`ಹೈಪರ್’ ಚಿತ್ರದ ಚಿತ್ರೀಕರಣ ಮುಕ್ತಾಯ
ಎಂ.ಬಿಗ್ ಪಿಕ್ಚರ್ಸ್ ಲಾಂಛನದಲ್ಲಿ ಎಂ.ಕಾರ್ತಿಕ್ ಅವರು ನಿರ್ಮಿಸುತ್ತಿರುವ `ಹೈಪರ್` ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರಕ್ಕೆ ಜಮ್ಮು, ಕಾಶ್ಮೀರ, ಮಡಿಕೇರಿಯಲ್ಲಿ ಹಾಡುಗಳ ಚಿತ್ರೀಕರಣ ಹಾಗೂ ಬೆಂಗಳೂರು ಮಡಿಕೇರಿಯಲ್ಲಿ ಮಾತಿನ ಭಾಗದ ಚಿತ್ರೀಕರಣ ನಡೆದಿದೆ.
ಅರ್ಜುನ್ ಆರ್ಯ ಕಥೆ ಬರೆದಿರುವ ಈ ಚಿತ್ರವನ್ನು ಗಣೇಶ್ ವಿನಾಯಕ್ ನಿರ್ದೇಶಿಸಿದ್ದಾರೆ. ತಮಿಳಿನಲ್ಲಿ ಮೂರು ಚಿತ್ರಗಳನ್ನು ನಿರ್ದೆಶಿಸಿರುವ ಗಣೇಶ್ ಅವರಿಗೆ ಕನ್ನಡದಲ್ಲಿಇದು ಮೊದಲ ಚಿತ್ರ. ಕಾಲೇಜ್ ಲವ್ ಸ್ಟೊರಿ ಹಾಗೂ ಅಪ್ಪ- ಮಗಳ ಭಾಂಧವ್ಯದ ಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ ಐದು ಹಾಡುಗಳಿದ್ದು, ಡಿ.ಹಿಮನ್ ಸಂಗೀತ ನೀಡಿದ್ದಾರೆ. ಶಕ್ತಿವೇಲ್ ಅವರ ಛಾಯಾಗ್ರಹಣ, ರೂಬನ್ ಸಂಕಲನ, ಥ್ರಿಲ್ಲರ್ ಮಂಜು, ಮಾಸ್ ಮಾದ, ವಿಕ್ರಂ, ಹೈಪರ್ ಸೂರಿ ಸಾಹಸ ನಿರ್ದೇಶನ, ಕÀಲೈ ನೃತ್ಯ ನಿರ್ದೇಶನ ಹಾಗೂ ಕನಕ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಎ.ಪಿ.ಅರ್ಜುನ್, ಬಹದ್ದೂರ್ ಚೇತನ್, ದಿಲ್‍ವಾಲ ಅನಿಲ್ ಹಾಗೂ ಗೌಸ್‍ಫಿûರ್ ಬರೆದಿದ್ದಾರೆ. ಅರ್ಜುನ್ ಆರ್ಯ, ಶೀಲ, ರಂಗಾಯಣ ರಘು, ಶೊಭ್‍ರಾಜ್, ಬುಲೆಟ್ ಪ್ರಕಾಶ್, ಅಚ್ಯುತಕುಮಾರ್, ಶ್ರೀನಿವಾಸಪ್ರಭು, ಬ್ಯಾಂಕ್ ಜನಾರ್ದನ್, ವೀಣಾಸುಂದರ್, ಲಕ್ಷ್ಮೀಸಿದ್ದಯ್ಯ, ಉಮೇಶ್ ಪುಂಗ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.