ಮದುವೆ ಬೇಡವೆಂದ ಸಾಯಿಪಲ್ಲವಿ..!!!

Published on

350 Views

ಮಲಯಾಳಂ ‘ಪ್ರೇಮಂ’ ಚಿತ್ರದ ಮೂಲಕ ಸ್ಟಾರ್ ‌ನಟಿಯಾಗಿ ಗುರುತಿಸಿಕೊಂಡ ಚೆಲುವೆ ಸಾಯಿಪಲ್ಲವಿ. ಈಕೆ ಮುಟ್ಟಿದೆಲ್ಲವೂ ಚಿನ್ನ ಎಂಬಂತೆ ಸ್ಟಾರ್ ನಟರ ಜೊತೆ ಮಿಂಚುವ ಅವಕಾಶ ಗಿಟ್ಟಿಸಿಕೊಂಡ ಸಾಯಿಪಲ್ಲವಿ ‘ಫಿದಾ’ ಚಿತ್ರದ ಮೂಲಕ ತೆಲುಗು‌ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಅಲ್ಲಿಂದ ಬಹುಬೇಡಿಕೆಯನ್ನು ಪಡೆದ ಈಕೆ ನಂತರ ನಾನಿ ಅಭಿನಯದ ಎಂಸಿಎ, ಧನುಶ್ ಅಭಿನಯದ ‘ಮಾರಿ-2’ ಸಿನಿಮಾದಲ್ಲೂ ಅಭಿನಯಿಸಿ ಅಭಿಮಾನಿಗಳ ನಿದ್ದೆಗೆಡಿಸಿದ ಸಾಯಿಪಲ್ಲವಿ ಈಗ ಮಹತ್ವದ ನಿರ್ಧಾರವನ್ನು ನೀಡಿ ಶಾಕ್ ಕೊಟ್ಟಿದ್ದಾರೆ. 28 ವರ್ಷದ ಸಾಯಿಪಲ್ಲವಿಗೆ ನಿಮ್ಮ ಮದುವೆ ಯಾವಾಗ ಎಂಬ ಪ್ರಶ್ನೆ ಎಲ್ಲ ಕಡೆ ಎದುರಾಗುತ್ತಿತ್ತಂತೆ, ಈಗ ಇತಂಹ ಪ್ರಶ್ನೆಗೆ ‘ನಾನು ಮದುವೆ ಆಗುವುದಿಲ್ಲ’ ಎಂದು‌ ಹೇಳುವ ಮೂಲಕ ಫುಲ್ ಸ್ಟಾಪ್ ಇಟ್ಟಿದ್ದಾರೆ. ಅದ್ರೆ ಸಾಯಿಪಲ್ಲವಿ‌ ಮದುವೆ ಬೇಡವೆನ್ನಲೂ ಬಲವಾದ ಕಾರಣವಿದೆ ಎನ್ನುತ್ತ, ‘ನನ್ನ ಭವಿಷ್ಯವನ್ನು ನನ್ನ ಪೋಷಕರಿಗಾಗಿ ಮೀಸಲಿಡುತ್ತೇನೆ. ಅವರನ್ನು ಚೆನ್ನಾಗಿ ನೋಡಿಕೊಂಡು ಅವರ ಜೊತೆ ಕೊನೆಯವರೆಗೂ ಇರಲು ನಿರ್ಧರಿಸಿದ್ದೇನೆ. ನಾನು ಮದುವೆಯಾದ್ರೆ ನನ್ನ ಜವಾಬ್ದಾರಿಯನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಮದುವೆಯಾಗುವ ಯಾವ ಯೋಚನೆಯೂ ಇಲ್ಲ ಎಂದು ಶಾಕ್ ನೀಡಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com