ಸದ್ಯದಲ್ಲೇ ತೆರೆಗೆ `ಹೆಬ್ಬೆಟ್ ರಾಮಕ್ಕ’
ಸದ್ಯದಲ್ಲೇ ತೆರೆಗೆ `ಹೆಬ್ಬೆಟ್ ರಾಮಕ್ಕ’
ಸವಿರಾಜ್ ಸಿನಿಮಾಸ್ ಬ್ಯಾನರ್‍ಅಡಿಯಲ್ಲಿ ನಿರ್ಮಾಣವಾಗಿರುವ `ಹೆಬ್ಬೆಟ್‍ರಾಮಕ್ಕ’ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.
`ನಾನು ಗಾಂದಿ`ü ಸೇರಿದಂತೆ ಬಹುತೇಕ ಮಕ್ಕಳ ಚಿತ್ರಗಳನ್ನೇ ನಿರ್ದೇಶಿಸಿದ್ದ ಎನ್.ಆರ್.ನಂಜುಂಡೇಗೌಡ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಬೆಂಗಳುರು ಹಾಗೂ ಚೆನ್ನಪಟ್ಟಣ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಎಸ್.ಎ.ಪುಟ್ಟರಾಜು ಈ ಚಿತ್ರವನ್ನು ನಿರ್ಮಿಸಿದ್ದಾರೆ.
ನಂಜುಂಡೇಗೌಡ ಅವರ ಕಥೆ, ಚಿತ್ರಕಥೆ, ನಿರ್ದೇಶನ ಹಾಗೂ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಸಂಯೋಜನೆ, ಬಿ.ಸತೀಶ್ ಅವರ ಛಾಯಾಗ್ರಹಣ, ಬಸವರಾಜ್‍ಅರಸ್ ಅವರ ಸಂಕಲನ, ಎಸ್.ವಿ.ಸಿದ್ದರಾಮಯ್ಯ ಅವರ ಸಂಭಾಷಣೆ, ಕನಕರಾಜು ಅವರ ಕಲೆ, ಮೂರ್ತಿ ಅವರ ನಿರ್ಮಾಣ ನಿರ್ವಹಣೆ, ನಾಗೇಶ್‍ರ ಸಹನಿರ್ದೇಶನವಿದ್ದು, ರಾಮಕ್ಕನಾಗಿ ಹಿರಿಯನಟಿ ತಾರಾ ಅಭಿನಯಿಸಿದ್ದಾರೆ. ದೇವರಾಜ್, ಹನುಮಂತೇಗೌಡ್ರು, ನಾಗರಾಜಮೂರ್ತಿ, ಜಗದೀಶ್‍ಜಾಲ, ಮೈಮ ನಂಜುಂಡ, ಸಿಂಧು ಕಾನೇನಹಳ್ಳಿ ಈ ಚಿತ್ರದ ಪ್ರಮುಖ ತಾರಾಬಳಗದಲ್ಲಿ ಕಾಣಿಸಿಕೊಂಡಿದ್ದಾರೆ