಸಿ ಖುಷಿಪಟ್ಟಿದ್ದಾರೆ. ಈಗಾಗಲೇ ಮಹಿಂದ್ರಾ ಗ್ರೂಪ್ ಒಡೆಯರಾದ ಆನಂದ್ ಮಹಿಂದ್ರಾ ಅವರು ಬುಜ್ಜಿ ಕಾರನ್ನು ಚಲಾಯಿಸಿದ್ದು, ಇದೀಗ ಆ ಕಾರನ್ನು ಚಲಾಯಿಸಿದವರ ಪಟ್ಟಿಗೆ ಕಾಂತಾರ ರಿಷಭ್ ಶೆಟ್ಟಿಯವರೂ ಸೇರ್ಪಡೆಗೊಂಡಿದ್ದಾರೆ.
KALKI X KANTARA 🔥@shetty_rishab gets his hands on #Bujji.#Kalki2898AD pic.twitter.com/IvIHuxGO6y
— Vyjayanthi Movies (@VyjayanthiFilms) June 24, 2024
ಕಾಂತಾರ ಭಾಗ-2 ರ ಪ್ರಮೋಷನ್’ಗಾಗಿ ಬುಜ್ಜಿಯನ್ನು ಕುಂದಾಪುರಕ್ಕೆ ತರಲಾಗಿದ್ದು, ಡೋಲು ಬಾರಿಸುವ ಮೂಲಕ ಬುಜ್ಜಿಯನ್ನು ಸ್ವಾಗತಿಸಲಾಗಿದೆ. ಈಗಾಗಲೇ ಕಾಂತಾರ 2 ಮತ್ತು ಬುಜ್ಜಿ ಕಾರು ಎರಡೂ ಕೂಡ ಸಿನಿಪ್ರಿಯರಲ್ಲಿ ಹೊಸ ಕುತೂಹಲವನ್ನೇ ಹುಟ್ಟಿಸಿವೆ. ಒಂದೆಡೆ ಕಲ್ಕಿ 2898 AD ಚಿತ್ರದ ಟ್ರೈಲರ್ ಯೂಟ್ಯೂಬ್’ನಲ್ಲಿ 39 ಮಿಲಿಯನ್ ವೀಕ್ಷಣೆ ಕಂಡಿದ್ದು, ಬಿಡುಗಡೆಗೆ ಸಿದ್ದವಾಗಿ ನಿಂತಿದೆ.
ಅಂತೂ ರಿಷಭ್ ಶೆಟ್ಟಿಯವರು ಹಾಗೂ ಕಲ್ಕಿ 2898 AD ಚಿತ್ರತಂಡಸೇರಿಕೊಂಡು ಸಿನಿಪ್ರಿಯರಲ್ಲಿ ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕಿರುವುದಂಟು ಸತ್ಯ.
ಚಲನಚಿತ್ರಗಳ ಕುರಿತ ಹೆಚ್ಚಿನ ಮಾಹಿತಿಗಾಗಿ http://flixoye.com ನ್ನು ಫಾಲೋ ಮಾಡಿ.