ಈ ವಾರ ನಟಸಾರ್ವಭೌಮ ತೆರೆಗೆ ಆನ್ ಲೈನ್ ನಲ್ಲಿ” ಬುಕ್ಕಿಂಗ್ ಶುರು

Published on

431 Views

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಮತ್ತು ಪವನ್ ಒಡೆಯರ್
ಕಾಂಬಿನೇಷನ್ ನ ಬಹುನಿರೀಕ್ಷೀತ ನಟ ಸಾರ್ವಭೌಮ ಚಿತ್ರವು ಈ ವಾತ ತೆರೆಕಾಣುತ್ತಿದೆ. ಈ ಚಿತ್ರವನ್ನು ನೋಡಲು ಸಿನಿಅಭಿಮಾನಿಗಳು ಕಾತುರದಿಂದ ಕಾದಿದ್ದು ಟ್ರೈಲರ್ ಮೂಲಕ ಕುತೂಹಲ ಹುಟ್ಟಿಸಿದೆ.‌ ರಾಕ್ ಲೈನ್ ವಂಕಟೇಶ್ ಅವರು ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಡಿ.ಇಮಾನ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಟ್ರೈಲರ್ ಅನ್ನು ನೋಡಿದವರಿಗೆ ಇದು ಹಾರರ್ ಸಿನಿಮಾ ಇರಬಹುದು ಎಂದೂ ಕುತೂಹಲ ಹುಟ್ಟಿಸಿದೆ. ಪುನೀತ್ ಅವರಿಗೆ ಜೋಡಿಯಾಗಿ ರಚಿತಾ ರಾಮ್ ಹಾಗೂ ಅನುಪಮಾ ಪರಮೇಶ್ವರನ್ ನಟಿಸಿದ್ದಾರೆ.


ಈಗಾಗಲೇ ಈ ಚಿತ್ರವನ್ನು ನೋಡಲು ಅಭಿಮಾನಿಗಳು ಆನ್ ಲೈನ್ ನಲ್ಲಿ ಟಿಕೆಟ್ ಅನ್ನು ಮಾಡುತ್ತಿದ್ದಾರೆ. ರವಿಶಂಕರ್, ಚಿಕ್ಕಣ್ಣ, ಬಿ. ಸರೋಜಾದೇವಿ ಸೇರಿದಂತೆ ಬಹು ದೊಡ್ಡ ತಾರಾಬಳಗ ಚಿತ್ರದಲ್ಲಿ ನಟಿಸಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com