ಕೆ.ಮಂಜು ಪುತ್ರ ‘ಪಡ್ಡೆಹುಲಿ’

Published on

511 Views

ಕೆ.ಮಂಜು ಪುತ್ರ ‘ಪಡ್ಡೆಹುಲಿ’

ನಿರ್ದೇಶಕ ಗುರು ದೇಶಪಾಂಡೆ ‘ಸಂಹಾರ’ ಚಿತ್ರದ ನಂತರ ‘ಪಡ್ಡೆಹುಲಿ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಕಿಚ್ಚ ಸುದೀಪ್ ಬಿಡುಗಡೆಗೊಳಿಸಿದ್ದರು. ಇದೇ ಮೊದಲ ಬಾರಿಗೆ ಕನ್ನಡ ಭಾಷೆಯಲ್ಲಿ ಪ್ರೊಮೋ ಶೂಟ್ ಮಾಡಲು 45 ರಿಂದ 50 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಬೆಂಗಳೂರಿನ ಗೋಲ್ಡ್ ಪಿಂಚ್ ಹೋಟೆಲ್‌ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ‌ಕೆ.ಮಂಜು ಪುತ್ರ ಶ್ರೇಯಸ್ ನನ್ನು ಪರಿಚಯ ಮಾಡಿಸಲಾಯಿತು. ಶ್ರೇಯಸ್ ಗೆ ನಾಯಕಿಯಾಗಿ ನಿಶ್ಚಿತಾ ನಟಿಸುತ್ತಿದ್ದಾರೆ. ಮಾರ್ಚ್ 11 ರಂದು ಬೆಳಿಗ್ಗೆ 8.55ಕ್ಕೆ ಬನಶಂಕರಿಯ ಶ್ರೀ ಧರ್ಮ ಗಿರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನಡೆಯಲ್ಲಿರುವ ಮುಹೂರ್ತ ಸಮಾರಂಭಕ್ಕೆ ಶಿವಣ್ಣ , ಪುನೀತ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಕಿಚ್ಚ ಸುದೀಪ್ ಕ್ಲಾಪ್ ಮಾಡಲಿದ್ದು, ಭಾರತಿ ವಿಷ್ಣುವರ್ಧನ್ ಜ್ಯೋತಿ ಬೆಳಗಿಸಲಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com