ಇದು ರಾಕಿಂಗ್ ದಂಪತಿಗಳ ನೆಚ್ಚಿನ ಈವೆಂಟ್ ಅಂಡ್ ವೆಡ್ಡಿಂಗ್ ಫೋಟೋಗ್ರಫಿ ಸಂಸ್ಥೆ
‘ಫೋಕಸ್ ಫೋಟೋಗ್ರಫಿ ಸರ್ವಿಸ್’ ಅಂದ್ರೇನೇ ಸೆಲೆಬ್ರೆಟಿಗಳ ಚಂದದ ಫೋಟೋಶೂಟ್ ಹಿಂದಿನ ಶಕ್ತಿ.
ಈಗಂತೂ ಯಾವುದೇ ಸಮಾರಂಭವಾದ್ರೂ ಸರಿ ಸಂತೋಷದ ಘಳಿಗೆಗಳನ್ನ ಫೋಟೋಶೂಟ್, ವೀಡಿಯೋ ಮಾಡೋ ಮೂಲಕ ಸೆರೆ ಹಿಡಿದು ನೆನಪುಗಳನ್ನ ಜೀವಂತವಾಗಿ ಸಂಭ್ರಮಿಸುವ ಟ್ರೆಂಡ್ ಜೋರಾಗಿದೆ. ಪ್ರಿ ವೆಡ್ಡಿಂಗ್, ಎಂಗೇಜ್ ಮೆಂಟ್, ಮದುವೆ, ಸೀಮಂತ, ಗೃಹ ಪ್ರವೇಶ ಅನೇಕ ಕಾರ್ಯಕ್ರಮಗಳ ಮೆರುಗನ್ನ ಹೆಚ್ಚಿಸಲೆಂದೇ ಈಗ ತರಹೇವಾರಿ ಟೆಕ್ನಾಲಜಿಯೊಂದಿಗೆ ಫೋಟೋಶೂಟ್ ಈವೆಂಟ್ ಮ್ಯಾನೇಜ್ ಮೆಂಟ್ ಸಂಸ್ಥೆಗಳು ತಲೆ ಎತ್ತಿವೆ. ಅಂತಹ ಸಂಸ್ಥೆಗಳಲ್ಲಿ ‘ಫೋಕಸ್ ಫೋಟೋಗ್ರಫಿ ಸರ್ವಿಸ್’ ಸಂಸ್ಥೆ ಚಂದನವನದ ಅಂಗಳದಲ್ಲಿ ಮುಂಚೂಣಿಯಲ್ಲಿದೆ.
ಹೌದು, 2015 ರಲ್ಲಿ ಆರಂಭಗೊಂಡ ಈ ಸಂಸ್ಥೆ ಸೆಲೆಬ್ರೆಟಿಗಳ ಅಚ್ಚು ಮೆಚ್ಚಿನ ಈವೆಂಟ್ ಅಂಡ್ ವೆಡ್ಡಿಂಗ್ ಪೋಟೋಶೂಟ್ ಸಂಸ್ಥೆ. ಸ್ಯಾಂಡಲ್ ವುಡ್ ರಾಕಿಂಗ್ ದಂಪತಿಗಳಾದ ಯಶ್ ಮತ್ತು ರಾಧಿಕಾ ಪಂಡಿತ್ ಪರ್ಸನಲ್ ಹಾಗೂ ಸಿನಿ ಸಂಬಂಧಿತ ಎಲ್ಲಾ ಚಂದದ ಸ್ಟಿಲ್ಸ್ ಹಿಂದೆ ‘ಫೋಕಸ್ ಫೋಟೋಗ್ರಫಿ ಸರ್ವಿಸ್’ ತಂಡದ ಶ್ರಮವಿದೆ. ರಾಕಿಂಗ್ ದಂಪತಿಗಳಿಗೆ ಇವರ ಸಂಸ್ಥೆ ಎಂದರೆ ಅಚ್ಚುಮೆಚ್ಚು. ಅಷ್ಟೇ ಅಲ್ಲ ಅವರ ಮನೆಯ ಎಲ್ಲಾ ಕಾರ್ಯಕ್ರಮಗಳಿಗೂ ಫೋಕಸ್ ಫೋಟೋಗ್ರಫಿ ಸರ್ವಿಸ್ ತಂಡದ ಹಾಜರಿ ಇರಲೇಬೇಕು. ಅಷ್ಟರ ಮಟ್ಟಿಗೆ ಯಶ್ ಕುಟುಂಬಕ್ಕೆ ಆತ್ಮೀಯ ಈ ಸಂಸ್ಥೆ.
ಕೆಲಸದಲ್ಲಿ ನೋ ಕಾಂಪ್ರಮೈಸ್, ಟೈಂ ಟು ಟೈಂ ಸರ್ವಿಸ್ ಅನ್ನೋ ಈ ಸಂಸ್ಥೆ ಏಳು ವರ್ಷದಲ್ಲಿ ಈ ಸೂತ್ರದಿಂದಲೇ ಬಹಳ ಎತ್ತರಕ್ಕೆ ಬೆಳೆದಿದೆ. ಎಲ್ಲಾ ರೀತಿಯ ಈವೆಂಟ್ ಹಾಗೂ ವೆಡ್ಡಿಂಗ್ ಫೋಟೋಶೂಟ್ ಗಳನ್ನು ಬಹಳ ಅಚ್ಚುಕಟ್ಟಾಗಿ ಇಲ್ಲಿ ಮಾಡಿಕೊಡಲಾಗುತ್ತೆ. ಪೋಟೋಗ್ರಫಿ, ಎಡಿಟಿಂಗ್ ಎಲ್ಲದಕ್ಕೂ ಸೂಕ್ತ ಮ್ಯಾನ್ ಪವರ್ ಕೂಡ ಇದ್ದು ಇಡೀ ತಂಡ ಪರಿಶ್ರಮ ವಹಿಸಿ ನಿರಂತರವಾಗಿ ದುಡಿಯುತ್ತಿದ್ದಾರೆ. ಇವರ ಕೆಲಸದ ವೈಖರಿ ಹಾಗೂ ಕ್ವಾಲಿಟಿ ನೋಡಿಯೇ ಇಲ್ಲಿವರೆಗೂ ಹೈ ಪ್ರೊಫೈಲ್ ಪ್ರಾಜೆಕ್ಟ್ ಗಳು ಸಂಸ್ಥೆ ಪಾಲಾಗಿದೆ.
ಪಬ್ಲಿಕ್ ಟಿವಿ ರಂಗನಾಥ್ ಮಗಳ ಮದುವೆ, ನಟ ರಮೇಶ್ ಅರವಿಂದ್ ಪರ್ಸನಲ್ ಪೋಟೋ ಶೂಟ್ ಮಗಳ ರಿಸೆಫ್ಷನ್, ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಮನೆ ಹಾಗೂ ಸಿನಿ ಸಂಬಂಧಿತ ಎಲ್ಲಾ ಕಾರ್ಯಕ್ರಮಗಳು, ನಿಖಿಲ್ ಕುಮಾರ್ ಸ್ವಾಮಿ ಎಂಗೇಜ್ ಮೆಂಟ್, ಸಚಿವ ಶ್ರೀರಾಮುಲು ಮಗಳ ಎಂಗೇಜ್ ಮೆಂಟ್,
ಹೊಂಬಾಳೆ ಫಿಲ್ಮಂಸ್ ಎಲ್ಲಾ ಈವೆಂಟ್ ಗಳು ಈ ಎಲ್ಲಾ ಹೈ ಪ್ರೊಫೈಲ್ ಈವೆಂಟ್ ಗಳ ಹಿಂದೆ ದುಡಿದಿರುವ ಸಂಸ್ಥೆ ‘ಫೋಕಸ್ ಫೋಟೋಗ್ರಫಿ’. ಇವರೆಲ್ಲರೂ ತಂಡದ ಶ್ರಮವನ್ನ ಮೆಚ್ಚಿ ಅಪ್ಪಿಕೊಂಡಿರೋದು ಈ ಸಂಸ್ಥೆಯ ಬಲವನ್ನ ದುಪ್ಪಟ್ಟಾಗಿಸಿದೆ.
ಹಾಗಂತ ಚಂದನವನದ ತಾರೆಯರ ಈವೆಂಟ್ ಹಾಗೂ ಫೋಟೋಶೂಟ್ ಮಾತ್ರವಲ್ಲದೇ ಹೊರಗಿನ ಎಲ್ಲಾ ಈವೆಂಟ್ ಗಳನ್ನೂ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದು ಕೊಡುವಲ್ಲಿ ಯಶಸ್ವಿಯಾಗಿದೆ ಫೋಕಸ್ ಫೋಟೋಗ್ರಫಿ ಸಂಸ್ಥೆ.
ಸ್ಯಾಂಡಲ್ ವುಡ್ ಮಾತ್ರವಲ್ಲದೇ ಜನ ಸಾಮಾನ್ಯರ ಬಹುಬೇಡಿಕೆಯ ಸಂಸ್ಥೆಯಾಗಿರುವ ‘ಫೋಕಸ್ ಫೋಟೋಗ್ರಫಿ ಸಂಸ್ಥೆ’ ನಾಗಾರಾಜ್ ಸೋಮಯಾಜಿಯವರ ಕನಸಿನ ಕೂಸು. ‘ಸಂಚಾರಿ’ ರಂಗಭೂಮಿಯಿಂದ ಬಂದ ಇವರು
ಚಿತ್ರರಂಗದ ಚಿರಪರಿಚಿತ ಮುಖ. ಪೋಟೋಗ್ರಫಿಯಲ್ಲಿ ಅಪಾರ ಪ್ಯಾಶನ್ ಇದ್ದಿದ್ದರಿಂದ ಅದು ‘ಫೋಕಸ್ ಪೋಟೋಗ್ರಫಿ ಸರ್ವಿಸ್’ ಸಂಸ್ಥೆ ತೆರೆಯುವವರೆಗೆ ತಂದು ನಿಲ್ಲಿಸಿತ್ತು. ಇದೀಗ ಈ ಸಂಸ್ಥೆ ಏಳು ವರ್ಷ ಯಶಸ್ವಿಯಾಗಿ ಪೂರೈಸಿ ಎಲ್ಲರಿಂದಲೂ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ. ಉತ್ತಮ ಸರ್ವಿಸ್ ಕೊಡಬೇಕು ಅನ್ನೋದಷ್ಟೇ ನಮ್ಮ ಉದ್ದೇಶ. ಅದನ್ನು ಅಚ್ಚುಕಟ್ಟಾಗಿ ನಮ್ಮ ತಂಡ ಪಾಲಿಸಿಕೊಂಡು ಹೋಗುತ್ತಿದ್ದೇವೆ. ನಮ್ಮ ಕೆಲಸ ನೋಡಿಯೇ ಕ್ಲೈಂಟ್ ಜಾಸ್ತಿ ಆಗ್ತಿದ್ದಾರೆ ಇದಕ್ಕಿಂತ ಖುಷಿಯ ಸಂಗತಿ ಇನ್ನೇನಿದೆ ಎನ್ನುತ್ತಾರೆ ನಾಗಾರಾಜ್ ಸೋಮಯಾಜಿ.
ರಂಗಭೂಮಿಯಿಂದ ಬಂದ ನಾಗಾರಾಜ್ ಸೋಮಯಾಜಿ ಅವರಿಗೆ ಸಿನಿಮಾ ನಿರ್ದೇಶನದಲ್ಲಿ ಆಸಕ್ತಿಯಿದ್ದು
‘ದಿ ಬೆಸ್ಟ್ ಆಕ್ಟರ್’ ಎಂಬ 45 ನಿಮಿಷದ ಸಿನಿಮಾ ಮೂಲಕ ತಮ್ಮ ಪ್ರತಿಭೆಯನ್ನೂ ಸಾಬೀತು ಪಡಿಸಿದ್ದಾರೆ.
ನಿಮ್ಮ ನೆಚ್ಚಿನ ಸೆಲೆಬ್ರೆಟಿ ಫೋಟೋಗಳನ್ನ ನೋಡಿ ವಾವ್ ಎಷ್ಟು ಸಖತ್ ಆಗಿ ಪೋಟೋ ತೆಗೆದಿದ್ದಾರೆ ಅಂತಿರೋರು ಡೈರೆಕ್ಟ್ ಆಗಿ ‘ಫೋಕಸ್ ಫೋಟೋಗ್ರಫಿ ಸರ್ವಿಸ್’ ತಂಡವನ್ನ ಭೇಟಿ ಮಾಡಿ, ನಿಮ್ಮ ಜೀವನದ ಚಂದದ ಕ್ಷಣಗಳನ್ನು ಸೆರೆಹಿಡಿದುಕೊಳ್ಳಬಹುದು.