ಕಾಶೀನಾಥ್, ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ನಿರ್ದೇಶಕ, ನಿರ್ಮಾಪಕ
ಕಾಶೀನಾಥ್, ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ನಿರ್ದೇಶಕ, ನಿರ್ಮಾಪಕ – ಕುಂದಾಪುರ ಕೋಟೇಶ್ವರದ ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಜನನ
– ಉಪೇಂದ್ರ, ಮನೋಹರ್, ಸುನೀಲ್‍ಕುಮಾರ್ ದೇಸಾಯಿ ಮುಂತಾದ ಹೆಸರಾಂತ ನಿರ್ದೇಶಕರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಖ್ಯಾತಿ – ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೆಬ್ಬಿಸಿದ ಕಾಶೀನಾಥ್ – ನಟನೆ, ನಿರ್ದೇಶನ, ಸಂಗೀತ ನಿರ್ದೇಶನ ಹಾಗೂ ಚಿತ್ರ ನಿರ್ಮಾಣದಲ್ಲಿ ಕೈಚಳಕ – ವಿಭಿನ್ನ ಶೈಲಿಯ ಚಿತ್ರಗಳು ಯಶಸ್ಸಿನ ಉತ್ತುಂಗಕ್ಕೇರಿ ಗಲ್ಲಾಪೆಟ್ಟಿಗೆಯನ್ನು ಸೂರೆ ಹೊಡೆದವು – ಅವರ ಗರಡಿಯಲ್ಲಿ ಪಳಗಿದ ಅನೇಕ ಯುವಕರು ಇಂದು ಚಿತ್ರರಂಗದಲ್ಲಿ ಬಹಳ ಯಶಸ್ವಿಯಾಗಿದ್ದಾರೆ.
– ಅವರ ಚಿತ್ರಗಳಲ್ಲಿ ಪ್ರಮುಖವಾದವು ಅನಂತನ ಅವಾಂತರ, ಅನುಭವ, ಹೆಂಡತಿ ಎಂದರೆ ಹೇಗಿರಬೇಕು ಇತ್ಯಾದಿ – ಮಂಗಳೂರು ಮಂಜುನಾಥ ಚಿತ್ರದ ಸಂಭಾಷಣೆಗಳು ಬಹಳ ಜನಪ್ರಿಯವಾಗಿವೆ –
ಇವರ ಅಜಗಜಾಂತರ(೧೯೯೧) ಎಂಬ ಚಿತ್ರವನ್ನು ಹಿಂದಿಯಲ್ಲಿ ಜುದಾಯಿ (೧೯೯೭) ಎಂದು ರೀಮೇಕ್ ಮಾಡಲಾಗಿದೆ – ಇದರಲ್ಲಿ ಅನಿಲ್ ಕಪೂರ್, ಶ್ರೀದೇವಿ ಹಾಗೂ ಊರ್ಮಿಳಾ ಮಾತೋಂಡ್ಕರ್ ಅಭಿನಯಿಸಿದ್ದಾರೆ – ಕಡಿಮೆ ವೆಚ್ಛದಲ್ಲಿ ಉತ್ತಮ ಚಿತ್ರಗಳನ್ನು ನಿರ್ಮಿಸುವಲ್ಲಿ ಸಿದ್ಧಹಸ್ತರು
ನಿರ್ಮಿಸಿದ ಚಿತ್ರಗಳು : ೧೧- ಕನ್ನಡ, ೧- ಹಿಂದಿ, ೧- ತೆಲುಗುಚಿತ್ರಕಥೆ ಮತ್ತು ನಿರ್ದೇಶನ : ೧೩- ಕನ್ನಡ, ೨- ಹಿಂದಿ, ೧- ತೆಲುಗುಸಂಭಾಷಣೆ ಬರೆದದ್ದು : ೭- ಕನ್ನಡಚಿತ್ರಗೀತೆ : ೩- ಕನ್ನಡಸಂಗೀತ ನಿರ್ದೇಶನ : ೧- ಕನ್ನಡ, ೧- ತೆಲುಗುನಟನೆ : ೩೬- ಕನ್ನಡ, ೧- ತೆಲುಗು