“ಹೆಜ್ಜಾರು” – ಕನ್ನಡದ ಮೊದಲ ಸಮಾನಾಂತರ ಚಲನಚಿತ್ರದ ವಿಶೇಷತೆ ಇಲ್ಲಿದೆ
ಕನ್ನಡದ ಮೊದಲ ಸಮಾನಾಂತರ (Parallel universe) ಚಲನಚಿತ್ರ ಎಂಬ ಹೆಗ್ಗಳಿಕೆಗೆ “ಹೆಜ್ಜಾರು” ಸಿನಿಮಾ ಪಾತ್ರವಾಗಿದೆ. ಈ ಚಲನಚಿತ್ರ ಸ್ಯಾಂಡಲ್ ವುಡ್ ನಲ್ಲಿ ಒಂದು ಹೊಸ ಪ್ರಯತ್ನ ಹಾಗೂ ಹಲವಾರು ಪ್ರತಿಭೆಗಳಿಂದ ಕೂಡಿದೆ.
ಈ ಚಲನಚಿತ್ರವನ್ನು ಚೊಚ್ಚಲ ನಟ ಹರ್ಷಪ್ರಿಯಾ ರವರು ನಿರ್ದೇಶಿಸಿದ್ದಾರೆ. ಹೆಜ್ಜಾರು ಚಿತ್ರದಲ್ಲಿ ಭಗತ್ ಆಳ್ವ ನಾಯಕರಾಗಿ ಹಾಗೂ ಶ್ವೇತಾ ಲಿಯೋನಿಲ್ಲಾ ಡಿಸೋಜಾರವರು ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ, ನವೀನ್ ಕೃಷ್ಣ, ಮುತ್ತುರಾಜು, ಅರುಣಾ ಬಾಲರಾಜ್, ವಿನೋದ್ ಭಾರತಿ ಹಾಗೂ ಇನ್ನೂ ಅನೇಕ ಸ್ಯಾಂಡಲ್ ವುಡ್ ನ ತಾರಾಗಣವಿದೆ.
ಹೆಜ್ಜಾರು ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿರವರು ಸಂಗೀತವನ್ನು ನೀಡಿದ್ದಾರೆ ಹಾಗೂ ಅಮರ್ ಗೌಡರವರ ಛಾಯಗ್ರಹಣವಿದೆ. ಚಿತ್ರವನ್ನು ಗಗನ ಎಂಟರ್ ಪ್ರೈಸಸ್ ಬ್ಯಾನರ್ ಅಡಿಯಲ್ಲಿ ವಿಮಲ ಎನ್ ರವರು ನಿರ್ಮಾಣ ಮಾಡಿದ್ದಾರೆ.
ಹೆಜ್ಜಾರು ಚಿತ್ರವು ಸಮಾನಾಂತರ ಜೀವನದ ಚಲನಚಿತ್ರವಾಗಿದ್ದು, ಚಿತ್ರವು ಇಬ್ಬರು ವ್ಯಕ್ತಿಗಳ ಸುತ್ತ ಸುತ್ತುತ್ತದೆ ಎಂದು ಚಿತ್ರತಂಡ ಹಂಚಿಕೊಂಡಿದೆ. ಹೆಜ್ಜಾರು ಚಿತ್ರ ಕುತೂಹಲಕಾರಿ ಹಾಗೂ ದ್ವಂದ್ವತೆಯಿಂದ ಕೂಡಿದ ಚಿತ್ರವಾಗಿದ್ದು, ಪ್ರೇಕ್ಷಕರಲ್ಲಿ ಬಹಳ ಕುತೂಹಲವನ್ನು ಹೆಚ್ಚಿಸುತ್ತದೆ.
ಹೆಜ್ಜಾರು ಚಿತ್ರದ ಟೀಸರ್ ಜೂನ್ 11 ರಂದು ಬಿಡುಗಡೆಯಾಗಿದ್ದು, ಚಿತ್ರದ ಟೀಸರ್ ಅನ್ನು 400 ಕ್ಕೂ ಹೆಚ್ಚು ಕಲಾವಿದರಿಂದ ಬಿಡುಗಡೆ ಮಾಡಲಾಗಿದೆ ಹಾಗೂ ಇದು 400 ಕ್ಕೂ ಹೆಚ್ಚು ಕಲಾವಿದರಿಂದ ಟೀಸರ್ ಅನ್ನು ಬಿಡುಗಡೆಗೊಳಿಸಿದ ಕನ್ನಡದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಚಿತ್ರವನ್ನು ಜುಲೈ 19 ರಂದು ಚತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ಘೋಷಿಸಿದೆ.
ಚಲನಚಿತ್ರಗಳ ಕುರಿತ ಹೆಚ್ಚಿನ ಮಾಹಿತಿಗಾಗಿ https://flixoye.com ನ್ನು ಫಾಲೋ ಮಾಡಿ.