If Google was Indian Mom Bisibele Bath Web Series
ನಮ್ಮೆಲ್ಲರ ಜೀವನದಲ್ಲಿ ಅಮ್ಮ ಬಹು ಮುಖ್ಯ ಪಾತ್ರ ವಹಿಸುತ್ತಾಳೆ. ನಮ್ಮ ಜೀವನ ರೂಪಿಸುವುದರ ಜೊತೆಗೆ ನಮ್ಮ ಬೇಕು ಬೇಡಗಳನ್ನು ನಮಗಿಂತ ಚೆನ್ನಾಗಿ ಅರಿತವಳೆಂದರೆ ಅದು ತಾಯಿ ಮಾತ್ರ. ಮಕ್ಕಳು ಬೆಳಿತಾ ಬೆಳಿತಾ ತಪ್ಪು ದಾರಿ ಹಿಡಿದೇ ಇರಲಿ ಅನ್ನೋ ಕಾರಣಕ್ಕೆ ಅಮ್ಮ ತನ್ನ ಪ್ರೀತಿಯನ್ನು ಮರೆಮಾಚುತ್ತಾ ಯಾವಾಗಲೂ strict officer ತರನೇ ಇರ್ತಾಳೆ. ಕೆಲವೊಂದು ಬಾರಿ ಅಮ್ಮನ ಉಪದೇಶಗಳು ನಮಗೆಲ್ಲರಿಗೂ ಅತಿರೇಖವೆನಿಸಿದರೂ ಅದರ ಹಿಂದೆ ಆಕೆಗೆ ನಮ್ಮ ಮೇಲೆ ಇರುವ ಕಾಳಜಿ ಮಾತ್ರ ನಮಗೆ ಆ ಕ್ಷಣಕ್ಕೆ ಅರಿವಾಗಲ್ಲ. ಎಷ್ಟೋ ಬಾರಿ ಅರಿವಾಗೋ ಸಮಯಕ್ಕೆ ಕಾಲ ಮಿಂಚಿಹೋಗಿರುತ್ತದೆ. ‘ಗೂಗಲ್’ ಅಮ್ಮಂದಿರ ರೀತಿ ವರ್ತಿಸಿದರೆ ಹೇಗಿರುತ್ತದೆ ಎಂಬುದನ್ನು ನಮ್ಮ ಮೂರನೇ ಎಪಿಸೋಡ್ ನಲ್ಲಿ ತೋರಿಸೋಕೆ ಪ್ರಯತ್ನಿಸಿದ್ದೇವೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮೆಲ್ಲರ ಸಹಕಾರವಿರಲಿ.