ಹಿಂದಿ‌ ಡಬ್ಬಿಂಗ್ ಗೆ ಬಹುಬೇಡಿಕೆ ಪಡೆದ ‘ರಾಬರ್ಟ್’…

Published on

371 Views

ತರುಣ್ ಸುಧೀರ್ ನಿರ್ದೇಶನದ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ಹಿಂದಿ ಡಬ್ಬಿಂಗ್ ಹಕ್ಕುಗಳಿಗೆ ಬೇಡಿಕೆ ಬಂದಿದ್ದು, ದರ್ಶನ್ ಅಭಿನಯದ ಸಿನಿಮಾಗಳಿಗೆ ಹಿಂದಿ ಡಬ್ಬಿಂಗ್ ಗೆ ಬಹು‌ ಬೇಡಿಕೆ ಇದ್ದು, “ಹಿಂದಿ ಡಬ್ಬಿಂಗ್ ಹಕ್ಕಿಗೆ ಖರೀದಿಸಲು ನಮಗೆ ಬಹುದೊಡ್ಡ ಆಫರ್ ಬಂದಿದೆ. ಅದರೆ ನಾನಿನ್ನೂ ಅಂತಿಮ ತೀರ್ಮಾನ ಮಾಡಿಲ್ಲ” ಎಂದಿದ್ದಾರೆ ನಿರ್ಮಾಪಕ ಉಮಾಪತಿ ಎಸ್ ಗೌಡ. ಎಮೋಷನ್ ಹಾಗೂ ಫ್ಯಾಮಿಲಿ ಡ್ರಾಮಾ ಅಂಶಗಳನ್ನು ಹೊಂದಿದ್ದು, ಆಕ್ಷನ್ ಎಂಟರ್ಟೈನರ್ ಸಿನಿಮಾ ಇದಾಗಿದ್ದು, ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ ಜಗಪತಿ ಬಾಬು, ವಿನೋದ್ ಪ್ರಭಾಕರ್, ಸೋನಾಲ್ ಮಾಂಟೆರೋ, ಶಿವರಾಜ್ ಕೆ ಆರ್ ಪೇಟೆ, ಚಿಕ್ಕಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆಶಾ ಭಟ್ ನಾಯಕಿಯಾಗಿದ್ದಾರೆ.

ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು, ಏಪ್ರಿಲ್ 9 ರಂದು ತೆರೆಕಾಣಬೇಕಿದ್ದ ‘ರಾಬರ್ಟ್’ ಕೊರೋನಾದಿಂದಾಗಿ ಬಿಡುಗಡೆಯಾಗಲಿಲ್ಲ. ಈಗ ಕ್ರಿಸ್ಮಸ್ ಗೆ ರಿಲೀಸ್ ಮಾಡುವುದಾಗಿ ಹೇಳಿದ ಚಿತ್ರತಂಡ ಈಗ ಈ ವರ್ಷ ಸಿನಿಮಾ ಬಿಡುಗಡೆ ಮಾಡುವುದಿಲ್ಲವೆಂದು ಹೇಳಿದ್ದಾರೆ. ಇದ್ದರಿಂದ ದರ್ಶನ್ ಅಭಿಮಾನಿಗಳಿಗೆ‌ ನಿರಾಸೆ ಆಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ‌ಪ್ರೇಕ್ಷಕರು ಥಿಯೇಟರ್‌ ಗೆ ಬರಲು ಶುರು ಮಾಡಿದಾಗ ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಿದೆ ಚಿತ್ರತಂಡ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com