ಮಲಯಾಳಂಗೆ ರಿಮೇಕ್ ಆಗಲಿದೆ ‘ಕಾಲಚಕ್ರ’…

Published on

355 Views

ಸ್ಯಾಂಡಲ್ ವುಡ್ ನಟ ವಸಿಷ್ಠ ಸಿಂಹ ನಾಯಕನಾಗಿ ನಟಿಸಿರುವ ‘ಕಾಲಚಕ್ರ’ ಚಿತ್ರ ರಿಲೀಸ್ ಗೆ ರೆಡಿಯಾಗಿದ್ದು, ಈ ಸಿನಿಮಾ ರಿಲೀಸ್ ಗೆ ಮೊದಲೇ ದಾಖಲೆ ನಿರ್ಮಾಣ ಮಾಡಿದೆ. ಈ ಸಿನಿಮಾದಲ್ಲಿ ವಸಿಷ್ಠ, ರಕ್ಷಾ, ದೀಪಕ್ ಶೆಟ್ಟಿ, ಸುಚೇಂದ್ರ ಪ್ರಸಾದ್ ತಾರಾಗಣದಲ್ಲಿದ್ದು, ಸುಮಂತ್‌ ಕ್ರಾಂತಿ ನಿರ್ಮಾಣ ಮಾಡಿ, ನಿರ್ದೇಶಕನಾಗಿಯೂ ಆಕ್ಷನ್‌ ಕಟ್ ಹೇಳಿದ್ದಾರೆ. ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದಾರೆ. ಈಗ‌‌ ಈ ಚಿತ್ರದ ಬಗ್ಗೆ ಹೊಸ‌ ಸುದ್ದಿಯೊಂದು ಹೊರಬಿದ್ದಿದೆ.

ಅದೇ’ಕಾಲಚಕ್ರ’ ಸಿನಿಮಾದ ರಿಮೇಕ್ ರೈಟ್ಸ್ ಗೆ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ ಚಿತ್ರದ ಟೀಸರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರ ಬೆನ್ನಲೇ ಈಗ ಮಲಯಾಳಂ ನಿರ್ಮಾಪಕರು ಸಿನಿಮಾದ ಕಥೆ ಇಷ್ಟಪಟ್ಟು ಮಲಯಾಳಂನಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ.

ಮಲಯಾಳಂ ನಲ್ಲಿ ಕಾಲಚಕ್ರ ಯಾವಾಗ ಪ್ರಾರಂಭವಾಗಲಿದೆ. ಈ‌ ಚಿತ್ರವನ್ನು ನಿರ್ಮಿಸುತ್ತಿರುವ ಸಂಸ್ಥೆ, ನಾಯಕ,‌ನಾಯಕಿ ಯಾರು ಎಂಬುದು ಇನ್ನು ಹೊರ ಬಿದ್ದಿಲ್ಲ.ಆದರೆ ಸದ್ಯದಲ್ಲೇ ಎಲ್ಲಾ ಮಾಹಿತಿ ಹೊರಬೀಳಲಿದೆ. ಅಕ್ಟೋಬರ್ 19ರಂದು ವಸಿಷ್ಠ ಸಿಂಹ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರು ನಟಿಸಿರುವ ಚಿತ್ರದ ರಿಮೇಕ್ ಹಕ್ಕು ಮಲಯಾಳಂಗೆ ಮಾರಾಟವಾಗುತ್ತಿರುವುದು ನಿಜಕ್ಕೂ ಸಂತಸದ ವಿಷಯವಾಗಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com