ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಸೆನ್ಸಾರ್

Published on

426 Views

ಶ್ರೀ ಕನಕ ದಾಸರ ರಚನೆಯ ಹಾಡಿನ ಸಾಲನ್ನು ಶೀರ್ಷಿಕೆ ಆಗಿ ಇಟ್ಟುಕೊಂಡಿರುವ `ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಕನ್ನಡ ಚಿತ್ರ ಸೆನ್ಸಾರ್ ಮಂಡಳಿಯಿಂದ ಮೆಚ್ಚುಗೆ ಪಡೆಯುತ್ತಾ ಕ್ಲೀನ್ ಯು ಅರ್ಹತಾ ಪತ್ರವನ್ನು ಪಡೆದುಕೊಂಡಿದೆ.

ಕನ್ನಡ ಚಿತ್ರ ರಂಗದ ಸದಾ ಸುಂದರ ನಟ ಅನಂತ್ ನಾಗ್ ಹಾಗೂ ರಾಧಿಕಾ ಚೇತನ್ ಅಭಿನಯದ ಒಂದು ವಿಶಿಷ್ಟ ಕಥಾ ಹಂದರ ಹೊಂದಿರುವ ಚಿತ್ರದ ಟ್ರೈಲರ್ ದುಬೈ ದೇಶದ ಇಂಡಿಯನ್ ಸ್ಕೂಲ್ ಶೇಕ್ ರಾಶೀದ್ ಸಭಾಂಗಣದಲ್ಲಿ ಇತ್ತೀಚಿಗೆ ಬಿಡುಗಡೆ ಆಗಿದೆ. ಈ ಚಿತ್ರದ ಕೆಲವು ಸನ್ನಿವೇಶಗಳು ಸಹ ಬುರ್ಜ್ ಖಲೀಫಾ ಕಟ್ಟಡದಲ್ಲಿ ಸೆರೆ ಹಿಡಿಯಲಾದ ಮೊದಲ ಕನ್ನಡ ಚಿತ್ರ, ಅನಂತ್ ನಾಗ್ ಅವರ ಪಾತ್ರ ಒಂದು ಪ್ರಶಾಂತ ಸಮುದ್ರ ಇದ್ದ ಹಾಗೆ. ಯುವ ಜನತೆಯನ್ನು ಪ್ರತಿನಿದಿಸುವವರು ನಾಯಕಿ ರಾಧಿಕಾ ಚೇತನ್.

ರಾಜ್ಯ ಪ್ರಶಸ್ತಿ ವಿಜೇತ ಕಬಡ್ಡಿ ನಿರ್ದೇಶಕ ನರೇಂದ್ರ ಬಾಬು ಅವರ ಕಥೆ, ಚಿತ್ರಕಥೆ, ಸಂಭಾಷಣೆ, ಗೀತ ಸಾಹಿತ್ಯ ಇರುವ ಈ ಚಿತ್ರಕ್ಕೆ ಪಿ ಕೆ ಎಚ್ ದಾಸ್ ಛಾಯಾಗ್ರಹಣ, ಹಿಂದೂಸ್ಥಾನಿ ಶಾಸ್ಟ್ರೀಯ ಸಂಗೀತ ಹಿನ್ನಲೆ ಇರುವ ರಾಮಚಂದ್ರ ಹಡಪದ ಸಂಗೀತ ಒದಗಿಸಿದ್ದಾರೆ.

ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎರಡು ಕಾಲ ಘಟ್ಟದಲ್ಲಿ ನಡೆಯುವ ಈ ಚಿತ್ರದ ನಿರ್ಮಾಪಕರುಗಳು ಸುದರ್ಶನ್, ರಾಮಮೂರ್ತಿ ಹಾಗೂ ದುಬೈ ಅಲ್ಲಿ ವ್ಯಾಪಾರಿ ಆಗಿರುವ ಹರೀಶ್ ಷೆರೀಗರ್. ವಿನಯ್ ಕುಮಾರ್ ಕಾರ್ಯಕಾರಿ ನಿರ್ಮಾಪಕರು.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com