ಮತ್ತೆ ಥಿಯೇಟರ್‌ಗೆ ಬರಲಿದ್ದಾನೆ ಕಲಿವೀರ
ಆಗಸ್ಟ್ 6 ರಂದು ರಾಜ್ಯಾದ್ಯಂತ ತೆರೆಗೆ ಬಂದಿದ್ದ ‘ಕಲಿವೀರ’ ಯಶಸ್ವಿ 25 ದಿನಗಳನ್ನು ಪುರೈಸಿದೆ. ಆದರೂ ಹೆಚ್ಚಿನ ಜನ ಥಿಯೇಟರ್‌ಗೆ ಬಂದು ಸಿನಿಮಾ ನೋಡದ ಕಾರಣ ಮರು ಬಿಡುಗಡೆಗೆ ತಂಡ ತಯಾರಾಗಿದೆ. ನಾವು ರಿಲೀಸ್ ಮಾಡಿದ ಟೈಮ್ ಸರಿ ಇಲ್ಲ ಆದ್ದರಿಂದ ಕೊರೋನಾ ಕಡಿಮೆಯಾದ ಮೇಲೆ ಮತ್ತೆ ರಿ-ರಿಲೀಸ್ ಮಾಡುತ್ತೇವೆ ಎಂಬುದನ್ನು ಹೇಳಲು ತಂಡ ಇತ್ತೀಚೆಗೆ ಮಲ್ಲೇಶ್ವರಂನ ರೇಣುಕಾಂಬ ಥಿಯೇಟರ್‌ನಲ್ಲಿ ಪತ್ರಿಕಾಗೋಷ್ಠಿ ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ಕೆಎನ್‌ಪಿ ಶ್ರೀನಿವಾಸ. ‘ನಮ್ಮ ಚಿತ್ರಕ್ಕೆ ಉತ್ತರ ಕರ್ನಾಟಕದಲ್ಲಿ ಒಳ್ಳೆ ರೆಸ್ಪಾನ್ಸ್ ಬರುತ್ತಿದೆ. ಗಳಿಕೆಯಲ್ಲಿ ನಾವಂದುಕೊಂಡಷ್ಟು ರಿಚ್ ಆಗದಿದ್ದರೂ, ಚಿತ್ರದ ಬಗ್ಗೆ ಒಳ್ಳೆ ಅಭಿಪ್ರಾಯ ಕೇಳಿ ಬಂದಿದೆ. ಚಿತ್ರ ನೋಡಿದವರೆಲ್ಲಾ ನಾಯಕನ ನಟನೆ, ಕಥೆ, ನಿರ್ದೇಶನ, ಛಾಯಾಗ್ರಹಣ ಹೀಗೆ ಎಲ್ಲದರ ಬಗ್ಗೆ ಹೊಗಳುತ್ತಿದ್ದಾರೆ. ಎಂದಿನಂತೆ ನಿಮ್ಮ ಸಹಕಾರ ಬೇಕು’ ಎನ್ನುವರು.
ನಂತರ ಮಾತನಾಡಿದ ನಿರ್ದೇಶಕ ಅವಿರಾಮ್ ‘ಗಳಿಕೆ ಒಂದನ್ನು ಬಿಟ್ಟು ಎಲ್ಲಾ ರೀತಿಯಿಂದ ನಾವು ಗೆದಿದ್ದೇವೆ. ಅಂದುಕೊಂದಷ್ಟು ಹಣ ಬರಲಿಲ್ಲ. ಜನರು ಥಿಯೇಟರ್‌ಗೆ ಬರಲು ಹೆದರುತ್ತಿದ್ದಾರೆ. ಅದು ಬಿಟ್ಟರೆ ಎಲ್ಲಾ ವಿಭಾಗಕ್ಕೂ ಒಳ್ಳೆ ಪ್ರಶಂಸೆ ಬಂದಿದೆ. ಮುಂದೆ ಒಳ್ಳೆಯ ಸಮಯ ನೋಡಿಕೊಂಡು ಮತ್ತೆ ರಿಲೀಸ್ ಮಾಡುವ ಪ್ಲ್ಯಾನ್ ಇದೆ. ಮಾಸ್ ಸಿನಿಮಾಗೆ ಉತ್ತರ ಕರ್ನಾಟಕದಲ್ಲಿ ಒಳ್ಳೆ ರೆಸ್ಪಾನ್ಸ್ ಸಿಗುತ್ತದೆ ಹಾಗಾಗಿ ಕಲಿವೀರನನ್ನು ಅವರಿಗಾಗಿಯೇ ಮಾಡಲಾಗಿದೆ’ ಎಂದರು.
‘ನಮ್ಮ ಹೊಸಬರ ಸಿನಿಮಾವನ್ನು ಕೂಡ ಕೆಲವರು ಪೈರಸಿ ಮಾಡಿದ್ದರು. ರಿಲೀಸ್ ಆಗುವ ಹಿಂದಿನ ದಿನ ಟೆಲಿಗ್ರಾಮ್‌ನಲ್ಲಿ ನಾಳೆ ಇಲ್ಲಿ ಕಲಿವೀರ ನೋಡಬಹುದು ಎಂದು ಲಿಂಕ್‌ಗಳು ಹರದಾಡುತ್ತಿದ್ದವು. ಸಿನಿಮಾ ರಿಲೀಸ್ ಆದಮೇಲೆ ಸಾಕಷ್ಟು ಲಿಂಕ್‌ಗಳನ್ನು ಡಿಲಿಟ್ ಮಾಡಿಸಿದ್ದೇವೆ ಈ ರೀತಿ ಮಾಡಿದರೆ, ಚಿತ್ರರಂಗಕ್ಕೆ ದೊಡ್ಡ ಹೊಡೆತ ಬೀಳುತ್ತದೆ. ನಮ್ಮಂತ ಚಿಕ್ಕ ಸಿನಿಮಾಗಳ ಗತಿ ಏನಾಗಬಾರದು ಪೈರಸಿ ಮಾಡುವುದಷ್ಟೇ ಅಲ್ಲ ಪೈರಸಿ ಸಿನಿಮಾ ನೋಡುವುದು ತಪ್ಪು’ ಎಂದರು ನಿರ್ದೇಶಕ ಅವಿರಾಮ್.
ಇದೇ ಸಂದರ್ಭದಲ್ಲಿ ವಿತರಕ ವಿಜಯ್ ‘ತಂಡ ರಿಲೀಸ್‌ಗೆ ಖರ್ಚು ಮಾಡಿದಷ್ಟು ಬಂದಿದೆ. ತಂಡಕ್ಕೆ ಒಳ್ಳೆ ರೆಸ್ಪಾನ್ಸ್ ಬಂದಿದ್ದು ಜನ ಥಿಯೇಟರ್‌ಗೆ ಬರತಾ ಇರಲಿಲ್ಲ. ನವೆಂಬರ್‌ನಲ್ಲಿ ಮತ್ತೆ ರಿ-ರಿಲೀಸ್ ಮಾಡಲಿದ್ದೇವೆ’ ಎನ್ನುವರು. ನಾಯಕ ಏಕಲವ್ಯ ತಂಡದ ಶ್ರಮವನ್ನು ನೆನೆದು ಎಲ್ಲರಿಗೂ ಧನ್ಯವಾದ ತಿಳಿಸಿದರು. ಚಿತ್ರದ ಹಿಂದಿ ಡಬ್ಬಿಂಗ್ ಸೇರಿದಂತೆ ಒಟಿಟಿ ಪ್ಲಾಟ್ ಪಾರ್ಮ ಹಾಗೂ ಸೆಟ್‌ಲೈಟ್ ಹಕ್ಕುಗಳಿಗಾಗಿಯೂ ಬೇಡಿಕೆ ಬಂದಿದ್ದು. ಪತ್ರಿಕಾಗೋಷ್ಠಿಯಲ್ಲಿ ಭಾಮಾ ಹರೀಶ್ ಹಾಗೂ ಚಿತ್ರದ ಛಾಯಾಗ್ರಾಹಕ ಹಾಲೇಶ್ ಹಾಜರಿದ್ದರು.