ಐಟಿ ದಾಳಿ, ವಿಚಾರಣೆಗೆ ಯಶ್…!!

Published on

359 Views

ಕನ್ನಡ ಚಿತ್ರರಂಗದ ಮೇಲೆ ಮೊದಲ ಬಾರಿಗೆ ನಡೆದ ಐಟಿ ದಾಳಿಯಿಂದ ಸ್ಯಾಂಡಲ್ವುಡ್ ಮಂದಿ ಆಘಾತಕ್ಕೆ ಒಳಗಾಗಿದ್ದರು. ಸುದೀಪ್, ಶಿವಣ್ಣ, ಪುನೀತ್ ರಾಜ್‍ಕುಮಾರ್, ಯಶ್ ಹಾಗೂ ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್, ವಿಜಯ್ ಕಿರಗಂದೂರು, ಸಿಆರ್ ಮನೋಹರ್ ಮನೆಯ ಮೇಲೆ ಒಂದೇ ಸಮ್ಮನೆ ಐಟಿ ದಾಳಿ ಮಾಡಿ, ಅಧಿಕಾರಿಗಳು ತೆರಿಗೆಯ ಬಾಕಿಯನ್ನು ಪರಿಶೀಲನೆ ಮಾಡಿದ್ದಾರೆ. ತೆರಿಗೆ ಎಷ್ಟು ಬಾಕಿಯಿದೆ, ಬ್ಯಾಂಕ್ ಖಾತೆ, ಒಟ್ಟು ಆಸ್ತಿಪಾಸ್ತಿ ಗಳನ್ನು ಪರಿಶೀಲನೆ ಮಾಡಲಾಗಿತ್ತು. ಎಲ್ಲ ನಟರಿಗೂ ಐಟಿ ಕಛೇರಿಗೆ ಹಾಜರಾಗುವಂತೆ ನೋಟೀಸ್ ಕೂಡ ನೀಡಿದ್ದರು.

ಪುನೀತ್ ಹಾಗೂ ಶಿವಣ್ಣ ಹಾಜರಾಗಿದ್ದು, ಸುದೀಪ್ ಮತ್ತು ಯಶ್ ಗೆ ಸಮಯಕೊಡಲಾಗಿತ್ತು. ಚಿತ್ರೀಕರಣದ ನೆಪಯೊಡ್ಡಿ ಇವರು ವಿಚಾರಣೆ ಗೆ ಹಾಜರಾಗಿಲ್ಲ. ಯಶ್ ಚಿತ್ರೀಕರಣದಲ್ಲೂ ಭಾಗವಹಿಸದೆ, ವಿಚಾರಣೆ ಗೂ ಹಾಜರಾಗದೆ ಆಡಿಟರ್ ಕಛೇರಿಗೆ ಓಡಾಡುತ್ತಿದ್ದನ್ನು ಗಮನಿಸಿದ ಐಟಿ ಗುಪ್ತಚರ ಇಲಾಖೆಯವರು ನಂತರ ಎಲ್ಲ ಪ್ರಮುಖ ದಾಖಲೆಗಳು ಅಡಿಟರ್ ಮನೆಯಲ್ಲಿರುವ ಶಂಕೆ ವ್ಯಕ್ತಪಡಿಸಿ, ಆಡಿಟರ್ ಮನೆಗೆ ದಾಳಿ ಇಟ್ಟಾಗ, ಅಧಿಕಾರಿಗಳಿಗೆ ಕೆಲವು‌ ಕಾಗದ ಪತ್ರ ,ಪ್ರಮುಖ ದಾಖಲೆಗಳು ವಶಕ್ಕೆ ಸಿಕ್ಕಿದೆ. ಇದರಿಂದ ಯಶ್ ಗೆ ಇನ್ನೊಂದು ‌ಸಂಕಷ್ಟ ಎದುರಾಯಿತು.ನಂತರ‌ ಯಶ್ ವಿಚಾರಣೆಗೆ ತಾಯಿ ಜೊತೆ ಐಟಿ ಕಛೇರಿಗೆ ಆಗಮಿಸಿದ್ದರು.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com