‘ಕಾಡ’ನ ಅವತಾರದಲ್ಲಿ ಜೆ.ಕೆ

Published on

465 Views

ಈಗಾಗಲೇ ಬಿಡುಗಡೆಯಾದ ‘ಕಾಡ’ ಚಿತ್ರದ ಪೋಸ್ಟರ್ ನಿಂದಲೇ ಇದೊಂದು ಕ್ರೈಂ ಥ್ರಿಲ್ಲರ್ ಸಿನಿಮಾ ಎಂಬುದು ಸ್ಪಷ್ಟವಾಗುತ್ತದೆ. ‘ಕಾಡ’ ಇದೊಂದು ಮಾನಸಿಕ ಕ್ಷೋಭೆಗೆ ಒಳಗಾದ ವ್ಯಕ್ತಿಯ ಬಗೆ ಹೆಣೆಯಲಾಗಿರುವ ಕಥೆಯಾಗಿದ್ದು, ಕಾಲ್ಪನಿಕ ಕಥೆಗೆ ನೈಜತೆಯನ್ನು ತುಂಬಿದ್ದಾರೆ. ಈ ಚಿತ್ರವನ್ನು ವಿಶ್ರುತ್ ನಾಯಕ್ ನಿರ್ದೇಶನ ಮಾಡುತ್ತಿದ್ದು, ಕಾಡನಾಗಿ ರಗಡ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಜೆ.ಕೆ. ಈಗಾಗಲೇ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಮುಂದಿನ ತಿಂಗಳ ಮೊದಲ ವಾರದಲ್ಲಿ ಎರಡನೇ ಹಂತದ ಚಿತ್ರೀಕರಣ ಆರಂಭವಾಗಲಿದೆ.

ಈ ಚಿತ್ರವನ್ನು‌ ದೆಹಲಿ ಮೂಲದ ನಿರ್ಮಾಣ ಸಂಸ್ಥೆ ಸ್ಪೆಂಡಿಡ್ ಪ್ರೊಡಕ್ಷನ್ ನಲ್ಲಿ ಈ ನಿರ್ಮಾಣವಾಗಲಿದೆ. ಇದು ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲೂ ಬಿಡುಗಡೆಯಾಗಲಿದೆ. ‘ನಿರ್ದೇಶಕರು ಕಥೆ ಹೇಳುವಾಗ ಜಗತ್ತಿನಲ್ಲಿ ಇಂತಹ ವ್ಯಕ್ತಿಗಳು ಇರುತ್ತಾರಾ ಎಂದು‌ ಒಂದು ಕ್ಷಣ ನಾನೇ ಅಚ್ಚರಿಪಟ್ಟೆ. ಕಥೆ ಇಂಟ್ರೆಸ್ಟಿಂಗ್ ಅನಿಸಿತು ಅದಕ್ಕಾಗಿ ಒಪ್ಪಿಕೊಂಡೆ’ ಎನ್ನುತ್ತಾರೆ ಜೆ.ಕೆ. ಈ‌ ಚಿತ್ರದಲ್ಲಿ ಜೆ.ಕೆ ಗೆ ನಾಯಕಿಯಾಗಿ ಕಾವ್ಯ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ತಾರಾಗಣದಲ್ಲಿ ಅಚ್ಯುತ್ ಕುಮಾರ್, ಉಗ್ರಂ ಮಂಜು ಮುಂತಾದವರು ಚಿತ್ರದಲ್ಲಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com