500ರ ಸಂಭ್ರಮದಲ್ಲಿ “ಜೋ ಜೋ ಲಾಲಿ”
ಅನೇಕ ಮನರಂಜನಾ ಸಾಧನೆಗಳನ್ನು 25 ವರ್ಷಗಳಿಂದ ಮಾಡುತ್ತ ಬಂದಿರುವ ಉದಯ ಟವಿ ಕರುನಾಡ ಜನತೆಗೆ ಬಲು ಪ್ರೀತಿಯ ಚಾನಲ್. ವಿಶಿಷ್ಟ ಮತ್ತು ವಿನೂತನ ಕಥೆ ಗಳನ್ನು ನೀಡುತ್ತೀರುವ ಸಾಕಷ್ಟು ಧಾರಾವಾಹಿಗಳು ಸಾವಿರಾರು ಕಂತುಗಳನ್ನು ಪೂರೈಸಿ ಯಶಸ್ವಿಯಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಅವುಗಳ ಸಾಲಿನಲ್ಲಿ ಈಗ “ಜೋ ಜೋ ಲಾಲಿ” 500 ಕಂತನ್ನು ಯಶಸ್ವಿಯಾಗಿ ಮುಗಿಸಿದೆ.
ಜ್ಯೋತಿ ರೈ , ನಾರಾಯಣ ಸ್ವಾಮಿ , ಮಹಾಲಕ್ಷ್ಮಿ , ರಘು ಬೀರೂರ್, ಕೃಷ್ಣ ನಾಡಿಗ್ , ನಯನಾ ಶೆಟ್ಟಿ , ದೇವಯ್ಯ ಹೀಗೆ ಅದ್ಭುತ ತಾರಾ ಬಳಗ ಹೊಂದಿದ ತಾಯಿ ಮಗುವಿನ ಬಾಂಧವ್ಯದ ಅಪರೂಪದ ಕಥೆಯನ್ನು ಹೇಳುವ “ಜೋ ಜೋ ಲಾಲಿ”ಗೆ ಈಗ 500 ಸಂಚಿಕೆಯ ಸಂಭ್ರಮ.
ಆದರ್ಶದಂಪತಿಗಳಂತೆ ಇರುವ ರುಕ್ಮಿಣಿ ಮಾಧವನ ಜೋಡಿ ಒಂದ್ಕಡೆ, ರಾಧಾ ಪ್ರೀತಂ ಪವಿತ್ರ ಪ್ರೀತಿ ಇನ್ನೊಂದೆಡೆ , ಇವರುಗಳ ಜೊತೆಗೆ ಯಾರನ್ನೂ ನೆಮ್ಮದಿಯಿಂದ ಇರೋಕೆ ಬಿಡದ ವಿರೋಧಿ ಮಹೇಶ್ವರಿ, ಈ ರೀತಿ ಪ್ರತಿ ಪಾತ್ರವೂ ವಿಶೇಷ, ವಿಭಿನ್ನ ಮತ್ತು ಮನಸ್ಸು ಮುಟ್ಟುವಂತದ್ದು ಈ ಧಾರಾವಾಹಿ ಉನ್ನತಿಗೆ ಕಾರಣವಾಗಿದೆ.
ಜೋ ಜೋ ಲಾಲಿಯಲ್ಲಿ ಈಗ ಮಹತ್ತರ ತಿರುವು ಪಡೆದಿದೆ. ಕಥೆಯಲ್ಲಿ ನಿಖಿಲ್ ಅನ್ನೋ ಒಂದು ಹೊಸ ಪಾತ್ರದ ಪರಿಚಯವಾಗಿದೆ, ಸಾವಿಗೆ ಹತ್ತಿರವಾಗುತ್ತಿರುವ ರುಕ್ಮಿಣಿ, ಸೇಡು ಹೊತ್ತಿರೊ ಮಹೇಶ್ವರಿ , ಅವಳ ಸಹಾಯಕ್ಕೆ ನಿಂತಿರೊ ನಿಖಿಲ್, ರಾಧಾ ಪ್ರೀತಂ ಮದುವೆ ಹೀಗೆ ಹಲವಾರು ವಿಷಯಗಳ ಅದ್ಭುತ ಕಂತುಗಳನ್ನು ಹೊಂದಿದೆ ಜೋ ಜೋ ಲಾಲಿ.
“ಈ ಧಾರಾವಾಹಿ ನನ್ನ ವೃತ್ತಿ ಬದುಕಲ್ಲಿ ಬಹಳ ವಿಶೀಷ ಪಾತ್ರ ವಹಿಸುತ್ತದೆ. ಇಂದು ನಮ್ಮ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. 500 ಸಂಚಕೆ ಪೂರೈಸಿದ್ದು ಬಹಳ ತೃಪ್ತಿ ಕೊಟ್ಟಿದೆ. ಇದಕ್ಕೆ ಕಾರಣರಾದ ಎಲ್ಲರಿಗೂ ನನ್ನ ಕೃತಜ್ಞತೆಗಳು” ಎಂದು ಜೋ ಜೋ ಲಾಲಿಯ ನಿರ್ದೆಶಕ ಶಿಡ್ಲಘಟ್ಟ ಶ್ರೀನಿವಾಸ್ ಹೇಳಿದ್ದಾರೆ.
“ಕಥೆಯ ವೇಗಕ್ಕೆ ಅನುಸಾರವಾಗಿ ಪಾತ್ರಗಳಿಗೆ ತಕ್ಕಂತೆ ಕಥೆಯನ್ನು ಬರೆದಿರುವುದು ಬಹಳ ಸಂತಸ ತಂದಿದೆ. ಇದಕ್ಕೆ ಸ್ಪಂದಿಸಿದ ನನ್ನ ತಂಡಕ್ಕೆ ಧನ್ಯವಾದಗಳು ಹಾಗೆ ವೀಕ್ಷಕರಿಗೆ ನನ್ನ ತುಂಬು ಹೃದಯದ ಅಭಿನಂದನೆಗಳು” ಎಂದು ಕಥೆಗಾರ ಶೇಖರ ಸಂತಸ ಹಂಚಿಕೊಂಡಿದ್ದಾರೆ.
“500ರ ಸಂಭ್ರಮದಲ್ಲಿ ನಾವಿದ್ದೀವಿ ಎನ್ನುವುದು ಸಂತಸದ ವಿಷಯ. ನಾನು ಎಲ್ಲಿಗೇ ಹೋಗಲಿ ರುಕ್ಮಿಣಿ ಎಂತಲೇ ಕರೆಯುತ್ತಾರೆ ಅಷ್ಟೋಂದು ಜನಕ್ಕೆ ಹತ್ತಿರವಾಗಿದ್ದೇನೆ ಎನ್ನುವುದು ಖುಷಿಯ ಸಂಗತಿ.ಅದಕ್ಕಾಗಿ ನಮ್ಮನ್ನು ಹಾರೈಸಿದ ವೀಕ್ಷಕರಿಗೆ ರುಣಿಯಾಗಿದ್ದೇನೆ” ಎನ್ನುವುದು ನಟಿ ಜ್ಯೋತಿ ರೈ ಅವರ ಅಭಿಪ್ರಾಯ.
ಜೋ ಜೋ ಲಾಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6:30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.