ರಂಗಭೂಮಿ ಪ್ರತಿಭೆಗಳ ಸೂಜಿದಾರದಲ್ಲಿ ಹರಿಪ್ರಿಯಾ
ನೀರ್‍ದೋಸೆ ಬೆಡಗಿ ಹರಿಪ್ರಿಯಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಚಿತ್ರ `ಸೂಜಿದಾರ’ ಸದ್ಯದಲ್ಲೇ ತೆರೆಗೆ ಬರಲು ಅಣಿಯಾಗಿದೆ. ರಂಗಭೂಮಿಯಲ್ಲಿ ಸಾಕಷ್ಟು ಕೃಷಿ ಮಾಡಿರುವ ಮೌನೇಶ್ ಬಡಿಗೇರ್, ಇಂದ್ರಕುಮಾರ್ ಅವರ ಸಣ್ಣ ಕಥೆಯೊಂದನ್ನಿಟ್ಟುಕೊಂಡು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. 2 ವರ್ಷಗಳ ಹಿಂದೆ ಈ ಕಥೆಯನ್ನು ಓದಿದ ಮೌನೇಶ್, ಕೂಡಲೇ ಇಂದ್ರಕುಮಾರ್‍ಗೆ ಫೆÇೀನಾಯಿಸಿ ಈ ಕಥೆಯನ್ನು ಸಿನಿಮಾ ಮಾಡೋದಾಗಿ ಹೇಳಿಕೊಂಡಿದ್ದರಂತೆ. ಅದೀಗ ಕೈಗೂಡಿ ತೆರೆಗೆ ಬರುವ ಸನ್ನಾಹದಲ್ಲಿದೆ.
ಅಭಿಜಿತ್ ಕೋಟೆಗಾರ್ ಉಡುಪಿ ಮತ್ತು ಸಚ್ಚೀಂದ್ರ ನಾಯಕ್ ಬೆಳ್ತಂಗಡಿ ಸೇರಿ ನಿರ್ಮಿಸಿರುವ ಈ ಚಿತ್ರದ ಮೂಲಕ ಯಶ್ ಶೆಟ್ಟಿ ಎಂಬ ಹೊಸ ಪ್ರತಿಭೆ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಸುಚೇಂದ್ರ ಪ್ರಸಾದ್, ಅಚ್ಯುತಕುಮಾರ್, ಚೈತ್ರಾ ಹರೀಶ್, ನಾಗರಾಜ್ ಪತ್ತಾರ್ ಮುಂತಾದವರು ಉಳಿದ ಪಾತ್ರಗಳಲ್ಲಿ ನಟಿಸಿದ್ದಾರೆ. ಅಶೋಕ್ ರಾಮನ್ ಅವರ ಛಾಯಾಗ್ರಹಣವಿರುವ ಈ ಚಿತ್ರ ಇದೀಗ ಬಿಡುಗಡೆಯ ತಯಾರಿಯಲ್ಲಿದೆ. ರಂಗಭೂಮಿ ಮತ್ತು ಸಾಹಿತ್ಯದ ಹಿನ್ನೆಲೆ ಇರುವವರು ಸಿನಿಮಾ ಮಾಡಲು ಹೊರಟಾಗ ಸಹಜವಾಗಿಯೇ ಕುತೂಹಲವಿರುತ್ತದೆ. ಅಂಥಾದ್ದೇ ನಿರೀಕ್ಷೆಗೆ ಕಾರಣವಾಗಿರೋ `ಸೂಜಿದಾರ’ ಚಿತ್ರದ ಐದು ಹಾಡುಗಳಿಗೆ ಭಿನ್ನಷಡ್ಜ ಸಂಗೀತ ಸಂಯೋಜನೆ ಮಾಡಿದ್ದಾರೆ.
ಒಂದಷ್ಟು ಸ್ಕ್ರಿಪ್ಟ್‍ವರ್ಕ್ ಕೆಲಸ ಮಾಡುತ್ತ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಮೌನೇಶ್ ಬಡಿಗೇರ್ ಮೊದಲ ಪ್ರಯತ್ನದಲ್ಲಿಯೇ ಒಳ್ಳೆಯ ಸಿನಿಮಾ ಮಾಡಿದ್ದಾರೆ. ಈ ಚಿತ್ರವು ಪ್ರೇಕ್ಷಕರ ವಲಯದಲ್ಲೊಂದು ಚರ್ಚೆ ಹುಟ್ಟು ಹಾಕಿದೆ. ಈ ಚಿತ್ರದಲ್ಲಿ ಹರಿಪ್ರಿಯಾ ಮೊದಲಬರಿಗೆ ಉತ್ತರ ಕರ್ನಾಟಕ ಶೈಲಿಯಲ್ಲಿ ಪಾರಂಪರಿಕ ಉಡುಗೆಯಲ್ಲಿ ಗಮನ ಸೆಳೆದಿದ್ದಾರೆ. ಸೂಜಿದಾರ ಚಿತ್ರದ ಪೋಸ್ಟರ್‍ಗಳೇ ಸಿನಿಮಾದ ಬಗ್ಗೆ ಹೆಚ್ಚಿನ ಕ್ಯೂರಿಯಾಸಿಟಿ ಹುಟ್ಟುಹಾಕುವಂತಿದೆ. ಕನ್ನಡ ಚಿತ್ರರಂಗದಲ್ಲಿ ಮೈಲಿಗಲ್ಲಾಗುವಂಥಾದ್ದೊಂದು ಸಿನಿಮಾ ಮಾಡಬೇಕೆಂಬ ಕನಸು ಹೊಂದಿದ್ದ ಅಭಿಜಿತ್ ಕೋಟೆಕಾರ್ ಮತ್ತು ಸುಚೀಂದ್ರನಾಥ ನಾಯಕ್ ಎಂಬ ಇಬ್ಬರು ನಿರ್ಮಾಪಕರು ಸೂಜಿದಾರ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.