ಯಾಜಮಾನ ಚಿತ್ರದಲ್ಲಿ ಜಲ್ಲಿಕಟ್ಟು ಗೂಳಿಗಳು
ದರ್ಶನ ಅಭಿನಯದ ‘ಯಜಮಾನ’ ಚಿತ್ರದಲ್ಲಿ ಗೂಳಿಗಳ ಪಾತ್ರ ಪ್ರಮುಖವಾದದು, ‘ಯಜಮಾನ’ ಚಿತ್ರದ ಪೋಸ್ಟರ್ ನೋಡಿದರೆ ನಮಗೆ ಅಲ್ಲಿ ಗೂಳಿಗಳು ಕಾಣಸಿಗುತ್ತವೆ. ಅದ್ರೆ ಈ ಸಿನಿಮಾದಲ್ಲಿ ಗೂಳಿಗಳ ಪಾತ್ರವೇನು? ಎಂಬುದೇ ಎಲ್ಲರಲ್ಲೂ ಕುತೂಹಲವನ್ನು ಮೂಡಿಸಿದೆ. ಈ ಗೂಳಿಗಳು ಸಾಮಾನ್ಯವಾದುದ್ದಲ್ಲ. ಇದು ತಮಿಳುನಾಡಿನಲ್ಲಿ ಜಲ್ಲಿಕಟ್ಟುವಿನಲ್ಲಿ ಬಳಸುವ ಗೂಳಿಗಳಾಗಿದ್ದು, ‘ಯಜಮಾನ’ ಚಿತ್ರಕ್ಕೆ ಹತ್ತು ಗೂಳಿಗಳು ಬೇಕಾಗಿದ್ದರಿಂದ ಒಂದು ದಿನಕ್ಕೆ ಹತ್ತು ಸಾವಿರ ರೂಪಾಯಿ ನೀಡಿ, ಈ ಚಿತ್ರದಲ್ಲಿ ಜಲ್ಲಿಕಟ್ಟು ಗೂಳಿಗಳನ್ನು ಬಳಸಿಕೊಳ್ಳಲಾಗಿದೆ. ಗೂಳಿಗಳನ್ನು ಅಲ್ಲಿಂದ ತರಬೇಕಾದ್ರೆ ಆರ್.ಟಿ.ಓ ಪರ್ಮಿಮಿಷನ್, ಪ್ರಾಣಿದಯ ಸಂಘದಿಂದ ಅನುಮತಿ ಆ ಗೂಳಿಗಳ ಜೊತೆ 30ಜನರು ಅಲ್ಲಿಂದ ಬರುತ್ತಾರೆ. ಅನುಮತಿಯನ್ನು ಪಡೆದು ಅಲ್ಲಿಂದ ಗೂಳಿಗಳನ್ನು ತರಲಾಗಿದೆ ಎಂದಿದ್ದಾರೆ .
“ಹೀಗೆ ಒಂದು ದಿನ ಶೂಟಿಂಗ್ ನಡೆಯಬೇಕಾದರೇ ಆ ಗೂಳಿಗಳ ಪೈಕಿ ಒಂದು ಗೂಳಿ ನಿಯಂತ್ರಣ ತಪ್ಪಿ ತಪ್ಪಿಸಿಕೊಂಡು, ಅಲ್ಲಿರುವ ಜನರನ್ನು ಅಟ್ಟಾಡಿಸಿತ್ತು. ನಂತರ ಅದನ್ನು ಹಿಡಿದು ನಿಲ್ಲಿಸಲಾಯಿತೆಂದು ಭಯಾನಕ ಅನುಭವವನ್ನು ಚಿತ್ರತಂಡ ಹಂಚಿಕೊಂಡಿತ್ತು. ಆರಂಭದಲ್ಲಿ ದಿಂಡಕಲ್ ಗೆ ಹೋಗಿ ಬರಿ ಗೂಳಿಗಳ ಶೂಟ್ ಮಾಡುವ ಪ್ಲ್ಯಾನ್ ಮಾಡಿದ್ರಂತೆ ನಿರ್ದೇಶಕ ಪಿ.ಕುಮಾರ್. ನಂತರ ನಿರ್ಮಾಪಕಿ ಶೈಲಜಾ ನಾಗ್ ರವರು ಧೈರ್ಯ ಮಾಡಿ ಗೂಳಿಗಳನ್ನು ತರುವ ನಿರ್ಧಾರ ಮಾಡಿ ನೈಜವಾಗಿ ಶೂಟ್ ಮಾಡಲಾಯಿತು ಎಂದು ಹೇಳುತ್ತಾರೆ. ಈ ಜಲ್ಲಿಕಟ್ಟು ಗೂಳಿಗಳ ಜೊತೆ ದರ್ಶನ್ ನ ಫಾರ್ಮ್ ಹೌಸ್ನಲ್ಲಿರುವ ಹಸುವನ್ನು ಕೂಡ ಬಳಸಿಕೊಳ್ಳಲಾಗಿದೆಯಂತೆ.ಯಾಜಮಾನ ಚಿತ್ರದಲ್ಲಿ ಗೂಳಿಗಳದು ಪ್ರಮುಖ ಪಾತ್ರವಿದೆಯಂತೆ . ದರ್ಶನ್ ಪಾತ್ರಕ್ಕೂ ಈ ಗೂಳಿಗಳಿಗೂ ಸಂಬಂಧವಿದೆ ಹಾಗಾಗಿ ಜಲ್ಲಿಕಟ್ಟು ಗೂಳಿಗಳನ್ನು ತರಲಾಗಿದೆ ಎನ್ನುತ್ತಾರೆ ನಿರ್ದೇಶಕ ಪಿ.ಕುಮಾರ್.