“ತ್ರಯೋದಶ” ದಲ್ಲಿ ಕೈಲಾಶ್‍ಖೇರ್ ಹಾಡು
ಎಸ್.ಎಸ್.ಉಮೇಶ್ ಅವರ ನಿರ್ದೇಶನದಲ್ಲಿ ತಯಾರಾದ 13 ಚಿತ್ರದ ಶೀರ್ಷಿಕೆ ಈಗ ತ್ರಯೋದಶ ಆಗಿದೆ. ಈ ಚಿತ್ರದಲ್ಲಿ ಕೇವಲ 2 ಎರಡು ಹಾಡುಗಳ ಮಾತ್ರವಿದ್ದು ಅದರಲ್ಲಿ ಒಂದು ಹಾಡು ಸಂಪೂರ್ಣವಾಗಿ ಹಿಂದಿ ಭಾಷೆಯಲ್ಲಿದೆ. ಅದನ್ನು ಗಾಯಕ ಕೈಲಾಶ್‍ಕೇರ್ ಹಾಡಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿದಿದ್ದು ಪ್ರಥಮ ಪ್ರತಿ ಕೂಡ ಸಿದ್ದವಾಗಿದ್ದು ಸದ್ಯದಲ್ಲೇ ಬಿಡುಗಡೆ ಕಾಣಲಿದೆ. ತ್ರಯೋದಶ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಎಸ್.ಎಸ್.ಉಮೇಶ್ ಗರುಡಪುರಣಾದಲ್ಲಿರುವಂತೆ ಯಾವುದೇ ಒಂದು ಜೀವಿಯು ಸತ್ತ ಮೇಲೆ 13 ದಿನಗಳ ಕಾಲ ಅದರ ಆತ್ಮ ಭೂಮಿಯಲ್ಲೇ ಸುತ್ತಾಡುತ್ತಿರುತ್ತದೆ ಎಂದು ಹೇಳಲಾಗಿದೆ. ಈ ಸಮಯದಲ್ಲಿ ನಡೆಯುವ ಘಟನೆಗಳೆ ತ್ರಯೋದಶ ಚಿತ್ರದ ಕಥಾ ಹಂದರ. ಬೀದರ್, ಬೆಂಗಳೂರು ಸುತ್ತ ಮುತ್ತ ಈ ಚಿತ್ರಕ್ಕೆ ಚಿತ್ರೀಕರಣ ನಡೆಸಲಾಗಿದೆ.
ಡಾ|| ಅಶೋಕ್ ಕುಮಾರ್ ಬಿ ನಾಗೊರೆ, ಹಾಗೂ ಎಂ.ಕಾಳಯ್ಯ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಗುಂಡ್ಲುಪೇಟೆ ಸುರೇಶ್ ಛಾಯಾಗ್ರಹಣ, ಎ.ಎಂ.ನೀಲ್ ಸಂಗೀತ, ವಿ.ವಿಜಯ್., ಎಸ್.ಎಸ್.ಉಮೇಶ್ ಸಾಹಿತ್ಯ, ತ್ರಿಭುವನ್ ನೃತ್ಯ ನಿರ್ದೇಶನ ಕೆ.ಎಂ.ಪ್ರಕಾಶ್, ಸಂಕಲನ, ಮಾಸ್ ಮಾದ ಸಾಹಸ, ರಘು ಕಲಾನಿರ್ದೇಶನವಿದೆ. ದೀಪು, ಚೈತ್ರ, ಅರ್ಚನಾ, ರಮೇಶ್ ಭಟ್, ಮಹೇಶ್, ರಮೇಶ್ ಪಂಡಿತ್, ಸುದಿಗೌಡ, ಪವನ್, ಧರ್ಮ, ಶಶಿಕಲಾ, ಸೂರ್ಯಕಾಂತ್, ನಾಗಮಾರಪಳ್ಳಿ ಮುಂತಾದವರ ತಾರಾ ಬಳಗವಿದೆ.