ಕೋಳಿ ಕರಿ ಮಾಡೋದು ಹೇಗೆ?; ರಾಮ್​ಚರಣ್​ ಪತ್ನಿಗೆ ರಶ್ಮಿಕಾ ಟೀಚಿಂಗ್​!

Published on

399 Views

ತೆಲುಗಿನ ಖ್ಯಾತ ನಟ ಚಿರಂಜೀವಿ ಅವರ ಸೊಸೆ, ರಾಮ್​ಚರಣ್ ತೇಜ ಅವರ ಪತ್ನಿ ಉಪಾಸನಾ ಕಮಿನೇನಿ ಕೊನಿಡೇಲಾ ಅವರೀಗ ಆನ್​ಲೈನ್​ನಲ್ಲಿ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ಅವರ ಆ ಸಾಹಸಕ್ಕೆ ಸದ್ಯ ಟ್ರೆಂಡಿಂಗ್​ನಲ್ಲಿರುವ ಕನ್ನಡತಿ, ಸೌತ್ ಸೆನ್ಸೆಷನಲ್ ರಶ್ಮಿಕಾ ಮಂದಣ್ಣ ಕೈ ಜೋಡಿಸಿದ್ದಾರೆ. ಅಷ್ಟೇ ಅಲ್ಲ ರಾಮ್​ಚರಣ್​ ಪತ್ನಿಗೆ ಕೂರ್ಗಿ ಶೈಲಿಯ ಕೋಳಿ ಕರಿ ಮಾಡುವುದು ಹೇಗೆ ಎಂಬುದನ್ನು ಹೇಳಿಕೊಟ್ಟಿದ್ದಾರೆ.

ಆರೋಗ್ಯ, ಲೈಫ್​ಸ್ಟೈಲ್, ಮಾನಸಿಕ ಮತ್ತು ದೈಹಿಕ ಆರೋಗ್ಯ, ಪ್ರಸ್ತುತ ಟ್ರೆಂಡಿಂಗ್ ವಿಚಾರಗಳನ್ನು ಯೂಆರ್​ಲೈಫ್​ ಮೂಲಕ ಉಪಾಸನಾ ಹೇಳಹೊರಟಿದ್ದಾರೆ. URLife.co.in. ಅನ್ನೋ ನೂತನ ವೆಬ್​ಸೈಟ್​ ತೆರೆದಿದ್ದು, ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಉಪಾಸನಾ ಉಸ್ತುವಾರಿ ವಹಿಸಿಕೊಂಡರೆ, ಅತಿಥಿ ಸಂಪಾದಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ.
URLife.co.in. ಎಂಬುದು ಒಂದು ಆರೋಗ್ಯಕರ ವೇದಿಕೆ. ಇಲ್ಲಿ ಆಯ್ದ ಕೆಲ ಕ್ಷೇತ್ರಗಳ ನುರಿತ ಪರಣಿತರು, ವೈದ್ಯರು ಸದ್ಯದ ಲೈಫ್​​ಸ್ಟೈಲ್, ತಂತ್ರಜ್ಷಾನದ ಬಗ್ಗೆ ಈ ವೇದಿಕೆ ಮೂಲಕ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ. ಓದುಗರಿಗೆ ಅತ್ಯುತ್ತಮವಾದ ಡಯಟ್​ ಟಿಪ್ಸ್, ನುರಿತವರಿಂದ ಉಪಯುಕ್ತ ಮಾಹಿತಿ, ಉಚಿತ ತರಗತಿಗಳು, ವಿಡಿಯೋ ಮಾಹಿತಿ, ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಯೂ ಬೆರಳ ತುದಿಯಲ್ಲಿಯೇ URLife.co.in. ನಲ್ಲಿ ಲಭ್ಯವಾಗಲಿದೆ.

ಈ ವಿಶೇಷಗಳ ಗುಚ್ಛದ URLife.co.in. ಗೆ ಗೆಸ್ಟ್​ ಎಡಿಟರ್​ ಆಗಿ ರಶ್ಮಿಕಾ ಮಂದಣ್ಣ ಭಾಗವಹಿಸಿ ಉಪಾಸನಾಗೆ ಹೆಲ್ತಿ ಫುಡ್​ ರೆಡಿ ಮಾಡುವ ಬಗೆಯನ್ನು ಹೇಳಿಕೊಟ್ಟಿದ್ದಾರೆ. ಮಡಿಕೇರಿ ಶೈಲಿಯಲ್ಲಿ ಕೋಳಿ ಪುಟ್ಟು ಕರಿಯನ್ನು ಸಿದ್ಧ ಮಾಡಿ ಬಡಿಸಿದ್ದಾರೆ. ಅಷ್ಟೇ ಅಲ್ಲ, ಪ್ರತಿ ದಿನ ರಾತ್ರಿ ಎರಡು ಪೆಗ್​ ವೈನ್​ ಕುಡಿದು ಮಲುಗುವುದಾಗಿಯೂ ರಶ್ಮಿಕಾ ಹೇಳಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com