‘ಕಡೆಮನೆ’ಯಲ್ಲಿ ಹಾರರ್ ಕಥನ
ಹಳ್ಳಿಯೊಂದರಲ್ಲಿ ಪಡ್ಡೆ ಹುಡುಗರು ಮಾಡುವಂತಹ ಅವಾಂತರ ಅದರಿಂದಾಗುವ ಪರಿಣಾಮ ಇವುಗಳನ್ನೆಲ್ಲಾ ಹಾರರ್ ಕಥೆಯೊಂದರೆ ಹಿನ್ನೆಲೆಯಲ್ಲಿ ಹೇಳುವ ಪ್ರಯತ್ನ ಮಾಡಲಾಗಿರುವ ಚಿತ್ರ ‘ಕಡೆಮನೆ’. ಗ್ರಾಮದ ಕಡೆಮನೆಯಲ್ಲಿ ನಡೆಯುವ ಕುತೂಹಲಕಾರಿ ಘಟನೆಗಳನ್ನು ತೆರೆಯ ಮೇಲೆ ತರುತ್ತಿರುವವರು ವಿನಯ್, ರಘುವರ್ಧನ್ ಹಾಗೂ ರಾಮ್ ದೀಪ್ ಬಳಿ ಕೆಲಸ ಮಾಡಿ ಅನುಭವ ಇರುವ ವಿನಯ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರದ ಚಿತ್ರೀಕರಣ ಮುಗಿದಿದ್ದು, ಇದೀಗ ಪೋಸ್ಟ್ ಪ್ರೊಡಕ್ಷನ್ಸ್ ಹಂತದಲ್ಲಿದೆ. ಈ ಚಿತ್ರದಲ್ಲಿ 3 ಹಾಡುಗಳಿದ್ದು ತುಮಕೂರು, ಮಂಡ್ಯ, ಮೈಸೂರು ಹಾಗೂ ಶ್ರೀರಂಗಪಟ್ಟಣದ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಹಾರರ್ ಹಾಗೂ ಕಾಮಿಡಿ ಹಿನ್ನೆಲೆಯ ಕಥಾಹಂದರವಿದೆ.
[amazon_link asins=’B01GEAOHJY,B00OT9CS5S,B01H3540MI,B01CGETR6K,B07114XBLM,B0751PCVBV,B0751QCKVZ,B0751PFZ46,B06ZYH3N59,B06ZYH3F2G’ template=’ProductCarousel’ store=’flixoye25-21′ marketplace=’IN’ link_id=’269dc07d-164f-11e8-8708-eb1e27f782e7′]ಕೀರ್ತನ ಕ್ರಿಯೇಷನ್ಸ್ ಲಾಂಛನದಲ್ಲಿ ನಂದನ್ ಎಸ್.ತುಮಕೂರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಗೌತಮ್ ಶ್ರೀವತ್ಸ ಸಂಗೀತ, ಮಧುಸೂದನ್, ಶ್ಯಾಮ್ ಛಾಯಾಗ್ರಹಣ, ರಘುನಾಥ್ ಸಂಕಲನ, ಅರುಣ್ ನೃತ್ಯ ನಿರ್ದೇಶನ, ಅಶೋಕ್ ಸಾಹಸ, ಧನಂಜಯ, ವಿಜಯ್ ಸಂಭಾಷಣೆ, ಲೋಕೇಶ್ ಸಾಹಿತ್ಯವಿದೆ. ಯುವರಾಜ್, ಕಲ್ಪನ, ಬಾಲ್‍ರಾಜ್‍ವಾಡಿ, ಆಯೇಷಾ, ಕೂಡಿರಂಗ, ಬ್ಯಾಂಕ್ ಜನಾರ್ಧನ್, ಸಿಲ್ಲಿಲಲ್ಲಿ ಶ್ರೀನಿವಾಸ್‍ಗೌಡ್ರು, ಮಂಡ್ಯ ಸಿದ್ದು, ವಿಜಯ್ ಇಂದ್ರಜಿತ್ ಗಜ ಇನ್ನು ಮುಂತಾದವರ ತಾರಾಬಳಗವಿದೆ.