ಪರಸಂಗ ಚಿತ್ರಕ್ಕೆ ಜೋಗಿ ಪ್ರೇಮ್ ಸಂಭಾಷಣೆ

Published on

433 Views

ಪರಸಂಗ ಕನ್ನಡ ಸಿನಿಮಾ ಮಾಧುರ್ಯ ತುಂಬಿದ ಹಾಡುಗಳಿಂದ ಸದ್ದು ಮಾಡುತ್ತಿದೆ. ಈ ಚಿತ್ರಕ್ಕೆ ಮರಳಿ ಬಾರದ ಊರಿಗೆ… (ಡಾ ಲೋಲಾಕ್ಷಿ ಅವರ ರಚನೆ) ಎಂಬ ಹಾಡನ್ನು ಖ್ಯಾತ ನಿರ್ದೇಶಕ ಜೋಗಿ ಪ್ರೇಮ್ ಅವರ ಕಂಠ ಸಿರಿಯಲ್ಲಿ ಹೊರಹೊಮ್ಮಿದ್ದು ಅನೇಕ ಕೇಳುಗರ ಮೆಚ್ಚುಗೆಯನ್ನು ಪಡೆದುಕೊಡಿದೆ.

ಈಗಿನ ಸುದ್ದಿ ಏನಪ್ಪಾ ಅಂದರೆ ಅದೇ ಜೋಗಿ ಪ್ರೇಮ್ ಪರಸಂಗ ಚಿತ್ರದಲ್ಲಿ ಬರುವ ಪ್ರಮುಖ ಸಂಭಾಷಣೆಯನ್ನು ಇತ್ತೀಚಿಗೆ ಹೇಳಿದ್ದನ್ನು ರೆಕಾರ್ಡ್ ಮಾಡಿಕೊಳ್ಳಲಾಗಿದೆ. ಏನಿದು ಸಂಭಾಷಣೆ ಅಂತೀರಾ…ಅದೇ ಸಸ್ಪೆನ್ಸ್. ಚಿತ್ರ ಬಿಡುಗಡೆ ಆದಾಗಲೇ ಕೇಳುವುದು ಚಂದಾ ಅನ್ನುತ್ತಾರೆ ನಿರ್ದೇಶಕ, ಕಥೆಗಾರ, ಸಂಭಾಷಣೆಗಾರ ಕೆ ಎಂ ರಘು.

ಮಿತ್ರ, ಅಕ್ಷತ,ಮನೋಜ್,ಮಜಾ ಟಾಕೀಸ್ ಪವನ್, ಚಂದ್ರಪ್ರಭಾ, ಕಾಮಿಡಿ ಕೀಳದಿಗಳು ಸಂಜು ಬಸಯ್ಯ, ಗೋವಿಂದೆ ಗೌಡ, ತರುಣ್ ಸುಧೀರ್ ಅಭಿನಯಿಸಿರುವ `ಪರಸಂಗ’ ಚಿತ್ರದ ಛಾಯಾಗ್ರಾಹಕರು ಸುಜೈಕುಮಾರ್, ಸಂಗೀತ ಹರ್ಷವರ್ಧನ, ಸಂಕಲನ ಕೆ ಎಂ ಪ್ರಕಾಶ್ ಮಾಡಿದ್ದಾರೆ.

ಆದ್ಯ ಸಿನಿಮಾ ಅಡಿಯಲ್ಲಿ ಪರಸಂಗ…ತಿಮ್ಮನ ಕಥೆ ಚಿತ್ರವನ್ನ ಕೆ ಎಂ ಲೋಕೇಶ್, ಕುಮಾರ್ ಎಚ್, ಮಹಾದೇವ ಗೌಡ ಎಂ ಜೊತೆಯಾಗಿ ಮಾಡಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com