ಜೋಗಿ ಪ್ರೇಮ್ ರವರ ಹೊಸ ಅವತಾರ ‘ಐ ಆ್ಯಮ್ ಕಲ್ಕಿ’

Published on

367 Views

ಖ್ಯಾತ ಚಿಂತಕ ,ಸಿನಿಮಾ ನಟ ನಿರ್ದೇಶಕ, ಪತ್ರಕರ್ತ ಚಂದ್ರಚೂಡ್ ಅವರು ‘ಐ ಆ್ಯಮ್ ಕಲ್ಕಿ’ ಎಂಬ ಹೊಸ
ಸಿನಿಮಾವೊಂದನ್ನು ಅನೌನ್ಸ್ ಮಾಡಿದ್ದಾರೆ. ಜೋಗಿ ಖ್ಯಾತಿಯ ಪ್ರೇಮ್ ಈ ಚಿತ್ರದ ನಾಯಕನಾಗಿದ್ದು, ಈ ಚಿತ್ರದಲ್ಲಿ ಮಲಯಾಳಂ, ತಮಿಳು ಚಿತ್ರರಂಗದಲ್ಲಿ ಹೆಸರು ಮಾಡಿರೋ ನಟ ಬಾಬ್ಬಿ ಸಿಂಹ ಕೂಡಾ ನಟಿಸಲಿದ್ದಾರಂತೆ. ನಾಯಕಿ ಹೆಸರು ಇನ್ನು ಬಹಿರಂಗವಾಗಿಲ್ಲ. ನಟ ಸಂಗೀತ ನಿರ್ದೇಶಕ ಸಾಧು ಕೋಕಿಲ ಅವರ ಪುತ್ರ ಸುರಾಗ್ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಪ್ರೇಮ್ ರವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಈ ಚಿತ್ರದ ಪೋಸ್ಟರ್ ಹಾಕಿ ಶುಭಾಶಯ ಕೋರಿದ್ದಾರೆ ಚಂದ್ರಚೂಡ್ ರವರು. ಡಿಸೆಂಬರ್ ತಿಂಗಳಲ್ಲಿ ಚಿತ್ರ ಸೆಟ್ಟೇರಲಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com