250ರ ಸಂಚಿಕೆಯಯತ್ತ ಹರಿದ“ಜೀವನದಿ”

Published on

216 Views

250ರ ಸಂಚಿಕೆಯಯತ್ತ ಹರಿದ“ಜೀವನದಿ”

ಸಾಮಾನ್ಯ ಕುಟುಂಬದಲ್ಲಿ ಜನಿಸಿ ಎಲ್ಲ ಕಷ್ಟಗಳನ್ನು ಸಹಿಸಿ ಅಸಾಮಾನ್ಯವಾಗಿ ಬೆಳೆದ ಹುಡುಗಿಯರೋಚಕಕಥೆಜೀವನದಿ. ಕನ್ನಡದ ಪ್ರತಿಷ್ಠಿತ ವಾಹಿನಿಗಳಲ್ಲೊಂದಾದ ಉದಯಟಿವಿಯಲ್ಲಿಸೋಮವಾರದಿಂದ ಶುಕ್ರವಾರದವರೆಗೆರಾತ್ರಿ 9ಕ್ಕೆ ಪ್ರಸಾರವಾಗುತ್ತಿರುವಜೀವನದಿಗೆ 250ರ ಸಂಭ್ರಮ. ಸಿಲ್ವರ್ ಜೂಬ್ಲಿಜೋಷ್ನಲ್ಲಿರುವ ಈ ಕಥೆಇನ್ಮುಂದೆ ಹೊಸ ನಾಯಕಿಯೊಂದಿಗೆ ಹೊಸರೂಪದಲ್ಲಿ ನಿಮ್ಮೆದುರು ಬರಲಿದೆ.

ಜ್ಯೋತಿ ಮಧ್ಯಮ ವರ್ಗದಲ್ಲಿ ಜನಿಸಿದ ಸಾಮಾನ್ಯ ಹೆಣ್ಣು ಮಗಳು. ಓದಬೇಕು ಸಾಧಿಸಬೇಕುತಾನು ಹುಟ್ಟಿದ ಮಣ್ಣಿಗೆಏನಾದರೂಕೊಡುಗೆ ನೀಡಬೇಕು ಎಂಬ ಹಂಬಲವಿರುವ ದಿಟ್ಟೆ. ಆದರೆ ವಿಧಿ ಅವಳ ಬೆನ್ನಿಗೆಚೂರಿ ಹಾಕುತ್ತದೆ. ತನ್ನತಾಯಿಯದುರಾಸೆಯಿಂದಓದುವ ವಯಸ್ಸಿನಲ್ಲೇ ಮದುವೆಯಾಗಿ ಪಡಬಾರದ ಪಾಡು ಪಡುತ್ತಾಳೆ. ಇತ್ತತವರಿನಲ್ಲೂ ಬೇಡದವಳಾಗಿ ಅತ್ತಗಂಡನ ಮನೆಯಲ್ಲೂಇರಲಾರದೆಒಂದು ಮಗುವಿನ ತಾಯಿಯಾಗುತ್ತಾಳೆ. ನಂತರ ಅವಳ ಬದುಕುಎತ್ತ ಸಾಗುತ್ತದೆ. ಮಗುವಿನ ಲಾಲನೆ ಪಾಲನೆಗಳನ್ನು ಹೇಗೆ ಪೋಷಿಸುತ್ತಾಳೆ. ಜ್ಯೋತಿತನ್ನಗುರಿಯನ್ನು ಮುಟ್ಟುವಲ್ಲಿ ಸಫಲಳಾಗುತ್ತಾಳಾ? ಇದೇಜೀವನದಿಯ ಒಳಸುಳಿ.

ಹೇಗೆ ನದಿಯೊಂದುಎಲ್ಲೋ ಹುಟ್ಟಿಎಲ್ಲೋ ಹರಿದು ಮತ್ತೆಲ್ಲೋ ಸಾಗರದಲ್ಲಿ ಲೀನಳಾಗುತ್ತಾಳೋ ಅದೇರೀತಿ ಪ್ರತಿ ಹೆಣ್ಣಿನಲ್ಲೂಜೀವನದಿಯಒಂದಂಶವಿರುತ್ತದೆ. ಜೀವನದಿ ಧಾರಾವಾಹಿಯಲ್ಲಿಒಂದು ಹೊಸ ಟ್ವಿಸ್ಟ್‍ಇದೆ. ರೂಪ ಬೇರೆಯಾದರು ಭಾವಒಂದೇಇರುವುದು ಎಂಬ ನಾಣ್ಣುಡಿಯ ಹಾಗೆ ಜ್ಯೋತಿ ಪಾತ್ರಧಾರಿ ಬೇರೆಯಾದರೂ ಅವಳ ಪಾತ್ರ ಪೋಷಣೆ ಸ್ವಲ್ಪವೂ ಬದಲಾಗಿಲ್ಲ. ಹೊಸ ಜ್ಯೋತಿಯಾಗಿಇನ್ನು ಮುಂದೆಅರ್ಚನಾ ನಿಭಾಯಿಸಲಿದ್ದಾರೆ. ಹಲವು ಧಾರಾವಾಹಿ ಮತ್ತುರಂಗಭೂಮಿಯಲ್ಲಿ ಪಳಗಿರುವ ಅರ್ಚನಾಜ್ಯೋತಿ ಪಾತ್ರವನ್ನುಒಂದು ಸವಾಲಾಗಿ ಸ್ವೀಕರಿಸಿರುವುದಾಗಿ ಹೇಳುತ್ತಾರೆ. ಸೈಯ್ಯದ್‍ಅಶ್ರಫರವರನಿರ್ದೇಶನದಲ್ಲಿ ಈ ಪಾತ್ರವನ್ನು ನಿಭಾಯಿಸುವುದರಲ್ಲಿ ನಾನು ಸಫಲಳಾಗುತ್ತೇನೆ ಎಂದುಅರ್ಚನಾಅವರಅಭಿಪ್ರಾಯ. ಜೀವನದಿ ಧಾರಾವಾಹಿಯನ್ನು ಪ್ರತಿಷ್ಠಿತ ಪ್ರೊಡಕ್ಷನ್ ಕಂಪನಿ ಮೀಡಿಯಾ ಹೌಸ್ ನಿರ್ಮಿಸುತ್ತಿರುವುದು ಮತ್ತೊಂದು ವಿಶೇಷ.ಜೀವನದಿಗೆ 250 ರಕಂಗ್ರಾಟ್ಸ್‍ಜೊತೆಗೆ ಹೊಸ ಜ್ಯೋತಿಯಾಗಿ ಬರುತ್ತಿರುವಅರ್ಚನಾಗೆಆಲ್ ದಿ ಬೆಸ್ಟ್.

250 ಸಂಚಿಕೆ ಪೂರ್ಣಗೊಂಡ “ಜೀವನದಿ” ಸೋಮವಾರದಿಂದ ಶುಕ್ರವಾರದವರೆಗೆರಾತ್ರಿ 9ಕ್ಕೆ ಉದಯಟಿವಿಯಲ್ಲಿ ಪ್ರಸಾರವಾಗುತ್ತದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com