250ರ ಸಂಚಿಕೆಯತ್ತ “ಜೋ ಜೋ ಲಾಲಿ” | Jo Jo Laali 250 Episode Special

Published on

528 Views

250ರ ಸಂಚಿಕೆಯತ್ತ “ಜೋ ಜೋ ಲಾಲಿ”
ಸೋಮವಾರದಿಂದ ಶುಕ್ರವಾರ ಸಂಜೆ 6.30ಕ್ಕೆ ಉದಯ ಟಿವಿಯಲ್ಲಿ
ಇಬ್ಬರ ಅಮ್ಮಂದಿರ ಪ್ರೀತಿಯ ಕಥೆ ಎಂದು ಹೇಳುತ್ತಾ , ಅಮ್ಮಂದಿರ ಕಥೆಯನ್ನ 2017 ರಲ್ಲಿ ಹೊತ್ತು ತಂದಿತ್ತು ಉದಯ ಟಿವಿ ಅದುವೆ ಜೋ ಜೋ ಲಾಲಿ . ಟೈಟಲ್ ಸಾಂಗ್ ನಿಂದಲೆ ಜನಮನಗೆದ್ದ ಧಾರಾವಾಹಿ ಇದೀಗ 250 ಕಂತುಗಳನ್ನ ಪೂರೈಸಿದೆ. ರುಕ್ಮಿಣಿ ಮಾಧವ ರಾಧಾ ಪ್ರೀತಂ ಈ ನಾಲ್ಕು ಜನರ ಬದುಕಲ್ಲಿ ನಡೆಯೋ ತಿರುವುಗಳು ರುಕ್ಮಿಣಿ ರಾಧಾರನ್ನ ಬೆಸೆಯೋ ಕರುಳ ಬಳ್ಳಿಯ ನಂಟು ಜೋ ಜೋ ಲಾಲಿಯ ಕಥಾ ಹಂದರ.

ಮಕ್ಕಳಿಲ್ಲದ ರುಕ್ಮಿಣಿ ಮಾಧವ, ಬಾಡಿಗೆ ತಾಯಿ ಮುಖಾಂತರ ಮಗುವನ್ನು ಪಡೆಯುತ್ತಾರೆ. ಹೂವಿನಿಂತ ಮನಸಿರೊ ರಾಧಾ, ತನ್ನ ತಾಯಿ ಮತ್ತು ಪ್ರೀತಿಸಿದ ಪ್ರೀತಂ ನ ಪ್ರಾಣ ಉಳಿಸೋಕೆ ಬಾಡಿಗೆ ತಾಯಿ ಆಗೋ ನಿರ್ಧಾರ ಮಾಡುತ್ತಾಳೆ. ಹೆತ್ತ ತಾಯಿಯಾಗಿ ಮಗುವಿನ ಜೊತೆಗೆ ಮಮಕಾರ ಬೆಳೆಸಿಕೊಂಡಿರೊ ರಾಧಾ, ಇಷ್ಟು ವರ್ಷ ಕಾದು ಮಡಿಲಲ್ಲಿ ಮಗುವನ್ನು ಕಾಣೋ ಆಸೆಯಲ್ಲಿ ರುಕ್ಮಿಣಿ, ಇದರ ನಡುವೆ ವಿಲನ್ ಮಹೇಶ್ವರಿ ಕುತಂತ್ರಗಳನ್ನ ಮಾಡಿ ಸೋತಿದ್ದಾಳೆ. ಈ ರೀತಿ ಸೆಂಟಿಮೆಂಟ್ಸ್, ತಿರುವುಗಳನ್ನ ಹೊತ್ತು ತರೋ ಜೋ ಜೋ ಲಾಲಿ ಯಶಸ್ವಿಯಾಗಿ 250 ಕಂತುಗಳನ್ನ ಪೂರೈಸಿದೆ. ಜೋ ಜೋ ಲಾಲಿಯಲ್ಲಿ ಪ್ರತಿಭಾವಂತ ಕಲಾವಿದರ ಬಳಗವೇ ಇದೆ. ಜೋತಿ ರೈ, ನಾರಾಯಣಸ್ವಾಮಿ , ನಯನ ಶೆಟ್ಟಿ, ದೇವಯ್ಯ, ಕೃಷ್ಣ ನಾಡಿಗ್, ಮಹಾಲಕ್ಷ್ಮಿ ಸೇರಿದಂತೆ ಹಲವಾರು ದೊಡ್ಡ ಕಲಾವಿದರ ದಂಡೆ ಇದೆ.

ಅಲ್ಲಲ್ಲಿ ಬರುವ ಕವನಗಳು, ರೋಮಾಂಟಿಕ್ ದೃಶ್ಯಗಳು ಛಾಯಾಚಿತ್ರ ನೋಡುವ ಅನುಭವ ಕೊಡುವ ಜೋ ಜೋ ಲಾಲಿ ಭಾವನಾತ್ಮಕ ಬರವಣಿಗೆಗೆ ಒಂದು ಸವಾಲೆಂದು ಹೇಳುತ್ತಾರೆ ಜೋ ಜೋ ಲಾಲಿಯ ಸಂಭಾಷಣಕಾರರಾದ ಚೈತ್ರಿಕಾ ಹೆಗಡೆ.

ಅಂತೂ ರುಕ್ಮೀಣಿ ಮಡಿಲಿಗೆ ಮಗು ಬಂದಾಯಿತು. ರುಕ್ಮೀಣಿಗೆ ಕೊಟ್ಟ ಮಗು ತಾನು ಹೆತ್ತ ಮಗು ಎಂಬುದು ರಾಧಾಳಿಗೆ ತಿಳಿಯುತ್ತಾ? ರಾಧಾ ಪ್ರೀತಂ ಮದುವೆಯಾಗ್ತಾರಾ? ರಾಧಾ ಮಾಧವನಿಗೆ ಎರಡನೇ ಹೆಂಡ್ತಿಯಾಗ್ತಾಳಾ? ಹೀಗೆ ಕೇಳಿಬರುವ ಪ್ರಶ್ನೆಗಳಿಗೆ ಮುಂದೆ ಸಾಕಷ್ಟು ತಿರುವುಗಳು ಇವೆ ಕಾದು ನೋಡಿ ಎಂದು ಉತ್ತರಿಸುತ್ತಾರೆ ಕಥೆಗಾರ ಶೇಖರ್.

ಕಥೆ, ಸಂಭಾಷಣೆಗೆ ಬಣ್ಣ ಹಚ್ಚಿ ರೂಪ ಕೊಡೋದೆ ನಿರ್ದೇಶಕರು, ಜೋ ಜೋಲಾಲಿಯ ಧಾರಾವಾಹಿಯ ಹಲವಾರು ವಿಶೇಷತೆಗಳಲ್ಲಿ ಮುಖ್ಯವಾದುದು, ವಿಭಿನ್ನ ಬೆಳಕಿನಲ್ಲಿ ಚಿತ್ರಿಕರಿಸುವ ಮಾದರಿ ಹಾಗು ದೃಶ್ಯಗಳನ್ನ ಸುಂದರವಾಗಿ ಕಟ್ಟಿಕೊಡುವ ರೀತಿ. ಇದಕ್ಕೆ ಕಾರಣಕರ್ತರಾಗಿರೋ ನಿರ್ದೇಶಕರು ತ್ರಿಶೂಲ್, `’ಜೋ ಜೋ ಲಾಲಿ ನನ್ನ ವೃತ್ತಿ ಬದುಕಿನ ಒಂದು ಪ್ರಮುಖ ಘಟ್ಟ. ತಾಯಿ ಮಗುವಿನ ಸಂಬಂಧವಿದೆ, ಪ್ರಾಣಕಿಂತ ಹೆಚ್ಚು ಪ್ರೀತಿಸೊ ಜೋಡಿಯಿದೆ, ಆದರ್ಶವೆಂಬಂತಿರೊ ದಂಪತಿಯಿದ್ದಾರೆ, ಹೇಗೆ ಬೇರೆ ಬೇರೆ ಸಂಬಂಧಗಳು, ಎಲ್ಲವನ್ನ ಒಗ್ಗೂಡಿಸಿ ಸನ್ನಿವೇಶಗಳನ್ನ ಮಾಡೋದೆ ಒಂದು ಖುಷಿ.” ಎನ್ನುತ್ತಾರೆ.

“ಈ ಪಾತ್ರ ನನ್ನ 19 ವರ್ಷ ವೃತ್ತಿ ಜೀವನದಲ್ಲಿ ನನಗೆ ಸಿಕ್ಕಂತ ಬಹಳ ಅಚ್ಚುಮೆಚ್ಚಿನ ಪಾತ್ರ. ಪ್ರತಿ ದೃಶ್ಯ ಮಾಡೋವಾಗಲು ಖುಷಿ, ಮುಂದೇನಾಗುತ್ತೆ ಅನ್ನೊ ಕಾತುರತೆ ನಮ್ಮ ಸೆಟ್ ಅಲ್ಲಿ ಇದ್ದೆ ಇರುತ್ತೆ, ಈ ಧಾರಾವಾಹಿ ಜನರ ಮನಸಲ್ಲಿ ಪ್ರಭಾವ ಬೀರಿದೆ ಅಂದರೆ ನಮ್ಮ ಶ್ರಮಕ್ಕೆ ಪ್ರತಿಫಲಸಿಕ್ಕಂತೆ . 250 ಕಂತುಗಳು ಮುಗಿಸಿದ್ದೀವಿ, ಹೀಗೆ ನಿಮ್ಮ ಪ್ರೀತಿ ಜೋ ಜೋ ಜೊತೆಗಿರಲಿ” ಎನ್ನುತ್ತಾರೆ ಮಾಧವನ ಪಾತ್ರ ನಿರ್ವಹಿಸುತ್ತಿರೊ ನಾರಾಯಣಸ್ವಾಮಿ.

‘ಹಾಸ್ಯ ಧಾರಾವಾಹಿ ಮುಖಾಂತರ ಪರಿಚಿತಳಾದವಳು ನಾನು, ಮೊದಲಿಗೆ ಈ ಪಾತ್ರ ಹೇಗೋ ಏನೋ ಅನ್ನೊ ಭಯ ಕಾಡ್ತಿತ್ತು. ಆದರೆ, ರಾಧಾಳ ಪಾತ್ರ ನನಗೆ ಅರಿವಿಲ್ಲದೆ ನನ್ನೋಳಗೆÉ ವೈಬ್ರೇಷನ್ ಸೃಷ್ಟಿಸಿದೆ. ಆ ಕಡೆಗೆ ಆಟಾವಾಡಿಕೊಂಡು, ಪ್ರೀತಿಸಿದವನ ಜೊತೆಗೆ ಖುಷಿಯಲ್ಲಿರೊ ಹುಡುಗಿ, ಮತ್ತೊಂದೆಡೆ ಬಾಡಿಗೆ ತಾಯಿಯಾಗಿ ಮೌನಿಯಾಗ್ತಾ ಜವ್ಬಾದಾರಿ ಹೊರುತ್ತಾಳೆ, ಹೀಗೆ ಎರಡು ಶೇಡ್ ಅಲ್ಲಿ ನಟಿಸೋಕೆ ಖುಷಿಯಾಗುತ್ತೆ. ಅಳುವ ದೃಶ್ಯಗಳಲ್ಲಿ ಎಷ್ಟೊ ಸಲ ನಿಜವಾಗಲೂ ಭಾವುಕಳಾಗಿ ಅತ್ತಿರೊದುಂಟು.” ಎನ್ನುತ್ತಾರೆ ರಾಧಾ ಪಾತ್ರ ಮಾಡುತ್ತಿರುವ ನಯನಾಶೆಟ್ಟಿ.

‘ತಾಯ್ತತನದ ಪಾತ್ರಗಳನ್ನ ಈ ಮುಂಚೆ ಅಭಿನಯಿಸಿದ್ದೀನಿ, ಆ ಪಾತ್ರಗಳಲ್ಲಿ ಪ್ರಬುಧ್ದತೆ ಇತ್ತು , ಆದರೆ ಜ್ಯೋತಿ ರೈ ರುಕ್ಮಿಣಿಯಾಗಿದ್ದು ಹೊಸ ಹೆಜ್ಜೆ , ರುಕ್ಮಿಣಿ ತುಂಬ ಸೂಕ್ಷ್ಮ , ಮಗುವಿನ ವಿಚಾರ ಬಂದಾಗ ಅಳುಮುಂಜಿ , ಅತ್ತಿಗೆ ಕೆಟ್ಟವರು ಅಂತ ಗೊತ್ತಿದ್ದರು ಅವರನ್ನ ನಂಬುವಷ್ಟು ಮುಗ್ಧೆ. ನನಗೆ ಈ ಪಾತ್ರ ಇಷ್ಟಾ ಆಗಿದ್ದೆ ಇಲ್ಲಿ, ಮಾಧವನ ಬಗ್ಗೆ ರುಕ್ಮಿಣಿಗಿರೊ ಪ್ರೀತಿ, ಮಗುವನ್ನು ಕಂಡಾಗ ಅವಳಿಗೆ ಆಗೋ ಆನಂದ ಹೀಗೆ ಹೇಳುತ್ತಾ ಹೋದರೆ ನೂರೆಂಟು . ರುಕ್ಮಿಣಿ ಪಾತ್ರ ಬಹಳ ಸ್ಪೆಷಲ್” ಎನ್ನುತ್ತಾರೆ ಜ್ಯೋತಿ ರೈ.

ಜೋ ಜೋ ಲಾಲಿಯ 250ರ ಸಂಚಿಕೆಯ ಲಾಲಿ ಸೋಮವಾರದಿಂದ ಸಂಜೆ 6.30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.

Sorry, no posts matched your criteria.

More Buzz

Trailers 10 months ago

Rudra Garuda Purana Official Teaser Starring Rishi, Priyanka

Trailers 10 months ago

Pepe Kannada Movie Trailer Starring Vinay Rajkumar

BuzzKollywood Buzz 10 months ago

The GOAT Movie: Trailer ಗೂ ಟ್ರೈಲರ್ ರಿಲೀಸ್ ಮಾಡಿದ ವಿಜಯ್ ನಟನೆಯ ಚಿತ್ರತಂಡ

Buzz 10 months ago

Daali Pictures: ವಿದ್ಯಾಪತಿ ಮೂಲಕ ಕರಾಟೆ ಕಿಂಗ್ ಆದ ನಾಗಭೂಷಣ, ಪ್ರೊಮೋ ಬಗ್ಗೆ ಸಿಕ್ತು ಬಿಗ್ ಅಪ್ ಡೇಟ್

BuzzTrailers 10 months ago

Laughing Buddha Trailer – ಪ್ರಮೋದ್ ಶೆಟ್ರ ಡೊಳ್ಳೊಟ್ಟೆ ಪೊಲೀಸ್ ಪಾತ್ರ ನೋಡಿದ್ರಾ? ಟ್ರೈಲರ್ ಇಲ್ಲಿದೆ ನೋಡಿ.

Buzz 10 months ago

Samarjith Lankesh: ಇಂದ್ರಜಿತ್ ಲಂಕೇಶ್ ಮಗನ ಜೊತೆ ಹುಚ್ಚೆದ್ದು ಕುಣಿದು ‘ಕಿಸ್’ ಕೊಟ್ಟ ಉಪೇಂದ್ರ – ವೈರಲ್ ವಿಡಿಯೋ ಇಲ್ಲಿದೆ!

Buzz 10 months ago

Abhishek Aishwarya Divorce – ನಾವು ಡಿವೋರ್ಸ್ ಪಡೆಯಲಿದ್ದೇವೆ ಎಂದ ಅಭಿಷೇಕ್‌ ಬಚ್ಚನ್ ವಿಡಿಯೋ ವೈರಲ್ – ಅಸಲಿಯತ್ತೇನು?

Buzz 10 months ago

Tharun Sonal Marriage: ಸಪ್ತಪದಿ ತುಳಿಯಲಿರುವ ತರುಣ್ – ಸೋನಲ್, ನಟಿ ನಿರ್ದೇಶಕ ಜೋಡಿಗೆ ಹಲವಾರು ಗಣ್ಯರ ಆಶೀರ್ವಾದ

Buzz 10 months ago

Bheema Movie Review: ಫುಲ್ ಆಕ್ಷನ್, ಸ್ಟಾರ್ಟ್ ಟು ಎಂಡ್ ಸಖತ್ ಮಾಸ್ – ದುನಿಯಾ ವಿಜಿ ಭೀಮ ಥಿಯೇಟರ್ ಕಿಂಗ್

BuzzTollywood Buzz 10 months ago

Naga Chaithanya – Shobhitha Dhulipala: ದೀರ್ಘಕಾಲದ ಗೆಳತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಸಮಂತಾ ಮಾಜಿ ಪತಿ ನಾಗಚೈತನ್ಯ

BuzzTollywood Buzz 10 months ago

Mr.Bachchan ಆದ ರವಿತೇಜ – ಚಿತ್ರದ ಟ್ರೈಲರ್ ನಲ್ಲಿ ‘ಮಾಸ್ ಮಹಾರಾಜ’ನ ಕಮಾಲ್

BuzzShort Films 10 months ago

Kanjoos Kubera Short Film Official Video: ಕಂಜ್ಯೂಸ್ ಕುಬೇರ ಕನ್ನಡ ಕಿರುಚಿತ್ರ ನೋಡಿ.

Copyright ©2025 . All Rights Reserved. privacy | terms Whatsapp: 9538193653 Email: hello@flixoye.com