ಹೇಳು ಗೆಳತಿ – ಕನ್ನಡಿಗರ ಮನಗೆದ್ದ ರಕ್ಷಿತ್ ಶೆಟ್ಟಿ ನಿರ್ಮಾಣದ ಇಬ್ಬನಿ ತಬ್ಬಿದ ಇಳೆಯಲಿ ಚಿತ್ರದ ಹಾಡು, ಕೇಳಿ ಆನಂದಿಸಿ

Published on

1121 Views

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಒಡೆತನದ ಪರಮ್ವಃ ಸ್ಟುಡಿಯೋಸ್ ನಿರ್ಮಾಣದ ಬಹುನಿರೀಕ್ಷಿತ ಇಬ್ಬನಿ ತಬ್ಬಿದ ಇಳೆಯಲಿ ಚಿತ್ರದ ಸುಂದರ ಹಾಡು ‘ಹೇಳು ಗೆಳತಿ’ ರಿಲೀಸ್ ಆಗಿದೆ.

ನಾಗಾರ್ಜುನ್ ಶರ್ಮಾ ಅವರ ಸುಂದರ ಸಾಹಿತ್ಯ, ಗಗನ್ ಬುಡೇರಿಯಾ ಅವರ ಮಧುರ ಸಂಗೀತ ಮತ್ತು ಚರಣ್ ರಾಜ್ ಅವರ ಸುಂದರ ಧ್ವನಿಯ ಮೂಲಕ ಈಗಾಗಲೇ ಸಂಗೀತಪ್ರಿಯರಿಗೆ ಹಾಡು ಇಷ್ಟವಾಗಿದ್ದು, ಇತ್ತೀಚೆಗೆ ಇಂತಹ ಅದ್ಭುತ ಸಾಹಿತ್ಯ ಇರುವ ಹಾಡುಗಳನ್ನು ಕೇಳಿಯೇ ಇರಲಿಲ್ಲ ಎಂದು ಕಮೆಂಟ್ ಮಾಡುತ್ತಿದ್ದಾರೆ.

ಇನ್ನು ಈ ಇಬ್ಬನಿ ತಬ್ಬಿದ ಇಳೆಯಲಿ ಚಿತ್ರ ಆಗಸ್ಟ್ 2 ರಂದು ರಿಲೀಸ್ ಆಗಲಿದ್ದು, ಚಿತ್ರದ ಮುಖ್ಯಭೂಮಿಕೆಯಲ್ಲಿ ಪಂಚತಂತ್ರ ಖ್ಯಾತಿಯ ವಿಹಾನ್ ಐದು ವರ್ಷಗಳ ಬಳಿಕ ಬಣ್ಣ ಹಚ್ಚಿದ್ದಾರೆ. ನಾಯಕಿಯಾಗಿ ಅಂಕಿತಾ ಅಮರ್ ಹಾಗೂ ಪೋಷಕ ಪಾತ್ರಗಳಲ್ಲಿ ಮಯೂರಿ ನಟರಾಜ್, ಗಿರಿಜಾ ಶೆಟ್ಟರ್ ಮುಂತಾದವರಿದ್ದು, ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶಿಸಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com