“ಕಾನೂರಾಯಣ” ಚಿತ್ರದ ಧ್ವನಿಸುರುಳಿ ಬಿಡುಗಡೆ
ಸದಭಿರುಚಿಯ ಚಿತ್ರಗಳನ್ನು ನೀಡುತ್ತಾ ಪ್ರೇಕ್ಷಕರ ಮನಸ್ಸನ್ನು ಗೆದ್ದಂತೆ ಟಿ.ಎಸ್. ನಾಗಾಭರಣ ನಿರ್ದೇಶನದಲ್ಲಿ ಸಿದ್ಧವಾದಂತ “ಕಾನೂರಾಯಣ” ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ ನಿನ್ನೆ ಕೆ.ಎಸ್. ಸಿ.ಎ ಹಾಲ್ ನಲ್ಲಿ ಅದ್ಧೂರಿಯಾಗಿ ನೆರವೇರಿತು. ಈ ಚಿತ್ರವು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಸ್ವ ಸಹಾಯ ಸಂಘಗಳ ಒಕ್ಕೂಟ ಟ್ರಸ್ಟ್ ವತಿಯಿಂದ ನಿರ್ಮಾಣವಾಗಿದೆ.
ಗ್ರಾಮೀಣ ಅಭಿವೃದ್ಧಿಯ ಕುರಿತಾದ ಕಥಾ ಹಂದರವಾಗಿದು ಆರ್ಥಿಕ ಶಿಸ್ತು ವಿಚಾರವನ್ನು ಇಟ್ಟುಕೊಂಡು ಹಳ್ಳಿಯಲ್ಲಿ ನಡೆಯುವ ಹಲವು ಘಟನೆಗಳ ಸುತ್ತ ಈ ಕಾನೂರಾಯಣ ಸಾಗಲಿದೆಯಂತೆ. ಹೆಣ್ಣುಮಕ್ಕಳ ಶಿಸ್ತು , ಬದ್ಧತೆ , ಬದುಕಿನ ದಿಕ್ಕಿಗೆ ಯಾವ ಯಾವ ವಿಚಾರಗಳು ಮುಖ್ಯ ಎಂಬುದನ್ನು ಈ ಚಿತ್ರದ ಮೂಲಕ ಹೇಳಲು ಹೊರಟಿದ್ದಾರoತೆ.ಈ ಚಿತ್ರ ನಿರ್ಮಾಣವಾಗಿರುವುದೇ ಒಂದು ಬಹಳ ವಿಶೇಷವಾಗಿದೆ.
ಈ ಸ್ವಸಹಾಯ ಸಂಘದ ವತಿಯಿಂದ ಸುಮಾರು 20 ಲಕ್ಷ ಮಂದಿಯಿಂದ 20 ರೂಪಾಯಿಯಂತೆ ಹಣವನ್ನು ತೊಡಗಿಸುವ ಮೂಲಕ 4 ಕೋಟಿ ಹಣವನ್ನು ಸಂಗ್ರಹಿಸಿದ್ದಾರೆ. ಈ ಹಣದೊಂದಿಗೆ ಚಿತ್ರ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇದರ ಮೂಲ ಉದ್ದೇಶ ಸ್ವ ಸಹಾಯ ಸಂಘದಿಂದ ಆಗುವ ಉಪಯೋಗ ಹಾಗೂ ಮಹಿಳೆಯರು ಯಾವ ರೀತಿ ಬದುಕನ್ನು ಕಟ್ಟಿಕೊಳ್ಳಬಹುದು ಎಂಬ ವಿಚಾರವನ್ನು ಈ ಚಿತ್ರದ ಮೂಲಕ ಹೇಳಲು ಹೊರಟಿದ್ದಾರೆ. ಇದರ ಜತೆಗೆ ಹಳ್ಳಿ ನಡೆಯುವ ಕೆಲವು ಘಟನೆಗಳು ಕೂಡ ಕಾರಣ ಸಿಗಲಿದೆಯಂತೆ ಮತ್ತೊಂದು ವಿಶೇಷವೆಂದರೆ ಈ ಚಿತ್ರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಕೂಡ 20 ರೂಪಾಯಿಗಳನ್ನು ನೀಡಿದ್ದಾರಂತೆ. ಶ್ರುತಾಲಯ ಫಿಲಂಸ್ ಮೂಲಕ ಡಾ. ಮಂಜುನಾಥ್ ಕಾರ್ಯಕಾರಿ ನಿರ್ಮಾಪಕರಾಗಿದ್ದು ಟಿ.ಎಸ್. ನಾಗಾಭರಣ ನಿರ್ದೇಶನವಿರುವ ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತವನ್ನು ನೀಡಿದ್ದು ಚಿತ್ರದಲ್ಲಿ ನ ಒಟ್ಟು 5 ಹಾಡುಗಳನ್ನು ನಿನ್ನೆ ಲೋಕಾರ್ಪಣೆ ಮಾಡಲಾಯಿತು. ಈ ಚಿತ್ರದಲ್ಲಿ ಹಿರಿಯ ನಟ ದೊಡ್ಡಣ್ಣ , ಸುಂದರ್ ರಾಜ್ , ಸೋನು ಗೌಡ ಸೇರಿದಂತೆ ಹಲವಾರು ಯುವ ಪ್ರತಿಭೆಗಳು ಕೂಡ ಅಭಿನಯಿಸಿದ್ದಾರೆ. ಇದೊಂದು ಗಿನ್ನಿಸ್ ದಾಖಲೆಯ ಚಿತ್ರ ಎಂದು ಕರೆಯಬಹುದು. ಯಾಕೆಂದರೆ ಇದೇ ಪ್ರಥಮ ಬಾರಿಗೆ ವಿಶ್ವದಲ್ಲೇ 20 ಲಕ್ಷ ಮಂದಿ ಹಣವನ್ನು ಹಾಕಿ ಚಿತ್ರ ನಿರ್ಮಿಸಿರೋದು ಎಂದರೆ ತಪ್ಪಾಗಲಾರದು.ಒಟ್ನಲ್ಲಿ ಕಾನೂರಾಯಣ ಚಿತ್ರದ ಈ ಪ್ರಯತ್ನವನ್ನು ಮೆಚ್ಚಲೇಬೇಕು