ಏವಿಯೇಷನ್ ಇಂಡಸ್ಟ್ರಿಯಲ್ಲಿ ಸಾದನೆಯ ಮೆಟ್ಟಿಲೇರುತ್ತಿರುವ ರೊಹಿನಿ ರಾವ್ .
ಏವಿಯೇಷನ್ ಇಂಡಸ್ಟ್ರಿಯಲ್ಲಿ ಸಾದನೆಯ ಮೆಟ್ಟಿಲೇರುತ್ತಿರುವ ರೊಹಿನಿ ರಾವ್ .
Director of Fledge Institute of aviation and hospitality, Vijaynagar
ಏವಿಯೇಷನ್ ಇಂಡಸ್ಟ್ರಿಯಲ್ಲಿ ಗಗನಸಖಿಯಾಗಿ ಮತ್ತು ಇಂಟರ್ನ್ಯಾಷನಲ್ ಟ್ರೈನರ್ ಆಗಿ ಹತ್ತು ವರ್ಷಗಳ ಎಕ್ಸ್ಪೀರಿಯನ್ಸ್ ಇದೆ . ಸ್ವತಃ ಎರಡು ವರ್ಷಗಳ ಹಿಂದೆ ತಮ್ಮದೇ ಆದ ಟ್ರೈನಿಂಗ್ ಇನ್ಸ್ಟಿಟ್ಯೂಟ್ ನ್ನು ತೆರೆದಿದ್ದಾರೆ. ಗಗನಸಖಿಯಾಗಿ ಹಾಗೂ ವಿಮಾನ ಸಿಬ್ಬಂದಿ ಯಾಗಲು ಬೇಕಾದ ಎಲ್ಲ ತರಬೇತಿಯನ್ನು ನೀಡುತ್ತಿದ್ದಾರೆ .
ಕರ್ನಾಟಕದಲ್ಲಿರುವ ಯುವಜನರು ಈ ಏವಿಯೇಷನ್ ಇಂಡಸ್ಟ್ರಿಗೆ ಸೇರಲು ಹಿಂದೆ ಮುಂದೆ ನೋಡುತ್ತಾರೆ .ಆದರೆ ಈ ಕೆಲಸಗಳಿಗೆ ತುಂಬಾ ಸ್ಕೋಪ್ ಇರುವುದರಿಂದ ಉತ್ತರ ಭಾರತದ ಜನರು ಬಂದು ಇಲ್ಲಿ ಟ್ರೈನಿಂಗ್ ಪಡೆದು ಕೆಲಸಕ್ಕೆ ಸೇರುತ್ತಾರೆ .ಆದರೆ ನನ್ನ ಉದ್ದೇಶ ಕರ್ನಾಟಕದ ಜನರು ಕೂಡ ಈ ಎಮಿಷನ್ ಇಂಡಸ್ಟ್ರಿಯಲ್ಲಿ ಕೆಲಸಕ್ಕೆ ಸೇರಿಕೊಳ್ಳಬೇಕು ಇದರ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು ಎಂಬುದು .
1)ನಿಮಗೆ ಏವಿಯೇಷನ್ ಇನ್ಸ್ಟಿಟ್ಯೂಟ್ ಸ್ಟಾರ್ಟ್ ಮಾಡಬೇಕು ಎಂದು ಅನಿಸಿದ್ದು ಹೇಗೆ ?
ನಾನು ಎಂಟು ವರ್ಷ ಗಗನಸಖಿಯಾಗಿ ಕೆಲಸ ಮಾಡಿ ಮೂರು ವರ್ಷ ಅಬುಧಾಬಿಯಲ್ಲಿ ಇಂಟರ್ನ್ಯಾಷನಲ್ ಟ್ರೈನರ್ ಆಗಿ ಹಲವಾರು ದೇಶಗಳ ಯುವಕ ಯುವತಿಯರಿಗೆ ತರಬೇತಿ ನೀಡುತ್ತಿದ್ದೆ ನಂತರ ನನಗೆ ಯಾಕೆ ನಮ್ಮ ದೇಶದಲ್ಲಿ ನಮ್ಮ ರಾಜ್ಯದ ಜನರಿಗೆ ಈ ಈ ಮಟ್ಟಕ್ಕೆ ಬೆಳೆಯುತ್ತಿರುವ ಏವಿಯೇಷನ್ ಇಂಡಸ್ಟ್ರಿ ಬಗ್ಗೆ ತಿಳಿಸಿ ನಮ್ಮವರು ಕೂಡ ಇದರ ಅವಕಾಶ ಪಡೆದುಕೊಳ್ಳಬೇಕು ಅನಿಸಿತು ಆದ್ದರಿಂದ ಬೆಂಗಳೂರಿನ ವಿಜಯನಗರದಲ್ಲಿ ಇನ್ಸ್ಟಿಟ್ಯೂಟ್ ಆರಂಭಿಸಿದೆ .
2)ನಿಮ್ಮ ಇನ್ಸ್ಟಿಟ್ಯೂಟ್ ನಲ್ಲಿ ಏನೇನು ಕೋರ್ಸ್ ಗಳನ್ನು ಕಲಿಸುತ್ತಿರಿ?
ಅಡ್ವಾನ್ಸ್ ಡಿಪ್ಲೋಮಾ ಇನ್ ಏವಿಯೇಷನ್ ಅಂಡ್ ಹಾಸ್ಪಿಟಾಲಿಟಿ. ಇದರಲ್ಲಿ ಎಂಟು ಸಬ್ಜೆಕ್ಟ್ ಇರುತ್ತದೆ . ಇದರ ಜೊತೆಗೆ ಪರ್ಸನಾಲಿಟಿ ಇಂಪ್ರೂ ಮಾಡಿಕೊಳ್ಳುವುದು, ಮೇಕಪ್ ಮಾಡಿಕೊಳ್ಳುವುದು ,ಅವರ ಹೆಲ್ತ್ ಕೇರ್, ಫಸ್ಟ್ ಏಡ್ ,ಇಂಗ್ಲಿಷ್ ಇಂಪ್ರೂಮೆಂಟ್ ,ಹೆಲ್ದಿ ಡಯೆಟ್, ಫಾರಿನ್ ಲಾಂಗ್ವೇಜಸ್ ಹೇಳಿಕೊಡುವುದು ಇರುತ್ತದೆ .ಬಿಬಿಎ ಹಾಗೂ ಎಂಬಿಎ ತರಬೇತಿಗಳು ಕೂಡ ಇರುತ್ತವೆ
3)ನಿಮ್ಮ ಶಿಕ್ಷಕ ವೃಂದದ ಬಗ್ಗೆ ತಿಳಿಸಿ ?
ನಮ್ಮ ಇನ್ಸ್ಟಿಟ್ಯೂಟ್ ನಲ್ಲಿ ನಾನು ಕೂಡ ಸೇರಿದಂತೆ ಒಟ್ಟು ಐದು ಜನ ಟೀಚರ್ಸ್ ಇದ್ದಾರೆ .ಅದಲ್ಲದೆ ಡಯಟಿಷನ್, ಮೇಕಪ್ ಆರ್ಟಿಸ್ಟ್, ನ್ಯೂಟ್ರಿಷಿಯನ್, ಡಾಕ್ಟರ್ಸ್ ,ಫಿಟ್ನೆಸ್ ಇನ್ಸ್ಟ್ರಕ್ಟರ್, ಕೆರಿಯರ್ ಕೌನ್ಸಿಲರ್ ಹೀಗೆ ಎಲ್ಲರೂ ತರಬೇತಿ ನೀಡುತ್ತಾರೆ .
4)ಈ ಕೋರ್ಸ್ಗಳನ್ನು ಕಲಿತವರಿಗೆ ಅವಕಾಶಗಳು ಹೇಗೆ ಸಿಗುತ್ತವೆ ?
ಈಗ ಜಗತ್ತಿನ ಏರ್ಲೈನ್ನಲ್ಲಿ ಇಂಡಿಯಾ ಮೂರನೇ ಸ್ಥಾನದಲ್ಲಿದೆ .ಪ್ರಧಾನ ಮಂತ್ರಿ ಮೋದಿಯವರು UDAN(ಉಡೇ ದೇಶಿಕ ಆಮ್ ನಾಗರಿಕ್ )ಎಂಬ ಸ್ಕೀಮ್ ಅನ್ನು ಲಾಂಚ್ ಮಾಡಿರುವುದರಿಂದ ಭಾರತದಲ್ಲಿ ನೂರು ಹೊಸ ಏರ್ ಪೋರ್ಟ್ ಗಳು ಉದಾಹರಣೆಗೆ ಮೈಸೂರು ,ಬಳ್ಳಾರಿ, ಹೊಸೂರು … ಹೀಗೆ ಎಲ್ಲ ಕಡೆ ಶುರುವಾಗುತ್ತಿವೆ ಹಾಗಾಗಿ ಉದ್ಯೋಗಾವಕಾಶಗಳು ಕೂಡ ತುಂಬಾ ಇವೆ
5)ನಿಮ್ಮ ಕಡೆಯಿಂದ ಕೆಲಸ ಸಿಗುವ ಭರವಸೆ ಇದೆಯಾ ?
ನಮ್ಮಲ್ಲಿ ಈ ಕೋರ್ಸ್ ಕಲಿಯುವ ಪ್ರತಿಯೊಬ್ಬರಿಗೂ 100% ಉದ್ಯೋಗ ಅವಕಾಶ ಕೊಡಿಸುತ್ತೇವೆ. ಇಲ್ಲಿ ಕ್ಯಾಂಪಸ್ ಸೆಲೆಕ್ಷನ್ ಕೂಡ ನಡೆಯುತ್ತದೆ .
6)ಈ ಕೋರ್ಸ್ಗೆ ಸೇರಲು ವಿದ್ಯಾರ್ಹತೆ ಮತ್ತು ವಯಸ್ಸು ಎಷ್ಟಿರಬೇಕು ?
2nd puc ಎಕ್ಸಾಮ್ ಕೊಡುತ್ತಿರುವವರು ಹಾಗೂ ಮುಗಿಸುವವರು ಗ್ರಾಜುಯೇಟ್ಸ್ ಹಾಗೂ ವಯಸ್ಸು17 ರಿಂದ 27 ವರ್ಷದವರು ಜಾಯಿನ್ ಆಗಬಹುದು .ಹಾಗೆ ನಾವು ಕೊಡುವ ಎಂಟ್ರೆನ್ಸ್ ಟೆಸ್ಟ್ ನಲ್ಲಿ ಪಾಸ್ ಆಗಬೇಕು .
7)ಈಗ ನಿಮ್ಮ ಇನ್ಸ್ಟಿಟ್ಯೂಟ್ ನಲ್ಲಿ ಎಷ್ಟು ಜನ ವಿದ್ಯಾರ್ಥಿಗಳು ಕಲಿತಿದ್ದಾರೆ ?
ಈಗ ನಮ್ಮ ಇನ್ಸ್ಟಿಟ್ಯೂಟ್ ನಲ್ಲಿ ಒಟ್ಟು ಐನೂರು ಜನ ವಿದ್ಯಾರ್ಥಿಗಳು ಕೋರ್ಸ್ ಕಲಿತು ಹಲವಾರು ಏರ್ ಲೈನ್ಸ್ ನಲ್ಲಿ ಜಾಬ್ ಗೆ ಸೇರಿದ್ದಾರೆ .ಆಸಕ್ತಿ ಇರುವವರು ಸಂಪರ್ಕಿಸಿ .
ರೋಹಿಣಿ ರಾವ್
ವಿಜಯನಗರ ಬೆಂಗಳೂರು
9148569539.
080-41249539