ಜೈ ಜಗದೀಶ್ ಹಾಗೂ ವಿಜಯ್ ಲಕ್ಷ್ಮೀ ಸಿಂಗ್ ಅವರ ಮಕ್ಕಳ “ಯಾನ” ಕಥೆ

Published on

523 Views

ಕನ್ನಡ ಚಿತ್ರರಂಗದ ಖ್ಯಾತ ನಟ ನಿರ್ಮಾಪಕ ಜೈ ಜಗದೀಶ್ ಹಾಗೂ ನಟಿ ನಿರ್ದೇಶಕಿ ವಿಜಯ್ ಲಕ್ಷ್ಮೀ ಸಿಂಗ್ ದಂಪತಿಯ ಮೂವರು
ಮಕ್ಕಳಾದ ವೈಭವಿ, ವೈಷ್ಣವಿ ಹಾಗೂ ವೈನಿಧಿ ಅವರು ಕನ್ನಡ ಚಿತ್ರರಂಗಕ್ಕೆ ಏಕಕಾಲದಲ್ಲಿ ಪಾದಾರ್ಪಣೆ ಮಾಡುತ್ತಿರುವ “ಯಾನ” ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದ್ದು ಸದ್ಯದಲ್ಲೇ ಟೀಸರ್ ಹಾಗೂ
ಹಾಡುಗಳು ಬಿಡುಗಡೆಯಾಗಲಿವೆ. ತಮ್ಮ ಹೋಂ ಬ್ಯಾನರ್ ಅಡಿಯಲ್ಲಿಯೇ
ಈ ಚಿತ್ರ ನಿರ್ಮಾಣವಾಗುತ್ತಿದ್ದು ತಮ್ಮ ಮಕ್ಕಳ ಚಿತ್ರವನ್ನು ವಿಜಯ್ ಲಕ್ಷ್ಮೀ ಸಿಂಗ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ “ಸಿಂಪಲ್‌’ ಸುನಿ ಅವರು ಸಂಭಾಷಣೆ ಬರೆದಿದ್ದಾರೆ. ಕರಂ ಚಾವ್ಲಾ ಅವರ ಛಾಯಾಗ್ರಹಣ, ಜೋಶ್ವಾ ಶ್ರೀಧರ್‌ ಅವರ ಸಂಗೀತ ಸಂಯೋಜನೆ, ಬಿ.ಎಸ್.ಕೆಂಪರಾಜ್ ಅವರ ಸಂಕಲನ ಈ ಚಿತ್ರಕ್ಕಿದೆ. ವಿಜಯಲಕ್ಷ್ಮೀ ಸಿಂಗ್‌ ಮತ್ತು ಜೈಜಗದೀಶ್‌ ಜೊತೆಗೆ ಹರೀಶ್‌ ಶೇರಿಗಾರ್‌ ಮತ್ತು ಶರ್ಮಿಳಾ ಶೇರಿಗಾರ್‌ ಅವರು ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ.

i

Copyright ©2026 . All Rights Reserved. privacy | terms Whatsapp: 9538193653 Email: hello@flixoye.com