“ಖಾಲಿದೋಸೆ ಕಲ್ಪನ” ಳನ್ನು ಕರೆತರುತ್ತಿದ್ದಾರೆ ಪೂಜಾರಿ “ಶರಣ್”

Published on

374 Views


ಜೋಗಿ ಖ್ಯಾತಿಯ ಬಿಟ್ಟ ಆದಿ ಲೋಕೇಶ್ ನಾಯಕನಾಗಿ ನಟಿಸಿದ್ದ
ಪೂಜಾರಿ ಚಿತ್ರದ ಮೂಲಕ ನಿರ್ದೇಶಕರಾಗಿ ಭರವಸೆ ಮೂಡಿಸಿದ್ದ
ಶರಣ್ ಕಬ್ಬೂರ್ ಅವರು ಖಾಲಿದೋಸೆ ಕಲ್ಪನ ಎಂಬ ಹೊಸ
ಚಿತ್ರವೊಂದನ್ನು ನಿರ್ದೇಶನ ಮಾಡಲಿದ್ದಾರೆ‌. ಬಹಳ ದಿನಗಳ ನಂತರ
ನಿರ್ದೇಶನಕ್ಕೆ ಮತ್ತೆ ಬಂದಿದ್ದಾರೆ. ಈ ಚಿತ್ರದ ಮೂಲಕ ಸಂಜಯ್ ಗೌಡ
ಎಂಬ ಯುವ ಪ್ರತಿಭೆಯ ನಟ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ
ಮಾಡುತ್ತಿದ್ದಾರೆ‌. ಶುಭಾ ಪೂಂಜಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ
ಕಬ್ಬೂರ್ ಪ್ರೋಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ವಾಗಲಿರುವ
ಈ ಚಿತ್ರಕ್ಕೆ ಅಭಿಮಾನ್ ರಾಯ್ ಅವರು ಸಂಗೀತ ಸಂಯೋಜನೆ
ಮಾಡಲಿದ್ದಾರೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು,
ಈ ಚಿತ್ರದ ಚಿತ್ರೀಕರಣ ಇದೇ ತಿಂಗಳ 23ರಿಂದ ಶುರುವಾಗಲಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com