ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಕಾಜಲ್ ಅಗರ್ವಾಲ್…

Published on

416 Views

ಬಹುಭಾಷಾ ನಟಿ, 35 ವರ್ಷದ ಹಸನ್ಮುಖಿ ಚೆಲುವೆ ಕಾಜಲ್ ಅಗರ್ವಾಲ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಬೆಂಗಳೂರು ಮೂಲದ ಉದ್ಯಮಿ‌ ಗೌತಮ್ ಕಿಚ್ಲು ಅವರನ್ನು ವರಿಸಲಿದ್ದಾರೆ ಕಾಜಲ್ ಅಗರ್ವಾಲ್.

ಅಕ್ಟೋಬರ್ 30 ರಂದು ಮುಂಬೈನಲ್ಲಿ ಸಪ್ತಪದಿ ತುಳಿಯಲಿದ್ದು, ನನ್ನ ಮದುವೆ ಕುಟುಂಬ ಹಾಗೂ‌ ಆಪ್ತರ ಸಮ್ಮುಖದಲ್ಲಿ ಮುಂಬೈನಲ್ಲಿ ಸರಳವಾಗಿ‌ ನಡೆಯಲಿದೆ.

ಕೊರೋನಾದಂತಹ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ನಮ್ಮ ಮದುವೆ‌ ಮೇಲೂ ಪರಿಣಾಮ ಬೀರುತ್ತದೆ. ಅದ್ದರಿಂದ ಸರಳವಾಗಿ ವಿವಾಹವಾಗುತ್ತಿದ್ದೇವೆ. ಹೊಸ‌ ಜೀವನಕ್ಕೆ ಕಾಲಿಡುತ್ತಿರುವ ನಮಗೆ ಎಲ್ಲರೂ ಆಶೀರ್ವದಿಸಿ, ಹಾರೈಸಿ ಎಂದು ಹೇಳಿಕೊಂಡಿದ್ದಾರೆ. ನಾನು ಸಿನಿಮಾರಂಗದಲ್ಲಿ ಮುಂದುವರೆಯಲೂ ಅಭಿಮಾನಿಗಳೇ ಕಾರಣ. ಇದೇ ಅಭಿಮಾನವನ್ನು ಮುಂದೆಯೂ‌ ಕೊಡಿ.

ಮದುವೆಯಾದ್ಮೇಲೂ ತನ್ನ ನಟನೆಯನ್ನು ಮುಂದುವರಿಸುತ್ತೇನೆ ಎಂದು ಹೇಳಿದ್ದಾರೆ. ನಿಮ್ಮ‌ ಬೆಂಬಲಕ್ಕೆ ಅಭಾರಿಯಾಗಿದ್ದೇನೆ ಎಂದು ಹೇಳುವ‌ ಕಾಜಲ್ ಮದುವೆಯ ಖುಷಿಯಲ್ಲಿದ್ದಾರೆ. ಈ ಖುಷಿಯನ್ನು ಸಾಮಾಜಿಕ ‌ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com